ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವ ಪೈಪೋಟಿ ನಡೆಯುತ್ತಿರುವ ಮಧ್ಯೆಯೇ ದಲಿತ ಸಿಎಂ ಕೂಗು ಕೂಡ ಎದ್ದಿದೆ. ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರನಲ್ಲಿ ದಲಿತ ಸಮುದಾಯದವರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ; ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್
ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. 70 ವರ್ಷದಲ್ಲಿ ಕಾಂಗ್ರೆಸ್ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ. ಈ ಬಾರಿ ದಲಿತರಿಗೆ ಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಉದ್ಯಮಿ ಕೃತ್ಯದ ವಿರುದ್ಧ ಮಹಿಳೆಯಿಂದ ದೂರು
- ಸಿ. ಟಿ ರವಿ ಸೋಲನ್ನು ಸಂಭ್ರಮಿಸುವ ರೀತಿ ವ್ಯಂಗ್ಯವಾಡಿದ ಎಂ ಪಿ ಕುಮಾರಸ್ವಾಮಿ
- ಬಿಜೆಪಿಗೆ ಮತ ಹಾಕಿದ್ದಕ್ಕೆ ಅನ್ಯಕೋಮಿಗಳಿಂದ ಆಟೋ ಚಾಲಕನ ಮೇಲೆ ಹಲ್ಲೆ
ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸಿ.ಟಿ.ರವಿ
ಚಿಕ್ಕಮಗಳೂರು; 20 ವರ್ಷಗಳಿಂದ ಶಾಸಕರಾಗಿದ್ದು ಮೊದಲ ಬಾರಿಗೆ ಸೋಲಿನ ಕಹಿ ಕಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜನಾದೇಶಕ್ಕೆ ತಲೆಬಾಗುತ್ತೇನೆ. ಇದು ಸಿದ್ಧಾಂತದ ಸೋಲಲ್ಲ. ವೈಯಕ್ತಿಕ ಸೋಲು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ
ಆರಂಭದಿಂದಲೂ ತೀವ್ರ ಕುತೂಹಲ ಮೂಡಿಸಿದ್ದ ಫಲಿತಾಂಶ ಅಂತಿಮವಾಗಿ ಸಿ.ಟಿ.ರವಿ ಸೋಲು ಎಂದು ರಿಸಲ್ಟ್ ಹೊರಬರುತ್ತಿದ್ದಂತೆ ಶಾಸಕ ಸಿ.ಟಿ.ರವಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ. ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು 1999ರಲ್ಲೂ ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು. ಆ ಬಳಿಕ ಈಗ ಮತ್ತೆ ಐದಕ್ಕೆ ಐದು ಕ್ಷೇತ್ರಗಳು ಕೈ ಪಾಲಾಗಿವೆ.
ಸೋಲಿನ ಬಗ್ಗೆ ಪ್ರತಿಕ್ತಿಯೆ ಕೊಟ್ಟ ಸಿ.ಟಿ ರವಿ:
ಫಲಿತಾಂಶ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ, ಕಳೆದ ಬಾರಿಗಿಂತ 9 ಸಾವಿರ ಓಟು ಜಾಸ್ತಿ ಬಂದಿದೆ. ಇದು ಒಂದು ಕಾರಣವಲ್ಲ, ಹಲವು ಕಾರಣಗಳಿವೆ.
ಇದನ್ನೂ ಓದಿ; ಜ್ಯೋತಿಷಿ ಮಾತು ಕೇಳಿ ಯುವಕನ ಕೈ-ಕಾಲು ಕತ್ತರಿಸಿದ್ದ ಚಿಕ್ಕಪ್ಪ?
ಜೆಡಿಎಸ್-ಕಾಂಗ್ರೇಸ್ ಒಂದಾಗಿ ಕೆಲಸ ಮಾಡಿತ್ತು, ಕಳೆದ ಸಾರಿ ಜೆಡಿಎಸ್ 38 ಸಾವಿರ ಈ ಬಾರಿ 1700 ತಗೊಂಡಿದೆ. ಹಾಗೆ ಜೆಡಿಎಸ್ ಮುಖಂಡರುಗಳು ನೇರವಾಗಿ ಕಾಂಗ್ರೆಸ್ ಗೆ ಬೆಂಬಲಿಸಿದ್ದರು. ನನ್ನನ್ನು ಸೋಲಿಸಬೇಕೆಂದು ಟಾರ್ಗೆಟ್ ಮಾಡಿದರು. ಹಲವು ನಾಯಕರುಗಳ ಕೆಂಕಣಿಗೂ ಗುರಿಯಾಗಿದೆ.
ನಾನು ಪಕ್ಷದ ಕಾರಣಕ್ಕೆ, ಸಿದ್ಧಾಂತದ ಕಾರಣಕ್ಕೆ, ಪಕ್ಷದ ಪರವಾಗಿ ಸಮರ್ಥನೆ ಮಾಡಿಕೊಳ್ಳುತ್ತಾ ಇದ್ದ ಕಾರಣಕ್ಕಾಗಿ, ಮತ್ತೆ ಸಿದ್ಧಾಂತದ ಕಾರಣಕ್ಕಾಗಿ ಕೆಂಕಣಿಗೂ ಗುರಿಯಾಗಿದ್ದೆ. ಆದರೆ ಸೋತ ಕ್ಷಣದಿಂದ ಜನ ನಮ್ಮ ಮನೆಗೆ ಬಂದು ಬೇಸರ ವ್ಯಕ್ತಪಡಿಸುತ್ತಾ ಇದ್ದರೆ. ಆ ಕ್ಷಣಕ್ಕೆ ಚಿಕ್ಕಮಗಳೂರು ಜಿಲ್ಲೆಗೆ, ಜನತೆಗೆ, ನಮಗೆ ನಾವೇ ತೊಂದರೆ ಮಾಡಿಕೊಂಡಿದ್ದೇವೆ.
ಇದನ್ನೂ ಓದಿ; ಸರ್ಕಾರಿ ನೌಕರನಿಂದ ಮರ್ಕಲ್ ಗ್ರಾಮ ಪಂಚಾಯಿತಿ ಸಮೀಪ ಅಕ್ರಮ ಕಟ್ಟಡ ನಿರ್ಮಾಣ ಆರೋಪ, ಶಿಸ್ತು ಕ್ರಮಕ್ಕೆ
ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳುವ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸಿ,ಟಿ ರವಿ ತಿಳಿಸಿದರು.
ಬೇಸರ ವ್ಯಕ್ತ ಪಡಿಸಿದ ಬೆಂಬಲಿಗರಿಗೆ ಸಮಾಧನ ಪಡಿಸಿದ ಸಿ.ಟಿ ರವಿ:
ಫಲಿತಾಂಶ ಹೊರಬೀಳುತ್ತಿದ್ದಂತೆ ಸಿ.ಟಿ ರವಿ ನಿವಾಸಕ್ಕೆ ಹಲವು ಬೆಂಬಲಿಗರು ಬಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಸಿ.ಟಿ ರವಿ ಮನೆ ಬಳಿ ಬಂದು ಬೇಸರ ವ್ಯಕ್ತ ಪಡಿಸಿದ್ದ ಬೆಂಬಲಿಗರಿಗೆ ಧೈರ್ಯ ತುಂಬಿದರು.
ಇದನ್ನೂ ಓದಿ; ಕಾರ್ಮಿಕನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ