ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಆನ್ ಲೈನ್ ಬೆಟ್ಟಿಂಗ್ ಗೆ ಕ್ರಿಕೆಟ್ ಕ್ರೀಡಾಪಟುವೊಬ್ಬ ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ಮಿಥುನ್ ಶೆಟ್ಟಿ(22) ಮೃತ ಪಟ್ಟ ಯುವಕ.
ಇದನ್ನೂ ಓದಿ; ಕೊಪ್ಪ: ಮೇಯುವಾಗ ಆಯಾ ತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದ ಹಸು
ತೀರ್ಥಹಳ್ಳಿಯ ಬೊಮ್ಮನಹಳ್ಳಿ ಸಂಜೀವ್ ಶೆಟ್ಟಿ ಅವರ ಪುತ್ರ ಮಿಥುನ್ ಶೆಟ್ಟಿ, ತೀರ್ಥಹಳ್ಳಿಯ ಕಟ್ಟೆಹಕ್ಲುವಿನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಉತ್ತಮ ಕ್ರಿಕೆಟ್ ಕ್ರೀಡಾಪಟು ಆಗಿದ್ದ ಮಿಥುನ್ ಶೆಟ್ಟಿ, ಬೆಟ್ಟಿಂಗ್ ಆಡಲು ಸಾಲ ಮಾಡಿ ಸಾಲಗಾರರ ಕಿರಿಕಿರಿಯಿಂದ ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- debit card ಇಲ್ಲದೆಯೇ atmನಿಂದ ಹಣವನ್ನು ಸುಲಭವಾಗಿ ಪಡೆಯಬಹುದು
- ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಸೋರುತಿರುವ ಶಾಲೆ ಮಳಿಗೆ
- amarnath yatra: ಅಮರನಾಥ ಯಾತ್ರೆಗೆ ತೆರಳಿದ್ದ ಕಾಫಿನಾಡಿಗರು ಸೇಫ್
ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಭಾಗದಲ್ಲಿ ಆನೈನ್ ಹಾಗೂ ಆಫ್ ಲೈನ್ ಬೆಟ್ಟಿಂಗ್ ದಂಧೆ ಜೋರಾಗಿದ್ದು, ಯುವಕರಿಂದ ಹಿಡಿದು ಮುದುಕರವರೆಗೆ ಈ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ; ಜಯಪುರ: ಸಹಕಾರ ಸಂಘದ ಕರ್ತವ್ಯ ನಿರತ ಕಾವಲುಗಾರನ ಮೇಲೆ ಹಲ್ಲೆ; ಆರೋಪಿಗಳಿಬ್ಬರ ಬಂಧನ
Amarnath Yatra: ಅಮರನಾಥ ಯಾತ್ರೆಗೆ ತೆರಳಿದ್ದ ಕಾಫಿನಾಡಿಗರು ಸೇಫ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಳೆ ಆರ್ಭಟ ಹೆಚ್ಚಾದ ಪರಿಣಾಮ ಅಮರನಾಥದಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದೆ. ಇದರಿಂದ ಕರ್ನಾಟದಿಂದ ತೆರಳಿದ್ದ ಹಲವು ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ ಯಾತ್ರೆಗೆ ಹೋಗಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮೂಲದ ಪ್ರವಾಸಿಗರು ಯಾವುದೇ ತೊಂದರೆ ಇಲ್ಲದೆ ಸೇಫ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಶ್ರೀನಿವಾಸ್, ಮಣಿ, ಭರತ್, ಚಂದ್ರಶೇಖರ್, ಮನೋಜ್ ಎಂಬ ಐವರು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ವಾರ ಯಾತ್ರೆಗೆ ತೆರಳಿದ್ದ ಈ ಐವರ ತಂಡ ಇದೀಗ ಶೇಷನಾಗ್ ಪ್ರದೇಶದಲ್ಲಿದ್ದಾರೆ ಎಂದು ತಿಳಿದುಬಂದಿದೆ.