ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಡಿಪಾಸಿಟ್ ಮಾಡಿಕೊಳ್ಳಲಾದ ಬಂದೂಕುಗಳನ್ನು ಪರವಾನಗಿದಾರರಿಗೆ ಬಿಟ್ಟು ಕೊಡುವಂತೆ ಡಿಸಿ ಅವರು ಆದೇಶ ನೀಡಿದ್ದಾರೆ.
ಇದನ್ನೂ ಓದಿ; ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಇದನ್ನೂ ಓದಿ; ಕಾಫಿನಾಡಲ್ಲಿ ಹೆಚ್ಚಾದ ದಲಿತ ಸಿಎಂ ಕೂಗು
ಚುನಾವಣಾ ನೀತಿ ಸಂಹಿತೆ ಪ್ರಕ್ರಿಯೆ ಜಾರಿಯಲ್ಲಿದ್ದ ಸಮಯದಲ್ಲಿ ಸುರಕ್ಷತಾ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ಜರುಗಬಾರದೆಂದು ಬಂದೂಕುಗಳನ್ನು ಠಾಣೆಯಲ್ಲಿ ಡೆಪಾಸಿಟ್ ಮಾಡಲಾಗಿತ್ತು. ಇದೀಗ ನೀತಿ ಸಂಹಿತೆ ಮುಗಿದಿದ್ದು ಠಾಣೆಯಲ್ಲಿ ಡಿಪಾಸಿಟ್ ಇಟ್ಟಿರುವ ಬಂದೂಕುಗಳ ದಾಖಲಾತಿ ಪರಿಶೀಲಿಸಿ ಪರವಾನಗಿದಾರರಿಗೆ ನೀಡಲು ಸೂಚಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಬಿಜೆಪಿಗೆ ಮತ ನೀಡಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದ್ರು ಡ್ರಾಮ ಮಾಡಿ ಈಶ್ವರಪ್ಪ ಬಳಿ ಹಣ ಪೀಕಿದ
- ಯುವತಿ ಕಿಡ್ನ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
- ಸಿಟಿ ಬಸ್ ದ್ವಿಚಕ್ರ ವಾಹನದ ನಡುವೆ ಡಿಕ್ಕಿ
ಮಾಲೀಕರು ಸೂಕ್ತ ದಾಖಲೆಗಳೊಂದಿಗೆ ಸಂಬಂಧ ಪಟ್ಟ ಠಾಣೆಗೆ ತೆರಳಿ ಬಂದೂಕು ವಾಪಾಸ್ ಪಡೆಯಲು ತಿಳಿಸಲಾಗಿದೆ.
ಗಳಿಕೆಯಲ್ಲಿ ಇತಿಹಾಸ ನಿರ್ಮಿಸಿದ ‘ದಿ ಕೇರಳ ಸ್ಟೋರಿ’
ದೇಶಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿರುವ ‘ದಿ ಕೇರಳ ಸ್ಟೋರಿ’ ನಿಧಾನವಾಗಿ ಸದ್ದು ಮಾಡಲು ಆರಂಭಿಸಿದೆ. ಈಗಾಗಲೇ ಕೆಲವೆಡೆ ಸಿನಿಮಾ ಪ್ರದರ್ಶನ ನಿಲ್ಲಿಸಲಾಗುತ್ತಿದೆ. ಆದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಇದು ಮತ್ತೊಂದು ‘ಕಾಶ್ಮೀರ್ ಫೈಲ್ಸ್’ ಆಗುವ ಸುಳಿವು ಸಿಗುತ್ತಿದೆ.
ಇದನ್ನೂ ಓದಿ; ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ
ಸುದೀಪ್ತೊ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ ಹಾಗೂ ಸೋನಿಯಾ ಬಾಲಾನಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ರಿಲೀಸ್‌ಗೂ ಮೊದಲೇ ಈ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಕೇರಳದಲ್ಲಿ ಒತ್ತಡ ಶುರುವಾಗಿತ್ತು. ಸಿನಿಮಾ ಬಿಡುಗಡೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸಿನಿಮಾ ಬಿಡುಗಡೆಗೆ ಕೋರ್ಟ್ ಅಸ್ತು ಎಂದಿತ್ತು.
ಇದನ್ನೂ ಓದಿ; ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್
ಮೇ 5ರಂದು ದೇಶಾದ್ಯಂತ ಬಿಡುಗಡೆಗೊಂಡ ಈ ಚಿತ್ರ ೧೦ ದಿನಗಳಲ್ಲಿ ಮೈಲುಗಲ್ಲೊಂದನ್ನು ನೆಟ್ಟಿದೆ. ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಸಿನಿಮಾ 135 ಕೋಟಿ ರೂ. ಗಳಿಸಿದೆ. ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಈ ಮೂಲಕ 2023 ರಲ್ಲಿ ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಎರಡನೇ ಸಿನಿಮಾವಾಗಿ ‘ದಿ ಕೇರಳ ಸ್ಟೋರಿ’ ಹೊರಹೊಮ್ಮಿದೆ.
ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆಗೆ ದೂಡಲಾಗುತ್ತಿದೆ ಎನ್ನುವ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ವ್ಯವಸ್ಥಿತ ಮತಾಂತರ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ಈ ಸಿನಿಮಾದಲ್ಲಿ ಹೇಳಿರುವುದು ಕಟ್ಟು ಕತೆ, ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೊಡಬಾರದು ಎಂದು ಕೆಲವರು ಆಗ್ರಹಿಸಿದ್ದರು. ಐಪಿಎಲ್ ಭರಾಟೆ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೀತಿದೆ.
ಇದನ್ನೂ ಓದಿ; ಮಗಳ ಮೊಬೈಲ್ ಫೋನ್ ನಿಂದಲೇ ಬಂತು 20 ಲಕ್ಷ ರೂ.ಗಳ ಬೇಡಿಕೆ
ಫಸ್ಟ್ ವೀಕೆಂಡ್ 35. 25 ಕೋಟಿ ರೂ. ಗಳಿಕೆ:
ಭಾರತದಲ್ಲಿ ಶುಕ್ರವಾರ 8.03 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ಶನಿವಾರ 11.22 ಕೋಟಿ ರೂ. ಹಾಗೂ ಭಾನುವಾರ 16 ಕೋಟಿ ರೂ. ಗಳಿಕೆ ಕಂಡು ಸಂಚಲನ ಸೃಷ್ಟಿಸಿದೆ. ಒಟ್ಟಾರೆ ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ 35. 25 ಕೋಟಿ ರೂ. ಬಾಚಿ ಗೆಲುವಿನ ಓಟ ಮುಂದುವರೆಸಿದೆ.