Monday, December 11, 2023
Homeಮಲೆನಾಡುಚಿಕ್ಕಮಗಳೂರುCT Ravi: ನರಿಗಳು ಘೀಳಿಟ್ರೆ ಕಾಡಿನ ರಾಜ ಬೆದರೋದು ಉಂಟಾ?

CT Ravi: ನರಿಗಳು ಘೀಳಿಟ್ರೆ ಕಾಡಿನ ರಾಜ ಬೆದರೋದು ಉಂಟಾ?

CT Ravi: ಚಿಕ್ಕಮಗಳೂರು (ನ್ಯೂಸ್ ಮಲ್ನಾಡ್ ವರದಿ) ಕಾಡಿನಲ್ಲಿ ನರಿಗಳು ಘೀಳಿಟ್ಟರೆ ಕಾಡಿನ ರಾಜ ಬೆದರೋದು ಉಂಟಾ, ದೇಶದ ಪ್ರಧಾನಿ ನರೇಂದ್ರ ಮೋದಿ ಅನಭಿಷಿಕ್ತ ರಾಜನಿದ್ದಂತೆ. ಎಲ್ಲ ಬೆದರಿಕೆಗಳನ್ನೂ ಧೈರ್ಯವಾಗಿ ಎದುರಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಇದನ್ನೂ ಓದಿ; ಜಯಪುರ: ಡಿಶ್ ರಿಪೇರಿ ಬಶೀರನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಹೊಡೆದ ಜನ

ಇದನ್ನೂ ಓದಿ; ಮೂಡಿಗೆರೆ: ಎಣ್ಣೆ ಏಟಿಗೆ ಡ್ರೈವರ್ ಟೈಟು; ಆಟೋ ಚಲಾಯಿಸುವಾಗ್ಲೇ ಕೆಳಗೆ ಬಿದ್ದ ಡ್ರೈವರ್,

ಪ್ರಜಾಪ್ರಭುತ್ವ ದೇಶದ ಜನರ ಹೃದಯದಲ್ಲಿ ಸ್ಥಾನ ಪಡೆದ ಸಾಮ್ರಾಟ ನರೇಂದ್ರ ಮೋದಿ. ಅಲ್ಲಿ-ಇಲ್ಲಿ ನರಿಗಳು ಘೀಳಿಟ್ರೆ ಹೃದಯ ಸಾಮ್ರಾಟ ಸಿಂಹ ಬೆದರೋದಕ್ಕೆ ಸಾಧ್ಯವಿಲ್ಲ. ನರಿಗಳು ಘೀಳಿಟ್ರೆ ಸಿಂಹ ದಾರಿ ಬದಲಾಯಿಸುವುದಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೋದಿ ಅವರನ್ನು ಕಂಡರೆ ದೇಶದಲ್ಲಿರುವ ಅನೇಕ ವಿಪಕ್ಷಗಳಿಗೆ ನಡುಕ. ಆದ್ದರಿಂದಲೇ ಬೆಂಗಳೂರಿನಲ್ಲಿ ಸಭೆ ಸೇರುತ್ತಿದ್ದಾರೆ. ಇದಕ್ಕೆಲ್ಲ ಬಿಜೆಪಿ ಹೆದರುವ ಪ್ರಶ್ನೆಯಿಲ್ಲ. ನಮ್ಮ ತಯಾರಿಯಲ್ಲಿ ನಾವಿದ್ದೇವೆ ಎಂದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು 


CT Ravi: ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿತಿಸಿದ ಅವರು, ಮೊದಲು ದೇಶ, ನಂತರ ಪಕ್ಷ, ತದನಂತರ ವ್ಯಕ್ತಿ ಅನ್ನೋ ತತ್ವದ ಮೇಲೆ ನಂಬಿಕೆ ಇಟ್ಟವರು ನಾವು. ನಮ್ಮ ದೇಶ-ತತ್ವದಡಿ ಯಾರು ಬೇಕಾದರೂ ನಮ್ಮ ಜೊತೆಗೆ ಬರಬಹುದು ಎಂದು ಸ್ಪಷ್ಟಪಡಿಸಿದರು.

ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ಅದೇ ರೀತಿ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ. ರಾಷ್ಟ್ರದ ಹಿತಾಸಕ್ತಿ, ಮೋದಿ ನೇತೃತ್ವ ಹಾಗೂ ಕೇಂದ್ರ ಸರ್ಕಾರದ ಜನಪರ ಕೆಲಸ ಮೆಚ್ಚಿ ಯಾರು ಬೇಕಾದರೂ ಬಿಜೆಪಿ ಅಥವಾ ಎನ್‌ಡಿಎ ಜೊತೆ ಬರಬಹುದು ಎಂದರು.

ct ravi
ct ravi

ಜೆಡಿಎಸ್ ಜೊತೆ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಮ್ಮ ಹಂತದಲ್ಲಿ ಯಾವ ಚರ್ಚೆಯೂ ಆಗಿಲ್ಲ, ಮೇಲ್ಮಟ್ಟದಲ್ಲಿ ಆಗಿದ್ದರೆ ಅದರ ಬಗ್ಗೆ ಮಾಹಿತಿ ಇಲ್ಲ. ಒಬ್ಬರನ್ನು ದೂರವಿಟ್ಟು ರಾಜಕಾರಣ ಮಾಡುವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟವರು ನಾವಲ್ಲ ಎಂದು ತಿಳಿಸಿದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು 


ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಅನುಕೂಲವೇ ಆಯಿತು. ವಿರೋಧ ಪಕ್ಷದ ನಾಯಕ ಇದ್ದಿದ್ದರೆ ಅರ್ಕಾವತಿ ಪ್ರಕರಣವನ್ನು ಹೊರತೆಗೆಯುತ್ತಿದ್ದರು. ಈಗ ಅವರು ನಿಶ್ಚಿಂತೆಯಿಂದ ಇರಬಹುದಲ್ಲ ಎಂದು ಎಂದು ಸಿ.ಟಿ.ರವಿ ಲೇವಡಿ ಮಾಡಿದರು. ಅರ್ಕಾವತಿ ಹಗರಣದ ಕಳ್ಳರು ಯಾರೆಂದು ನಾನು ಹಲವು ಬಾರಿ ಪ್ರಶ್ನಿಸಿದ್ದೇನೆ. ಆದರೆ ಇದುವರೆಗೂ ಉತ್ತರ ಕೊಟ್ಟಿಲ್ಲ. 8 ಸಾವಿರ ಕೋಟಿ ರೂ. ಲೂಟಿ ಹೊಡೆದವರು ಯಾರೆಂದು ಕೇಳುತ್ತಲೇ ಇದ್ದೇನೆ, ಉತ್ತರ ಕೊಡಲು ಅವರಿಗೆ ಧೈರ್ಯವಿಲ್ಲ. ಯಾಕೆಂದರೆ ಈಗಿದ್ದವರೇ ಕದ್ದವರು ಎಂದು ಆರೋಪಿಸಿದರು.

Most Popular

Recent Comments