Tuesday, November 28, 2023
Homeವಿಶೇಷಆರೋಗ್ಯಮಕ್ಕಳಿಗೆ ಆತಂಕ ಕಾರಿಯಾಗಿ ಕಾಡುತ್ತಿರುವ ಕೊರೋನ ಮೂರನೇ ಅಲೆ

ಮಕ್ಕಳಿಗೆ ಆತಂಕ ಕಾರಿಯಾಗಿ ಕಾಡುತ್ತಿರುವ ಕೊರೋನ ಮೂರನೇ ಅಲೆ

ಬೆಂಗಳೂರು:  ಕರ್ನಾಟಕದಲ್ಲಿ ಕಳೆದ ಐದು ದಿನಗಳಲ್ಲಿ ಕನಿಷ್ಠ 242 ಮಕ್ಕಳು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಸರ್ಕಾರದ ಅಂಕಿಅoಶಗಳಿoದ ಈ ಮಾಹಿತಿಯನ್ನು ಕಲೆಹಾಕಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

ಕೋರೊನಾ ಎರಡನೇ ಅಲೆಯ ಸಮಯದಲ್ಲಿ, ತಜ್ಞರು ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ನಿರೀಕ್ಷಿಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಈ ಅಂಕಿಅoಶಗಳು ಮತ್ತೊಮ್ಮೆ ಆತಂಕವನ್ನು ಹೆಚ್ಚಿಸಿವೆ.

ಕಳೆದ ಐದು ದಿನಗಳಲ್ಲಿ, 19 ವರ್ಷಕ್ಕಿಂತ ಕಡಿಮೆ ವಯಸ್ಸಿನ 242 ಮಕ್ಕಳ ವರದಿಗಳು ಹೊರಬಂದಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ.

ಕೊರೋನಾ ಮೂರನೇ ಅಲೆ ಶುರುವಾಗಿದೆ ಎಂದು ತಜ್ಞರು ಹೇಳಿದ್ದಾರೆ ಇವರಲ್ಲಿ 106 ಮಕ್ಕಳು 9 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಅಂಕಿ-ಅoಶಗಳು ತಿಳಿಸಿವೆ. ಆದರೆ,136 ಮಕ್ಕಳು 9 ರಿಂದ 19 ವರ್ಷದೊಳಗಿನವರಾಗಿದ್ದಾರೆ. ಮಂಗಳವಾರ, ರಾಜ್ಯದಲ್ಲಿ 1.338 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಸಮಯದಲ್ಲಿ 31 ರೋಗಿಗಳು ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ.

ಈ ಕುರಿತು ಹೇಳಿಕೆಯನ್ನು ನೀಡಿರುವ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಕೆಲವೇ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದೆ,

ರಾಜ್ಯ ಸರ್ಕಾರ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ಘೋಷಿಸಿದೆ. ಇದಲ್ಲದೆ ಕೇರಳ-ಕರ್ನಾಟಕ, ಮಹಾರಾಷ್ಟ್ರ-ಕರ್ನಾಟಕ ಗಡಿಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಕೇವಲ ಸರ್ಟಿಫಿಕೆಟ್ RTPCR ಹೊಂದಿರುವ ಯಾತ್ರಿಗಳ ಪ್ರಯಾಣಕ್ಕೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಅದೂ ಕೂಡ ಈ ಸರ್ಟಿಫಿಕೆಟ್ 72 ಗಂಟೆಗಳಿಗಿoತ ಹಳೆಯದಾಗಿರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಕಳೆದ ತಿಂಗಳು ರಾಜ್ಯದಲ್ಲಿ ಪ್ರತಿ ನಿತ್ಯ 1500 ಕ್ಕೂ ಅಧಿಕ ಪ್ರಕರಣಗಳು ಮುಂದೆ ಬಂದಿದ್ದವು. ಇತ್ತೀಚೆಗಷ್ಟೇ ರಾಜ್ಯದಲ್ಲಿ ಹೊಸದಾಗಿ ಮುಖ್ಯಮಂತ್ರಿಯ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವ್ಯಾಕ್ಸಿನ್ ಪ್ರಮಾಣಗಳನ್ನು 65 ಲಕ್ಷದಿಂದ 1 ಕೋಟಿ ಪ್ರತಿ ತಿಂಗಳು ಹೆಚ್ಚಿಸುವುದಾಗಿ ಹೇಳಿದ್ದಾರೆ.

ಮೂಲಗಳು ನೀಡಿರುವಂತಹ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ ಆಗಸ್ಟ್ 16  ರಿಂದ ಭಾಗಶಃ ಲಾಕ್ ಡೌನ್ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಇದುವರೆಗೆ ಕೊವಿಡ್ 19 ನ 29.21.049 ಪ್ರಕರಣಗಳು ವರದಿಯಾಗಿವೆ ಇವುಗಳಲ್ಲಿ 36,088 ರೋಗಿಗಳು ಮೃತಪಟ್ಟಿದ್ದಾರೆ. ಪ್ರಸ್ತುತ 22,702 ರೋಗಿಗಳ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

Most Popular

Recent Comments