ಚೆನ್ನೈ: ದೀಪಾವಳಿಯ ಹಬ್ಬದ ಸಲುವಾಗಿ ಪಟಾಕಿ ಖರೀದಿಸಲು ಹೋದ ಐವರು ಪಟಾಕಿ ಅಂಗಡಿಯಲ್ಲಿಯೇ ಸಜೀವವಾಗಿ ಸುಟ್ಟು ಹೋದ ದಾರುಳ ಘಟನೆ ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ಶಂಕರಪುರದಲ್ಲಿ ನಡೆದಿದೆ.
ದೀಪಾವಳಿ ಹಬ್ಬ ಎಂದರೆ ಎಲ್ಲೆಡೆ ಪಟಾಕಿಗಳ ಸಂಭ್ರಮ. ಪಟಾಕಿ ಹೊಡೆದು ದೀಪಾವಳಿಯನ್ನು ಸಂಭ್ರಮಿಸುವ ಸಲುವಾಗಿ ಪಟಾಕಿ ಖರೀದಿಗೆ ಹೋದ ಐವರು ಪಟಾಕಿ ಅಂಗಡಿಯಲ್ಲಿಯೇ ಸಜೀವವಾಗಿ ದಹಿಸಿಹೋದ ದಾರುಣ ಘಟನೆ ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ಶಂಕರಪುರದಲ್ಲಿ ನಡೆದಿದೆ.
ಪಟಾಕಿ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಪಟಾಕಿಯ ಜೊತೆ ಅಂಗಡಿಯಲ್ಲಿದ್ದ ಸಿಲಿಂಡರ್ ಕೂಡ ಸ್ಫೋಟಗೊಂಡು ಅಂಗಡಿಯಲ್ಲಿದ್ದ ಅನೇಕ ಮಂದಿ ಗಾಯಗೊಂಡು ಐವರು ಸಜೀವವಾಗಿ ಬೆಂಕಿಗೆ ಆಹುತಿಯಾಗಿದ್ದಾರೆ. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಎಲ್ಲರನ್ನು ರಕ್ಷಿಸಿ ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.