ಬೆಂಗಳೂರು: ನಟ ಕೋಮಲ್ ಅವರು ಶಾಲಾ ಮಕ್ಕಳ ಸ್ವೆಟರ್ ಹಂಚಿಕೆಯ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಟ ಕೋಮಲ್ ವಿರುದ್ಧ ಆರೋಪ ಮಾಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಬೆಂಗಳೂರಿನ ನಗರದಲ್ಲಿ ಮಂಗಳವಾರ ಬಿಬಿಎಂಪಿ ಕಚೇರಿಯ ಮುಂಭಾಗ ಸಮಿತಿ ಅಧ್ಯಕ್ಷ ಡಾ.ಸಿ.ಎಸ್.ರಘು ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸ್ವೆಟರ್ ಗಳನ್ನು ಮಾರಾಟ ಮಾಡಿ ಆಕ್ರೋಶವನ್ನು ಹೊರಹಾಕಿದರು.
ಈ ಸಮಯದಲ್ಲಿ ಮಾತನಾಡಿರುವ ಸಿಎಸ್ ರಘು ಅವರು, ಪಾಲಿಕೆ ಶಾಲಾ, ಕಾಲೇಜುಗಳಲ್ಲಿ ದಲಿತ, ಹಿಂದುಳಿದ ಮತ್ತು ಕಡು ಬಡವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣವನ್ನು ಪಡೆಯುತ್ತಿದ್ದಾರೆ.2020-21ನೆ ಸಾಲಿನಲ್ಲಿ ಪಾಲಿಕೆ ಮಕ್ಕಳಿಗೆ ಸ್ವೆಟರ್ ಗಳನ್ನು ನೀಡಲು ಅನುದಾನ ಮೀಸಲು ಇಟ್ಟಿರುತ್ತಾರೆ. ಆದರೆ, ಪಾಲಿಕೆಯ ಕೆಲ ಅಧಿಕಾರಿಗಳು ಟೆಂಡರ್ ಕರೆಯದೇ 4ಜಿ ವಿನಾಯಿತಿಯನ್ನು ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್‌ಗಳನ್ನು ಸರಬರಾಜು ಮಾಡಲು ಆದೇಶವನ್ನು ನೀಡಿದ್ದಾರೆ.
ಕಳೆದ ಸಾಲಿನಲ್ಲಿ ಕೊರೋನ ಸಾಂಕ್ರಮಿಕ ರೋಗದ ಕಾರಣದಿಂದ ಶಾಲಾ, ಕಾಲೇಜು ಬಂದ್ ಮಾಡಲಾಗಿತ್ತು. ಆದರೆ, ಸ್ವೆಟರ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು 1.76 ಕೋಟಿ ರೂ.ಹಣವನ್ನು ಪಾವತಿ ಮಾಡಲಾಗಿದೆ. ಅಂದಾಜು 16 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸ್ವೆಟರ್ ಗಳನ್ನು ವಿತರಣೆ ಮಾಡದೇ ಈ ಯೋಜನೆಯಲ್ಲಿ ಪಾಲಿಕೆ ಅಧಿಕಾರಿಗಳು ಹಣವನ್ನು ಲೂಟಿ ಮಾಡಿದ್ದಾರೆಂದು ಆರೋಪಿಸಿದರು.
ಶ್ರೀಮಂತರ ಮಕ್ಕಳಂತೆ ನಮ್ಮ ಪಾಲಿಕೆ ಶಾಲಾ, ಕಾಲೇಜು ಮಕ್ಕಳು ಮಳೆ, ಚಳಿಯಿಂದ ರಕ್ಷಣೆ ಪಡೆಯಬೇಕು ಮತ್ತು ಶಿಸ್ತುನಿಂದ ಕಾಣಬೇಕು ಎಂದು ಸೈಟರ್ ಗಳ ಯೋಜನೆ ಆದರೆ ಅಧಿಕಾರಿಗಳ ಧನದಾಹದಿಂದ ಯೋಜನೆಯು ಹಳ್ಳ ಹಿಡಿದಿದೆ. ಸ್ವೆಟರ್ ಖರೀದಿ ಯೋಜನೆಯಲ್ಲಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಲು ತಮಟೆ ಚಳುವಳಿ ಹಾಗೂ ಸ್ವೆಟರ್ ಖರೀದಿ ಅವ್ಯವಹಾರದ ಸೂಕ್ತ ತನಿಖೆ ಮಾಡಲು ಸ್ವೆಟರ್ ಗಳ ಮಾರಾಟವನ್ನು ಮಾಡಿ ಬಂದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಮರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.