Tuesday, November 28, 2023
Homeಇತರೆಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಿ ಎಸ್.ಯಡಿಯೂರಪ್ಪ, ಡಿ. ಕೆ ಶಿವಕುಮಾರ್ ಸೇರಿ 13 ರಾಜಕಾರಣಿಗಳ ವಿರುದ್ಧ...

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಿ ಎಸ್.ಯಡಿಯೂರಪ್ಪ, ಡಿ. ಕೆ ಶಿವಕುಮಾರ್ ಸೇರಿ 13 ರಾಜಕಾರಣಿಗಳ ವಿರುದ್ಧ ಎಸಿಬಿಗೆ ದೂರು ದಾಖಲು.

ಬೆಂಗಳೂರು:ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ 13 ರಾಜಕಾರಣಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಎಸಿಬಿಗೆ ದೂರನ್ನು ನೀಡಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ 13 ರಾಜಕಾರಣಿಗಳ ವಿರುದ್ಧ ದೂರನ್ನು ನೀಡಿದ್ದಾರೆ.

ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರೇ ಆದ ವಿ.ಎಸ್. ಉಗ್ರಪ್ಪ, ಸಲೀಂ ನಡುವೆ ನಡೆದ ‘ಕಲೆಕ್ಷನ್ ಗಿರಾಕಿ’ ಸಂಭಾಷಣೆಯನ್ನು ಆಧಾರವಾಗಿಟ್ಟುಕೊಂಡು ಎಸಿಬಿಗೆ ದೂರನ್ನು ನೀಡಲಾಗಿದೆ ಮತ್ತು ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ಅವರು ನೀರಾವರಿ ಹಾಗೂ ಜಲಸಂಪನ್ಮೂಲ ಖಾತೆ ಸಚಿವರಾಗಿದ್ದಾಗ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಇದೀಗ 8ರಿಂದ 12 ಪರ್ಸೆಂಟ್ ಕಮಿಷನ್ ಗಳನ್ನು ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಗೊತ್ತಿದ್ದರೂ ಕೆಪಿಸಿಸಿ ಅಧ್ಯಕ್ಷರ ಸ್ಥಾನವನ್ನು ನೀಡಿರುವ ರಾಹುಲ್ ಗಾಂಧಿಯ ವಿರುದ್ಧವೂ ದೂರು ನೀಡಲಾಗಿದೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರವರ ವಿರುದ್ಧನೀರಾವರಿ ಇಲಾಖೆಯಲ್ಲಿ ಲಂಚವನ್ನು ಪಡೆದು ಗುತ್ತಿಗೆದಾರರಿಗೆ ಸಾವಿರಾರು ಕೋಟಿ ಬಿಡುಗಡೆ ಮಾಡಿರುವ ಆರೋಪವಿದ್ದು, ಎಲ್ಲಾ ನಾಯಕರ ವಿರುದ್ಧ ತನಿಖೆಯನ್ನು ನಡೆಸಿ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಆಲಂ ಪಾಷಾ, ಎಸಿಬಿಗೆ ದೂರನ್ನು ನೀಡಿದ್ದಾರೆ.

Most Popular

Recent Comments