Wednesday, April 24, 2024
Homeಇತರೆವಯಸ್ಕರ ಕೊರೋನ ಲಸಿಕೆ ಹಂಚಿಕೆಯ ನಂತರ ಮಕ್ಕಳಿಗೆ ಲಸಿಕೆ ಹಂಚಿಕೆ ಕಾರ್ಯಕ್ರಮ : ರಾಷ್ಟ್ರೀಯ ಲಸಿಕಾ...

ವಯಸ್ಕರ ಕೊರೋನ ಲಸಿಕೆ ಹಂಚಿಕೆಯ ನಂತರ ಮಕ್ಕಳಿಗೆ ಲಸಿಕೆ ಹಂಚಿಕೆ ಕಾರ್ಯಕ್ರಮ : ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ

ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಿoದ ಜೈಡಸ್ ಕ್ಯಾಡಿಲ್ಲ ಮಕ್ಕಳ(12- 17) ಲಸಿಕೆ ಬಳಕೆಗೆ ಅನುಮತಿಯು ದೊರೆತಿದ್ದರೂ, ಮಕ್ಕಳಿಗೆ ಲಸಿಕಾ ಹಂಚಿಕೆ ಕಾರ್ಯಕ್ರಮ ಸದ್ಯಕ್ಕೆ ಶುರುವಾಗುವುದಿಲ್ಲ. ವಯಸ್ಕರಿಗೆ ಲಸಿಕೆಯು ಹಂಚಿಕೆಯಾದ ನಂತರ ಮಕ್ಕಳಿಗೆ ಲಸಿಕಾ ಹಂಚಿಕೆ ಕಾರ್ಯಕ್ರಮ ನಡೆಯಲಿದೆ ಎಂದು ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾಸಮಿತಿಯ ಅಧ್ಯಕ್ಷರು ಮಾಹಿತಿಯನ್ನು ನೀಡಿದ್ದಾರೆ.

ಕೊರೊನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುವ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತಹ ಮಕ್ಕಳಿಗೆ ಅಕ್ಟೋಬರ್ ನಿಂದ ಜೈಡಸ್ ಕೊರೊನಾ ಲಸಿಕೆಯನ್ನು ನೀಡಲಾಗುತ್ತದೆ. ವಯಸ್ಕರಿಗೆ ಕೊರೊನಾ ಭಯವು ಹೆಚ್ಚಾಗಿತುವುದರಿಂದ ಮೊದಲು ಅವರಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ ಅನಂತರ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವಂತಹ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತದೆ.

ಮಕ್ಕಳಿಗೆ ಸಾರ್ವತ್ರಿಕವಾಗಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ನಮ್ಮ ಉದ್ದೇಶ ಎಂದು ಲಸಿಕಾಕರಣದ ಸಲಹಾ ಸಮಿತಿಯ ಅಧ್ಯಕ್ಷ ಎನ್.ಕೆ ಅರೋರಾರವರು ತಿಳಿಸಿದ್ದಾರೆ

ಕೊರೊನಾದಿಂದ ಮಕ್ಕಳಿಗೆ ಇರುವ ಅಪಾಯದ ಮಟ್ಟವು ಕಡಿಮೆ ಆದ್ದರಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಲಸಿಕೆ ಅಭಿವೃದ್ಧಿಗೊಂಡಾಗ ಅವರಿಗೆ ಲಸಿಕೆಯನ್ನು ನೀಡಬಹುದು. ಇಂದು ಮಾರುಕಟ್ಟೆಯಲ್ಲಿರುವಂತಹ ಕೊರೊನಾ ಲಸಿಕೆಗಳು ಯಾವುದೇ ರೀತಿಯ ಕೊರೊನಾ ಹರಡುವಿಕೆಯನ್ನು ತಡೆಯುವುದಿಲ್ಲ. ಕೊರೋನಾ ತಗುಲಿದ ನಂತರ ಆಸ್ಪತ್ರೆಗೆ ದಾಖಲಾಗದಂತೆ, ಸೋಂಕಿತ ಹೆಚ್ಚಿನ ಆರೋಗ್ಯದ ಸಮಸ್ಯೆಗೆ ತುತ್ತಾಗದಂತೆ ತಡೆಯುತ್ತದೆ ಎಂದು ಹೇಳಿದ್ದಾರೆ.

Most Popular

Recent Comments