ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಕ್ಸಲರಿಗಿಂತ ಸಿ.ಟಿ ರವಿಯೇ ಡೇಂಜರ್ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ; ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಚ್ ಡಿ ತಮ್ಮಯ್ಯ ಫುಲ್ ರೌಂಡ್ಸ್

ಇದನ್ನೂ ಓದಿ; ಕಳಪೆ ಆಲೂಗಡ್ಡೆ ಬೀಜ ವಿತರಣೆ; ಸಂಕಷ್ಟದಲ್ಲಿ ರೈತರು
ಸಿ.ಟಿ ರವಿಯ ಅರ್ಬನ್ ನಕ್ಸಲ್ ಹೇಳಿಕೆಗೆ ಭೋಜೇಗೌಡ ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನ ಬದಲಾವಣೆ, ರಾಷ್ಟ್ರಧ್ವಜ ಇಳಿಸಿ ಭಗವಧ್ವಜ, ಹಿಂದೂ ರಾಷ್ಟ್ರದ ಹೇಳಿಕೆಗಳು ನಕ್ಸಲರಿಗಿಂತ ಡೇಂಜರಸ್ ಪದಗಳು. ಒಂದು ಜಾತಿ, ಒಂದು ಧರ್ಮ ಇಟ್ಟುಕೊಂಡು ದೇಶವನ್ನು ರಕ್ಷಣೆ ಮಾಡೋಕಾಗುತ್ತಾ. ಸಿ.ಟಿ ರವಿ ನಾಲಿಗೆ ಹರಿಬಿಟ್ಟ ಪರಿಣಾಮ ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟಿದ್ದ 18 ಕಾರ್ಮಿಕರ ರಕ್ಷಣೆ; ಆರೋಪಿ ಅಂದರ್
- ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ ನಿಧನ
- ಸೊಸೆಯಿಂದಲೇ ಅತ್ತೆಯ ಚಿನ್ನಾಭರಣ ಮತ್ತು ಹಣ ಕಳವು
ಚಿಕ್ಕಮಗಳೂರು ಕ್ಷೇತ್ರಕ್ಕೆ ಮಾತ್ರ ಕಾಂಗ್ರೆಸ್ ಜೊತೆಗೆ ಹೊಂದಣಿಕೆ ಇತ್ತು. ನಾನು ಜೆಡಿಎಸ್ ಪಕ್ಷದಿಂದಲೇ ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ನಾನು ಕಾಂಗ್ರೆಸ್ ಸೇರ್ಪಡೆ ಬರೀ ವದಂತಿ ಅಷ್ಟೇ ಎಂದರು.
ಬಿರುಗಾಳಿ ಮಳೆ ಸೃಷ್ಟಿಸಿದ ಅವಾಂತರ: ಎಲ್ಲೆಲ್ಲಿ ಏನೇನು?
ಹಾಸನ: (ನ್ಯೂಸ್ ಮಲ್ನಾಡ್ ವರದಿ) ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುವ ಮೂಲಕ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ ಹಲವೆಡೆ ಬೆಳೆಗಳು ನಾಶವಾಗಿದೆ, ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ.
ಇದನ್ನೂ ಓದಿ; ಭೀಕರ ರಸ್ತೆ ಅಪಘಾತ; ತಲೆ ಮೇಲೆ ಟಿಪ್ಪರ್ ಹರಿದು ಬಾಲಕಿ ಸಾವು
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲವೆಡೆ ನಿನ್ನೆ ಧಾರಾಕಾರವಾಗಿ ಸುರಿದ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಬೇಲೂರು, ಚೀಕನಹಳ್ಳಿ, ಮೂಡಿಗೆರೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು ಧರೆಗುರುಳಿವೆ. ಮತ್ತು ಮೂರು ಟ್ರಾನ್ಸ್ ಫಾರ್ಮ ಗಳು ಹಾಳಾಗಿವೆ. ಮತ್ತೊಂದೆಡೆ ಕೋನರ್ಲು ಗ್ರಾಮದಲ್ಲಿ ಬಿರುಗಾಳಿಗೆ ಹುಸೇನ್ ಎಂಬುವವರ ವಾಸದ ಮನೆಯ ಮೇಲ್ನಾವಣಿ ಹಾರಿ ಹೋಗಿದೆ. ಇನ್ನು ಭಾರಿ ಮಳೆಯಿಂದ ಟ್ರಾನ್ಸ್ಫಾರ್ಮ ಗಳು ಹಾಳಾದ ಹಿನ್ನೆಲೆ ನಿನ್ನೆಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗೆಯೆ ಬೇಲೂರು ತಾಲೂಕಿನ, ಬಳ್ಳೂರು ಗ್ರಾಮದಲ್ಲಿ ಧರ್ಮೇಗೌಡ ಎಂಬುವವರ ಜಮೀನಿನಲ್ಲಿ ನೂರಾರು ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಬಾಳೆ ಬೆಳೆ ಕಳೆದುಕೊಂಡ ರೈತ ಧರ್ಮೇಗೌಡ ಕಾಂಗಾಲಾಗಿದ್ದಾರೆ. ಅಲ್ಲದೆ ಗಾಳಿ, ಮಳೆಯಿಂದ ನೆಲಕ್ಕುರುಳಿದ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಸಾರ್ವಜನಿಕರೇ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ; ಟ್ರಕ್ಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ; ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಪತ್ತೆ