ಸುಕ್ಮಾ: ಸಿ ಆರ್ ಪಿ ಎಫ್ ಯೋಧರೊಬ್ಬರು ತನ್ನ ಸಹೋದ್ಯೋಗಿಗಳ ಮೇಲೆ ಗುಂಡನ್ನು ಹಾರಿಸಿ ನಾಲ್ವರು ಸಾವನ್ನಪ್ಪಿ, ಮೂರು ಮಂದಿ ಗಾಯಗೊಂಡ ಘಟನೆ ಇಂದು ಮುಂಜಾನೆ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಅರೆಸೇನಾ ಪಡೆಯ ಶಿಬಿರದಲ್ಲಿ ನಡೆದಿದೆ.
ರಾಜಧಾನಿ ರಾಯಪುರದಿಂದ ಸುಮಾರು 400 ಕಿಮೀ ದೂರದಲ್ಲಿರುವರುವ ಲಿಂಗಂಪಲ್ಲಿ ಎಂಬ ಗ್ರಾಮದ ಸಿಆರ್‌ಪಿಎಫ್‌ನ 50ನೇ ಬೆಟಾಲಿಯನ್‌ನ ಶಿಬಿರದಲ್ಲಿ ಈ ಘಟನೆ ನಡೆದಿದೆ.
ಮುಂಜಾನೆ 3.30 ರ ವೇಳೆಯಲ್ಲಿ ಒಬ್ಬ ಜವಾನ ತನ್ನ ಎಕೆ-47 ರೈಫಲ್ ನಿಂದ ತನ್ನ ಸಹೋದ್ಯೋಗಿಗಳ ಮೇಲೆಯೇ ಗುಂಡನ್ನು ಹಾರಿಸಿದ್ದಾನೆ ಇದರ ಪರಿಣಾಮ ನಾಲ್ವರು ಸಾವನಪ್ಪಿ ಮೂರು ಮಂದಿ ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಮತ್ತು ಆ ಜವಾನನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಎಂದು ಪೊಲೀಸ್ ಮಹಾನಿರೀಕ್ಷಕ ಪಿ ಸುಂದರರಾಜ್ ತಿಳಿಸಿದರು.