Wednesday, November 29, 2023
Homeರಾಜ್ಯರಾಜ್ಯದಲ್ಲಿ ಶಾಲಾ - ಕಾಲೇಜ್ ಅನ್ನು ಆಗಸ್ಟ್ 23 ರಿಂದ ಆರಂಭಿಸಲು ನಿರ್ಧಾರ :...

ರಾಜ್ಯದಲ್ಲಿ ಶಾಲಾ – ಕಾಲೇಜ್ ಅನ್ನು ಆಗಸ್ಟ್ 23 ರಿಂದ ಆರಂಭಿಸಲು ನಿರ್ಧಾರ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿರುವ ಶಾಲಾ-ಕಾಲೇಜುಗಳನ್ನು ಆಗಸ್ಟ್23 ರಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಶಾಲೆ ಆರಂಭಿಸಲು ನಿರ್ಧರಿಸಲಾಗಿದ್ದು ಅದರಂತೆ ಆಗಸ್ಟ್ 23 ರಿಂದ 9, 10, 11, 12 ನೇ ತರಗತಿಗಳು ಆರಂಭವಾಗಲಿವೆ.

ಬ್ಯಾಚ್ ವೈಸ್ ಶಾಲೆಯನ್ನು ಆರಂಭಿಸಲು ನಿರ್ಧರಿಸಿರುವ ಸರ್ಕಾರ ಮುಂದೆ ಕೊರೋನಾ ತೀವ್ರತೆಯನ್ನು ನೋಡಿಕೊಂಡು ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆಯನ್ನು ಆರಂಭಿಸುವ ವಿಚಾರವನ್ನು ಆಗಸ್ಟ್ ಕೊನೆಯ ವಾರದಲ್ಲಿ ಸಭೆ ನಡೆಸಿ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Most Popular

Recent Comments