ಮೈಸೂರು: ಹೆತ್ತ ತಾಯಿಯನ್ನು ಚಿಕಿತ್ಸೆಗೆಂದು ಆ ವೃದ್ದೆಯ ಮಗಳೇ ನೆಪ ಹೇಳಿ ಕರೆದುಕೊಂಡು ಬಂದು ಆಕೆಯನ್ನು ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ತಂದು ಬಿಟ್ಟ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶತಾಯುಷಿ ವೃದ್ದೆಯನ್ನು ಆಕೆ ಹೆತ್ತಿದ ಮಗಳೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇನೆಂದು ಆಕೆಯನ್ನು ನಂಬಿಸಿ ಜನ ಸಂಚಾರವಿಲ್ಲದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಘಟನೆ ಅಂತರಸಂತೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಂತರಸಂತೆಯ ಜನರು ಆಕೆಯನ್ನು ನೋಡಿ ವಿಚಾರಿಸಿದಾಗ ಆಕೆ ತನ್ನ ಮಗಳು ಅಳಿಯ ನನ್ನನ್ನು ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ಇನ್ನೂ ಸಲ್ಪ ಸಮಯದ ನಂತರ ಬರುತ್ತಾರೆ ಎಂದು ಹೇಳಿದರು.
ಆದರೆ ಮದ್ಯಾಹ್ನವಾದರೂ ಸ್ಥಳಕ್ಕೆ ಅಳಿಯ ಮಗಳು ಬಾರದ ಕಾರಣ ಅಲ್ಲಿದ್ದ ಸ್ಥಳೀಯರಿಗೆ ತನ್ನನ್ನು ಆಟೋದಲ್ಲಿ ಕಳುಹಿಸಿ ಎಂದು ಬೇಡಿಕೊಂಡಳು ಆದರೆ ಆಕೆಗೆ ಮನೆಯ ವಿಳಾಸ ತಿಳಿಯದ ಕಾರಣ ಆಕೆಯನ್ನು ಸ್ಥಳೀಯ ಅಂತರಸಂತೆ ಪೊಲೀಸ್ ಠಾಣೆಗೆ ಕರೆದೋಯ್ದರು. ಆಕೆ ಊಟ ಮಾಡಲು ಆಗದ ಸ್ಥಿತಿಯಲ್ಲಿ ಇದ್ದಿದ್ದರಿಂದ ಆಕೆಯನ್ನು ನಗರದ ಹೆಚ್. ಡಿ ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಕೆಯನ್ನು ಕೆ. ಆರ್. ನಗರದ ಮಾತೃಶ್ರೀ ವೃದ್ದಾಶ್ರಮಕ್ಕೆ ದಾಖಲಿಸಿದ್ದಾರೆ.