Saturday, December 9, 2023
Homeವಿಶೇಷತಂತ್ರಜ್ಞಾನಜನರಿಗೆ ಉಪಯುಕ್ತವಾಗಲು ವಾಟ್ಸ್ ಆ್ಯಪ್ ನಲ್ಲಿ ಸಿಗಲಿದೆ ಕೋವಿಡ್ ಸರ್ಟಿಫಿಕೇಟ್ !!!

ಜನರಿಗೆ ಉಪಯುಕ್ತವಾಗಲು ವಾಟ್ಸ್ ಆ್ಯಪ್ ನಲ್ಲಿ ಸಿಗಲಿದೆ ಕೋವಿಡ್ ಸರ್ಟಿಫಿಕೇಟ್ !!!

ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಪಡೆಯಲು ಹಾಗೂ ಕರೋನಾ ಕುರಿತ ಇತರ ಮಾಹಿತಿ ತಿಳಿಯಲು ಕೇಂದ್ರ ಸರ್ಕಾರವು ಸರಳೀಕೃತ  ಹೆಲ್ಪ್ ಡೆಸ್ಕ್ ಒಂದನ್ನು ಆರಂಭಿಸಿದೆ.

ಕೇoದ್ರ ಸರ್ಕಾರದ  ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಈ ಕೋವಿಡ್ ಹೆಲ್ಪ್ ಡೆಸ್ಕ್ ನನ್ನು ಆರಂಭಿಸಿದೆ,

9013151515 ಈ ವಾಟ್ಸ್ ಆ್ಯಪ್ ಸಂಖ್ಯೆಗೆ ಕೋವಿಡ್ ಸರ್ಟಿಫಿಕೇಟ್(COVID CERTIFICATE) ಎಂದು ಇಂಗ್ಲೀಷಿನಲ್ಲಿ ಕಳುಹಿಸಿದರೆ ಅಲ್ಲಿಂದ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಮೆಸೇಜ್ ಬರುತ್ತದೆ,
ಅದನ್ನು ನಿಮ್ಮ ಮೊಬೈಲ್ ನಲ್ಲಿ ವಾಟ್ಸ್ಆ್ಯಪ್‌ನಲ್ಲಿ ದಾಖಲಿಸಿದರೆ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಬರುತ್ತದೆ. ಮತ್ತು ಮೆನು (MENU) ಎಂದು ಟೈಪ್ ಮಾಡಿದರೆ ಕೋವಿಡ್ ಲಸಿಕೆ ನೀಡುವ ಕೇಂದ್ರಗಳು ಹಾಗೂ ಕೋವಿಡ್ ಕುರಿತ ಇತ್ತೀಚಿನ ವಿಚಾರಗಳ ಬಗ್ಗೆ ಮಾಹಿತಿಯು ಲಭ್ಯವಾಗುತ್ತದೆ ಕೇಂದ್ರ ಸರ್ಕಾರವು ಮಾಹಿತಿಯನ್ನು ನೀಡಿದೆ.

Most Popular

Recent Comments