ದಕ್ಷಿಣ ಕನ್ನಡ: ಕೇರಳ ಹಾಗೂ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಶ್ರೀಲಂಕಾದ ಉಗ್ರರು ನುಸುಳಿರೋ ಸುಳಿವನ್ನು ಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಕೇರಳದ ಕರಾವಳಿ ಪ್ರದೇಶಕ್ಕೆ 12 ಶ್ರೀಲಂಕಾ ಮೂಲಕ ಉಗ್ರರು 2 ಯಾಂತ್ರಿಕ ದೋಣಿಗಳಲ್ಲಿ ಬಂದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಇದರಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಕೇರಳ ಇಲ್ಲವೇ ಕರ್ನಾಟಕದಿಂದ ಪಾಕಿಸ್ತಾನಕ್ಕೆ ತೆರಳೋ ಯೋಜನೆಯಿಂದ ಉಗ್ರರು ಬಂದಿರೋ ಶಂಕೆಯು ತೀವ್ರವಾಗಿ ವ್ಯಕ್ತವಾಗಿದೆ. ಜೊತೆಗೆ ಈ ಉಗ್ರರ ಬಗ್ಗೆ ಕರಾವಳಿ ಕಾವಲು ಪಡೆ, ಭಾರತೀಯ ತಟ ರಕ್ಷಣಾ ಪಡೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆಯನ್ನು ನೀಡಲಾಗಿದೆ. ಇದಲ್ಲದೇ ಮೀನುಗಾರರಿಗೆ ಕರಾವಳಿ ಭಾಗದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಇಲ್ಲವೇ ಬೋಟ್ ಕಂಡು ಬಂದರೇ, ಕೂಡಲೇ ಪೋಲಿಸರಿಗೆ ಮಾಹಿತಿಯನ್ನು ನೀಡುವಂತೆ ತಿಳಿಸಲಾಗಿದೆ.