ಪ್ರವಾಸಿಗರೊಬ್ಬರು ಪ್ಲಾಸ್ಟಿಕ್ ಮೊಸಳೆ ಎಂದು ತಿಳಿದುಕೊಂಡು ಜೀವಂತ ಮೊಸಳೆಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ತೊಂದರೆಗೆ ಸಿಕ್ಕಿಬಿದ್ದ ಘಟನೆ ಫಿಲಿಫೈನ್ಸ್ ನಲ್ಲಿ ನಡೆದಿದೆ.
ನವೆಂಬರ್ 10 ರಂದು ನಗರದ ಅಮಯಾ ವ್ಯೂ ಅಮ್ಯೂಸ್ಮೆಂಟ್ ಪಾರ್ಕ್ ಗೆ ಹೋದ 68 ವರ್ಷದ ವ್ಯಕ್ತಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುವ ಗೀಜಿಗೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆ ವ್ಯಕ್ತಿ ಪಾರ್ಕ್ ಗೆ ಹೋದ ಸಮಯದಲ್ಲಿ ಅಲ್ಲಿ ನೀರಿನಲ್ಲಿದ್ದ ಜೀವಂತ ಮೊಸಳೆಯನ್ನು ಪ್ಲಾಸ್ಟಿಕ್ ಮೊಸಳೆ ಎಂದು ತಿಳಿದುಕೊಂಡು ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕೊಳಕ್ಕೆ ಇಳಿದಿದ್ದ ಸಂದರ್ಭದಲ್ಲಿ ಮೊಸಳೆ ಆ ವ್ಯಕ್ತಿಯ ಎಡಗೈನನ್ನು ಕಚ್ಚಿದೆ ನಂತರ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದು ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ.
ಈ ಘಟನೆಯನ್ನು ಸೆರೆಹಿಡಿದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಅನೇಕ ಜನ ನಿಬ್ಬೆರಾಗಾಗಿ ನೋಡಿದ್ದಾರೆ.
ಘಟನೆಯ ನಂತರ aa ವ್ಯಕ್ತಿಯ ಕುಟುಂಬದವರು ಆ ಪಾರ್ಕ್ ನ ಮೇಲ್ವಿಚಾರಿಗಳ ವಿರುದ್ಧ ಆರೋಪವನ್ನು ಹೊರೆಸಿದ್ದಾರೆ. ಪಾರ್ಕ್ ಒಳಗೆ ಹೋದರೆ ಅಲ್ಲಿ ಯಾವುದೇ ರೀತಿಯ ಸೂಚನಾ ಫಲಕಗಳಿಲ್ಲ, ಪ್ರವೇಶ ನಿಷೇಧದ ಸಲಹಾಸೂಚಿ ಇದ್ದರೆ ಅಲ್ಲಿಗೆ ಹೋಗುತ್ತಿರಲಿಲ್ಲ ಎಂದು ಆರೋಪ ಮಾಡಿದ್ದಾರೆ ಆ ಆರೋಪವನ್ನು ನಿರಾಕರಿಸಿದ ಪಾರ್ಕ್ ಮೇಲ್ವಿಚಾರಕರು ಪಾರ್ಕ್ ನಲ್ಲಿ ಎಲ್ಲಾ ಸಲಹಾ ಸೂಚನೆಗಳು ಇದೆ ಅದನ್ನು ಮೊದಲು ಗಮನಿಸಬೇಕಿತ್ತು ಎಂದು ಹೇಳಿದ್ದಾರೆ.
ಸದ್ಯ ಆ ವ್ಯಕ್ತಿಯ ತೋಳಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ವ್ಯಕ್ತಿಯ ವೈದ್ಯಕೀಯ ಪರೀಕ್ಷೆಗೆ ಪಾರ್ಕ್ ನಿಂದಲೇ ಹಣವನ್ನು ನೀಡಿ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದಾರೆ