Monday, December 11, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ಬೈಕ್ ಅಪಘಾತದಲ್ಲಿ ಯೋಧನ ಸಾವು; ಪೊಲೀಸರ ಬಳಿ ಹೆತ್ತವರು ಕೇಳಿದ್ದು ಏನು?

ಚಿಕ್ಕಮಗಳೂರು: ಬೈಕ್ ಅಪಘಾತದಲ್ಲಿ ಯೋಧನ ಸಾವು; ಪೊಲೀಸರ ಬಳಿ ಹೆತ್ತವರು ಕೇಳಿದ್ದು ಏನು?

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬೈಕ್ ಅಪಘಾತದಲ್ಲಿ ಯೋಧ ಮೃತಪಟ್ಟಿರುವ ಘಟನೆ ಬುಧವಾರ ಬೆಳಗಿನಜಾವ ರಾಷ್ಟ್ರೀಯ ಹೆದ್ದಾರಿ 75ರ ಹೇಮಾವತಿ ಕ್ರಾಸ್ ಬಳಿ ನಡೆದಿತ್ತು.

ಇದನ್ನೂ ಓದಿ; ಹಿಟ್‌ ಅಂಡ್‌ ರನ್‌; ತಪ್ಪಿದ ಭಾರಿ ಅನಾಹುತ

ಇದನ್ನೂ ಓದಿ; ವಿದ್ಯುತ್‌ ತಂತಿ ತಗುಲಿ ಕಾಡಾನೆ ಸಾವು

ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲ್ಲೂಕಿನ ಜೈಪುರ ಗ್ರಾಮದ ದೀಪಕ್ (31) ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದು, ಬೆಂಗಳೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹೇಮಾವತಿ ಕ್ರಾಸ್ ಬಳಿ ಬೈಕ್ ಅಪಘತದಲ್ಲಿ ದೀಪಕ್ ಮೃತ ಪಟ್ಟಿದ್ದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಮೃತ ದೀಪಕ್ ಗೆ ಸೇನೆಯ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಕೂಡ ಮುಗಿದಿದೆ. ಆದರೆ ಅಪಘಾತದಲ್ಲಿ ಸಾವನ್ನಪ್ಪಿದರು ಅನ್ನೋದು ಹೇಗೆ, ಯಾವ ವಾಹನ ಅನ್ನೋದು ಇಂದಿಗೂ ನಿಗೂಢವಾಗಿದೆ. ಆದರೆ, ಮೃತ ಪೋಷಕರು ಮೂರು ವಸ್ತುಗಳಾಗಿ ಮನವಿ ಮಾಡುತ್ತಿದ್ದಾರೆ.

ಆತನ ಮೊಬೈಲ್, ವಾಚ್, ಹೆಲ್ಮೇಟ್ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಮೊಬೈಲ್ ನಲ್ಲಿ ಆರ್ಮಿಯ ಸೀಕ್ರೇಟ್ ಕೋಡ್ ಇದೆ ಎಂದು ಹೇಳುತ್ತಿದ್ದ, ಹೆಲ್ಮೆಟ್ ನಲ್ಲಿ ಕ್ಯಾಮರಾ ಇದೆ. ಅವನ ಸಾವಿಗೆ ಕಾರಣವಾದ್ರು ಗೊತ್ತಾಗಬಹುದು. ದಯವಿಟ್ಟು ಹೆಲ್ಮೇಟ್ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ; ಸಂಸತ್ ಭವನದ ಉದ್ಘಾಟನೆಗೆ ಶೃಂಗೇರಿ ಪೀಠದ ಪುರೋಹಿತರು

ಬೈಕಿಗೆ ಅಪಘಾತ ಮಾಡಿದ ಲಾರಿಯವನು ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ. ಮನೆಯವರು ಫೋನ್ ಮಾಡಿದಾಗ ಲಾರಿ ಚಾಲಕನೇ ಅಪಘಾತವಾಗಿದೆ, ಆಸ್ಪತ್ರೆಗೆ ಬನ್ನಿ ಎಂದಿದ್ದಾನೆ. ದೀಪಕ್ ಸ್ನೇಹಿತ ಫೋನ್ ಮಾಡಿದಾಗಲು ಲಾರಿ ಚಾಲಕ ಗುದ್ದಿದ್ದೇನೆ, ಗಾಬರಿ ಆಯ್ತು ಅದಕ್ಕೆ ಬಂದುಬಿಟ್ಟೆ ಆಸ್ಪತ್ರೆಗೆ ಹೋಗಿ ಎಂದಿದ್ದಾನೆ. ಪೊಲೀಸರು ಫೋನ್ ಮಾಡಿದಾಗಲು ನೆಲಮಂಗಲದಲ್ಲಿ ಇದ್ದೇನೆ ಬಂದು ಫೋನ್ ತೆಗೆದುಕೊಂಡು ಹೋಗಿ ಎಂದನಂತೆ. ಪೊಲೀಸರು ಲೊಕೇಶನ್ ಆಧಾರದ ಮೇಲೆ ಅವನನ್ನ ಹಿಡಿಯಬಹುದಿತ್ತು. ಇನ್ನೂ ಹಿಡಿದಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನಾನು ಕಾಂಗ್ರೆಸ್ ಶಾಸಕನಾಗಿರಬಹುದು ಆದರೆ ನಾನೊಬ್ಬ ಸಂಘದ ಸ್ವಯಂಸೇವಕ ಎನ್ನಲು ಹೆಮ್ಮೆಯಿದೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಾನೊಬ್ಬ ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಚಿಕ್ಕಮಗಳೂರು ಶಾಸಕ ಎಚ್. ಡಿ ತಮ್ಮಯ್ಯ ಹೇಳಿದ್ದಾರೆ.

ಇದನ್ನೂ ಓದಿ; ಹೈಟೆಕ್‌ ವೇಶ್ಯಾವಾಟಿಕೆ ದಂಧೆ ಮೇಲೆ ರೈಡ್

ನಗರದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಸಮಿತಿಯಲ್ಲಿ ಕೋದಂಡ ಸ್ವಾಮಿ ದೇವಸ್ಥಾನದ ಸಮಿತಿಯಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡುವಾಗ ದಾನಿಗಳ ಬಳಿ ಸಂಗ್ರಹಕ್ಕೆ ಹೋಗುತ್ತಿದ್ದ ಸಮಯದಲ್ಲಿ ಅವರು ನೀಡುತ್ತಿದ್ದ 500 ರೂ. ದೊಡ್ಡ ಹಣವಾಗುತ್ತಿತ್ತು. ಇದನ್ನು ಚಂದ ವಸೂಲಿ ಎಂದು ಹೇಳುವುದಿಲ್ಲ ಸಂಘದಲ್ಲಿ ಸಂಗ್ರಹ ಎಂದು ಹೇಳಿಕೊಂಡಿದ್ದಾರೆ. ನಾನು ಬಿಜೆಪಿಯಲ್ಲಿ 15 ರಿಂದ 16 ವರ್ಷ ಕೆಲಸ ಮಾಡಿದ್ದೇನೆ. ಈಗಲೂ ನಾನೊಬ್ಬ ಸಂಘದ (rss) ಸ್ವಯಂ ಸೇವಕ. ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿದ್ದರೂ ಸಂಘದಲ್ಲಿನ ಶಿಸ್ತಿನಿಂದ ನಾನೊಬ್ಬ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.

ನಾನು ಜಾತ್ಯಾತೀತ ವ್ಯಕ್ತಿ, ಜಾತ್ಯಾತೀತ ಶಾಸಕ ಪ್ರಮಾಣ ವಚನ ಸ್ವೀಕರಿಸುವಾಗ ಅದೇ ನಿಟ್ಟಿನಲ್ಲಿ ಸ್ವೀಕರಿಸಿದ್ದೇನೆ. ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿಯೇ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ.

Most Popular

Recent Comments