ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನೆರೆಯ ರಾಜ್ಯ ಕೇರಳದಲ್ಲಿ ಒಂದೇ ದಿನ ಮೂವತ್ತು ಸಾವಿರಕ್ಕೂ ಅಧಿಕ ಜನಕ್ಕೆ ಸೋಂಕು ತಗುಲಿದೆ. ಇತ್ತ ಸಾವಿನ ಸಂಖ್ಯೆ ಸಹ ಪ್ರತಿದಿನ ಏರಿಳಿತವನ್ನು ಕಾಣುತ್ತಿದೆ.
ಕಳೆದ 24 ಗಂಟೆಯಲ್ಲಿ 46,164 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 607 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ 216 ಮತ್ತು ಕೇರಳದಲ್ಲಿ 215 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಕೊರೊನಾದಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ.97.63ರಷ್ಟಿದೆ.
ನೆರೆಯ ರಾಜ್ಯ ಕೇರಳಲ್ಲಿ ಕೊರೊನಾ ಸ್ಫೋಟವಾಗಿದ್ದು, ಒಂದೇ ದಿನ 31,445 ಜನ ಸೋಂಕಿಗೆ ತುತ್ತಾಗಿದ್ದಾರೆ. ಹಾಗೂ ಮಹಾರಾಷ್ಟ್ರದಲ್ಲಿಯೂ ಕೊರೊನಾ ಐದು ಸಾವಿರದ ಗಡಿಯನ್ನು ದಾಟಿದ್ದು, 215 ಜನ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಶೇ.19.03 ಕ್ಕೆ ಏರಿಕೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ 5,225 ಹೊಸ ಪ್ರಕರಣ ವರದಿಯಾಗಿದ್ದು, ಸದ್ಯ 50,183 ಸಕ್ರಿಯ ಪ್ರಕರಣಗಳಿವೆ. ಪುಣೆ 12,673, ಠಾಣೆ 7,041, ಸತಾರಾ 5,400, ಅಹಮದನಗರ 4,716 ಮತ್ತು ಸಾಂಗ್ಲಿಯಲ್ಲಿ 4,668 ಸಕ್ರಿಯ ಪ್ರಕರಣಗಳಿವೆ. ಮುಂಬೈನಲ್ಲಿ ಬುಧವಾರ 342 ಜನ ಸೋಂಕಿಗೆ ತುತ್ತಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.