ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಒಡಿಶಾದ ರೈಲು ದುರಂತದಲ್ಲಿ ಸುಮೇದ್ ಸಿಖರ್ಜಿ ಯಾತ್ರೆಗೆಂದು ಹೊರಟಿದ್ದ 110 ಯಾತ್ರಿಕರು ಬದುಕುಳಿದಿದ್ದು, ಈ ಪೈಕಿ ಒಬ್ಬ ಯಾತ್ರಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ; ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ
ಇದನ್ನೂ ಓದಿ; ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ ಜಾರ್ಜ್ ನೇಮಕ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ನಿವಾಸಿ ಧರ್ಮಪಾಲಯ್ಯ (72) ಮೃತ ದುರ್ದೈವಿ. ಇವರು ಸೇರಿದಂತೆ 110 ಯಾತ್ರಿಕರು ಸುಮೇದ್ ಸಿಖರ್ಜಿ ಯಾತ್ರೆಗೆಂದು ಬೆಂಗಳೂರಿನಿಂದ ರೈಲಿನಲ್ಲಿ ಹೊರಟ್ಟಿದ್ದರು. ಒಡಿಶಾದಲ್ಲಿ ರೈಲು ದುರಂತ ನಡೆದ ಸಂದರ್ಭದಲ್ಲಿ ಯಾತ್ರೆಗೆ ತೆರಳುತ್ತಿದ್ದ ಈ 110 ಕನ್ನಡಿಗರೂ ಬದುಕುಳಿದಿದ್ದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಒಂದೇ ಕೊಠಡಿಯಲ್ಲಿ, 5 ತರಗತಿಗೆ, ಒಬ್ಬರೇ ಮೇಷ್ಟ್ರು
- ಲಗೇಜ್ ಆಟೋಗೆ ಡಿಕ್ಕಿ ಹೊಡೆದ ಬೊಲೆರೋ; ಓರ್ವ ಸಾವು
- ಸೆಂಟ್ರಿಂಗ್ ಶೀಟ್ ಕಳವು ಮಾಡಿದ ಆರೋಪಿಗಳ ಬಂಧನ
ಬಳಿಕ ಸುಮೇದ್ ಸಿಖರ್ಜಿ ಯಾತ್ರೆಗೆ ತೆರಳಿದ ಅವರು, ಯಾತ್ರೆ ಮುಗಿಸಿ ಹಿಂದಿರುಗುವಾಗ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೇಷನ್‌ನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಶವ ಪರೀಕ್ಷೆಗಾಗಿ ಅವರ ಸಂಬಂಧಿಕರು ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಕಾಯುತ್ತಿದ್ದಾರೆ.
ಹಾಸ್ಟೆಲ್ ನಲ್ಲಿ ಬಾಲಕಿ ಅನುಮಾನಾಸ್ಪದ ಸಾವು
ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಖಾಸಗಿ ವಸತಿ ಶಾಲೆಯೊಂದರಲ್ಲಿ 13 ವರ್ಷದ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ತೇಜಸ್ವಿನಿ(13) ಮೃತಪಟ್ಟ ವಿದ್ಯಾರ್ಥಿನಿ.
ಇದನ್ನೂ ಓದಿ; ಮಧ್ಯಾಹ್ನದ ಊಟ ಸೇವಿಸಿ 35 ಸೈನಿಕರು ಅಸ್ವಸ್ಥ
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿರುವ ಖಾಸಗಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 13 ವರ್ಷದ ತೇಜಸ್ವಿನಿ ಎಂಬ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ವಿದ್ಯಾರ್ಥಿನಿಯ ಪಾರ್ಥಿವ ಶರೀರ ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತ ಪಟ್ಟ ವಿದ್ಯಾರ್ಥಿನಿಯ ಶವದ ಮರಣೋತ್ತರ ಪರೀಕ್ಷೆಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಉನ್ನತ ಮಟ್ಟದ ವೈದ್ಯರಿಂದ ಶವ ಪರೀಕ್ಷೆ ಮಾಡಿಸಲು ತೀರ್ಮಾನಿಸಲಾಗಿದೆ ಎಂದೂ ತಿಳಿದು ಬಂದಿದೆ.
ಇದನ್ನೂ ಓದಿ; ಯುವಕನ ಕೊಲೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ
ಇನ್ನು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಾಗರ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ಬೇಳೂರು ಮೃತ ವಿದ್ಯಾರ್ಥಿನಿಯ ಪೋಷಕರಿಗೆ ಸಾಂತ್ವಾನ ಹೇಳಿ. ವಿದ್ಯಾರ್ಥಿನಿ ಸಾವಿನ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಕರಣ ದಾಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.