Sunday, December 3, 2023
Homeಮಲೆನಾಡುಚಿಕ್ಕಮಗಳೂರುಚೆಕ್ ಬೌನ್ಸ್ ಪ್ರಕರಣ; ಚಿಕ್ಕಮಗಳೂರಿನ ಕಾಂಗ್ರೆಸ್ ಮುಖಂಡ ಬಿ. ಹೆಚ್ ಹರೀಶ್ ಗೆ ದಂಡ ವಿಧಿಸಿದ...

ಚೆಕ್ ಬೌನ್ಸ್ ಪ್ರಕರಣ; ಚಿಕ್ಕಮಗಳೂರಿನ ಕಾಂಗ್ರೆಸ್ ಮುಖಂಡ ಬಿ. ಹೆಚ್ ಹರೀಶ್ ಗೆ ದಂಡ ವಿಧಿಸಿದ ಕೋರ್ಟ್

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್‌ ಮುಖಂಡ ಬಿ ಎಚ್‌ ಹರೀಶ್ ಅವರಿಗೆ ಚೆಕ್‌ ಬೌನ್ಸ್ ಪ್ರಕರಣವೊಂದರಲ್ಲಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತಲಾ 5,000 ದಂಡ ವಿಧಿಸಿದೆ.

ಚಿಕ್ಕಮಗಳೂರಿನ ನಗರದ ಕೋಟೆ ಬಡಾವಣೆಯ ಸಿ ಎಚ್‌ ವೆಂಕಟನಾರಾಯಣ ರೆಡ್ಡಿ ಎಂಬುವರ ಬಳಿ 2018ರಲ್ಲಿ ಬಿ ಹೆಚ್ ಹರೀಶ್ ₹1.10 ಕೋಟಿ ಸಾಲ ಪಡೆದಿದ್ದರು. ಸಾಲಕ್ಕೆ ₹50 ಲಕ್ಷ ಮತ್ತು ₹60 ಲಕ್ಷದ ಎರಡು ಚೆಕ್‌ಗಳನ್ನು ನೀಡಿದ್ದರು. ಆ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿದ್ದ ಹರೀಶ್‌ ಅವರು, ವಿಧಾನಸಭೆ ಚುನಾವಣೆಗೂ ಸ್ಪರ್ಧೆ ಮಾಡಿದ್ದರು. ಆ ಬಳಿಕ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡದಿದ್ದರಿಂದ ವೆಂಕಟರಮಣರೆಡ್ಡಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಗುರುವಾರ ಈ ಆದೇಶ ಹೊರಡಿಸಿದೆ. ಐದು ವರ್ಷ ಸಾಲ ಮರುಪಾವತಿ ಮಾಡದಿರುವುದಕ್ಕೆ ಬಡ್ಡಿ ಸೇರಿಸಿ ಪ್ರತಿ ಚೆಕ್‌ಗೆ ಕ್ರಮವಾಗಿ ‌₹65 ಲಕ್ಷ ಮತ್ತು ₹78 ಲಕ್ಷ ಮರುಪಾವತಿ ಮಾಡಬೇಕು. ಜತೆಗೆ ತಲಾ ₹5 ಸಾವಿರ ದಂಡ ಪಾವತಿಸಬೇಕು. ಪಾವತಿಸಲು ಸಾಧ್ಯವಾಗದಿದ್ದರೆ ಎರಡೂ ಪ್ರಕರಣದಲ್ಲಿ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿ. ಹೆಚ್ ಹರೀಶ್ ಕಾಂಗ್ರೆಸ್ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ ಪ್ರಭಲ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಹೆಚ್ ಡಿ ತಮ್ಮಯ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು.

ಚಿಕ್ಕಮಗಳೂರು ಜಿ.ಪಂ ಸಿಇ ಓ ಪ್ರಭು ವರ್ಗಾವಣೆ

ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಅದರ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಿಇಓಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿ ಪ್ರಭು ಅವರನ್ನು ಜಿ ಪ್ರಭು ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಿಪತ್ತು ನಿರ್ವಹಣಾ ಮಂಡಳಿಯ ಆಯುಕ್ತರಾಗಿ ಚಿಕ್ಕಮಗಳೂರು ಜಿಲ್ಲೆಯಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಸಿಈಓ ಪ್ರಭು ಜಿ ಅವರನ್ನು ಸೇರಿದಂತೆ ಒಟ್ಟು 10 ಮಂದಿ ಐಎಎಸ್ ಅಧಿಕಾರಿಗಳನ್ನು ವಿವಿಧ ಇಲಾಖೆಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

Most Popular

Recent Comments