ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವೀರೇಂದ್ರ ಪಾಲ್ ಬಳಿಕ ಯಾವ ವೀರಶೈವ ಮುಖಂಡರಿಗೆ ಕಾಂಗ್ರೆಸ್ ಅಧಿಕಾರ ಕೊಟ್ಟಿದೆ, ಈಗ ಜಗದೀಶ್ ಶೆಟ್ಟರ್ ಸಿಎಂ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಸವಾಲು ಹಾಕಿದರು.
ಇದನ್ನೂ ಓದಿ; ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಮನೆ ಕಳ್ಳತನದ ಆರೋಪಿ ಬಂಧನ
ನಗರದಲ್ಲಿ ಮಾತಾನಾಡಿದ ಅವರು, ಕಾಂಗ್ರೆಸ್‌ನವರಿಗೆ ಸಾಮರ್ಥ್ಯ ಇದ್ದರೆ ವೀರಶೈವ ಮುಖಂಡರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಿ. ಇನ್ನು ನಾನು ಕಾಯುತ್ತಿದ್ದೇನೆ. ಶೆಟ್ಟರ್ ಅವರನ್ನು ಮುಂದಿನ ಸಿಎಂ ಎಂದು ಘೋಷಣೆ ಮಾಡಲಿ. ಇನ್ನು ನಮ್ಮ ಗೆಳೆಯ ಲಕ್ಷ್ಮಣ್ ಸವದಿ ಅವರನ್ನ ಸಿಎಂ ಎಂದು ಘೋಷಣೆ ಮಾಡುತ್ತಾರೆಯ ಎಂದು ಕಾಯುತ್ತಿದ್ದೆವೆ. ಈಗ ಓಣ ಮಾತುಗಳಿಂದ ಏನೂ ಪ್ರಯೋಜನ ಆಗುವುದಿಲ್ಲ. ಬಿಜೆಪಿ ಹಿಂದುತ್ವ ತತ್ತ್ವದ ಆಧಾರದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ಪಕ್ಷವಾಗಿದೆ. ಅಲ್ಲದೆ ದೇಶದ ಹಿತದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿರುವ ನಮ್ಮ ಪಕ್ಷದ ಬೆಳವಣಿಗೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ದತ್ತಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ದೀಪಕ್ ದೊಡ್ಡಯ್ಯ
- ಹೊಳೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತ್ಯು.!
- ಶಾಸಕ ಸಿ.ಟಿ ರವಿ ವಿರುದ್ಧ ನಕಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತ ಪೋಲಿಸ್ ವಶಕ್ಕೆ
ಶೆಟ್ಟರ್ ಪಕ್ಷ ಬಿಟ್ಟಿದ್ದು ದುರಾದೃಷ್ಟಕರ ಸಂಗತಿ:
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದು ದುರಾದೃಷ್ಟಕರ ಸಂಗತಿಯಾಗಿದೆ. ಅವರ ಮೆರಿಟ್, ಡಿ ಮೆರಿಟ್ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಇಷ್ಟು ದಿನ ಬಿಜೆಪಿ ಪರ, ಕಾಂಗ್ರೆಸ್ ವಿರುದ್ಧದ ರಾಜಕಾರಣ ಮಾಡಿದವರು, ನಿನ್ನೆ ಕಾಂಗ್ರೆಸ್ ಪರ ಬ್ಯಾಟ್ ಬೀಸಿದ್ದಾರೆ. ಕಾಂಗ್ರೆಸ್ ಐಸಿಯುನಲ್ಲಿದೆ, ಅದನ್ನು ಯಾರೂ ಬದುಕಿಸಲು ಆಗುವುದಿಲ್ಲ. ಆದರೆ ಅವರು ಕಾಂಗ್ರೆಸ್ ಸೇರಿಸೋದು ದುರಾದೃಷ್ಟಕರ ಎಂದರು.
ಇನ್ನು ನೀವೇ ಹೇಳುತ್ತಿದ್ದ ಕೋಮಾದಲ್ಲಿರುವ ಪಾರ್ಟಿಗೆ ಹೋಗಿರುವುದು ದುರಾದೃಷ್ಟಕರವಾಗಿದೆ. ಪಕ್ಷ ಸ್ವಾಭಾವಿಕವಾಗಿ ರಿಕವರಿ ಮಾಡಿಕೊಳ್ಳುತ್ತದೆ, ಆದರೆ ವ್ಯಕ್ತಿಗಳು ರಿಕವರಿ ಮಾಡಿಕೊಳ್ಳಲು ಆಗುವುದಿಲ್ಲ. ಅವರು ಜನಸಂಘದಿಂದ ಬಂದವರು ಎಂಬ ಹೆಗ್ಗಳಿಕೆ ಇತ್ತು, ಅದನ್ನು ಈಗ ಕಳೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು. ಹಾಗೆಯ ನೀವು ಏನೆಲ್ಲಾ ಆಗಿದ್ದೀರಾ ಅದು ಬಿಜೆಪಿ ಲೆಕ್ಕಕ್ಕೆ ಸೇರುತ್ತದೆ ಎಂದರು.
ಇದನ್ನೂ ಓದಿ; ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ
ಬಾಳೆಬರೆ ಘಾಟಿ; ವಾಹನ ಸಂಚಾರ ಆರಂಭ
ಶಿವಮೊಗ್ಗ: ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ ಬಾಳೆಬರೆ (ಹುಲಿಕಲ್) ಘಾಟಿಯ ಕಾಂಕ್ರಿಟೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ರಾತ್ರಿಯಿಂದ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ.
ಇದನ್ನೂ ಓದಿ; ಶಾಸಕ ಸಿ. ಟಿ ರವಿ ಆಸ್ಪತ್ರೆಗೆ ದಾಖಲು.. ಪತ್ನಿ ಪಲ್ಲವಿ ಸಿಟಿ ರವಿ ಕಣ್ಣೀರು!
ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ, ಚರಂಡಿ ಮತ್ತಿತರ ಕಾಮಗಾರಿಗಳಾಗಿ ಫೆ.5ರಿಂದ ಎ. 5ರ ವರೆಗೆ ಈ ಘಾಟಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆ ಬಳಿಕ ಎ. 5ರಂದು ಕಾಮಗಾರಿ ಪೂರ್ಣಗೊಳ್ಳದ ಕಾರಣ ಮತ್ತೆ 10 ದಿನಗಳ ವರೆಗೆ ಸಂಚಾರ ನಿಷೇಧಿಸಲಾಗಿತ್ತು. ಈಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
3.5 ಕಿ.ಮೀ. ಕಾಮಗಾರಿ:
ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಬಾಳೆಬರೆ ಘಾಟಿಯ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 3 ಕೋಟಿ.ರೂ. ವೆಚ್ಚದಲ್ಲಿ ಅಂದಾಜು 1 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ 10 ಕೋಟಿ.ರೂ. ವೆಚ್ಚದಲ್ಲಿ 2.5 ಕಿ.ಮೀ. ಸೇರಿದಂತೆ ಒಟ್ಟು 3.5 ಕಿ.ಮೀ. ದೂರದವರೆಗೆ ರಸ್ತೆ ಅಗಲ, ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ.
3.5 ಕಿ.ಮೀ. ಅಭಿವೃದ್ಧಿ ಬಾಕಿ:
ಬಾಳೆಬರೆ ಘಾಟಿಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆ ಸೇರಿ ಹುಲಿಕಲ್ ಚೆಕ್ ಪೋಸ್ಟ್‌ನಿಂದ ಹೊಸಂಗಡಿಯ ಘಾಟಿಯ ಬುಡದ ವರೆಗೆ 14.5 ಕಿ.ಮೀ. ದೂರವಿದೆ. ಶಿವಮೊಗ್ಗ ಜಿಲ್ಲೆಯ 8 ಕಿ.ಮೀ. ಪೈಕಿ ಈ ಹಿಂದೆ ಸ್ವಲ್ಪ ಕಾಂಕ್ರಿಟೀಕರಣ ಆಗಿದ್ದು, ಈಗ ಬಾಕಿಯಿದ್ದ 2.5 ಕಿ.ಮೀ.ನೊಂದಿಗೆ ಕಾಂಕ್ರಿಟೀಕರಣಗೊಂಡಿದೆ. ಉಡುಪಿ ಜಿಲ್ಲೆಯ 6.5 ಕಿ.ಮೀ. ಘಾಟಿಯ ಪೈಕಿ ಈ ಹಿಂದೆ 2 ಕಿ.ಮೀ., ಈಗ 1 ಕಿ.ಮೀ. ಸೇರಿದಂತೆ ಒಟ್ಟು 3 ಕಿ.ಮೀ. ಕಾಂಕ್ರಿಟೀಕರಣಗೊಂಡಂತಾಗಿದೆ. ಇನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ 3.5 ಕಿ.ಮೀ. ಘಾಟಿ ರಸ್ತೆ ಕಾಂಕ್ರಿಟೀಕರಣ ಬಾಕಿ ಇದೆ.
ಇದನ್ನೂ ಓದಿ; ಒಳಮೀಸಲಾತಿ ಕಿಚ್ಚು: ತರ್ಲಘಟ್ಟ ತಾಂಡಾದಲ್ಲಿ ವಿಜಯೇಂದ್ರಗೆ ಪ್ರತಿಭಟನೆಯ ಸ್ವಾಗತ