ಬೆಂಗಳೂರು: ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವಾಗಿದ್ದು, ಹಬ್ಬದ ಸಂಭ್ರಮಕ್ಕೆ ಸಿಲಿಕಾನ್ ಸಿಟಿ ಜನ ಸಜ್ಜಾಗಿದ್ದಾರೆ.
ನಗರದ ಮ್ಲಲೇಶ್ವರಂನಲ್ಲಿ ಕೊರೊನಾ ಕಟ್ಟುನಿಟ್ಟನ ನಿಯಮಗಳನ್ನು ಜಾರಿಗೊಳಿಸಿದ್ದರು ಸಹ ಜನರು ಮಾತ್ರ ಅದರ ಕಡೆ ಗಮನ ಹರಿಸುತ್ತಲೇ ಇಲ್ಲ.
ಕೊರೊನಾ ಸಂಪೂರ್ಣವಾಗಿ ಮುಗಿದೇ ಹೋಗಿದೆ ಎನ್ನುವ ಹಾಗೇ ಬೆಂಗಳೂರಿನ ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಮಲ್ಲೇಶ್ವರಂನಲ್ಲಿ ಜನ ನೈಟ್ ಕರ್ಫ್ಯೂ ಶುರುವಾದರೂ ಸಹ ಕೊಂಚವೂ ಅದನ್ನು ಪಾಲನೆ ಮಾಡದೇ ಹಬ್ಬಕ್ಕಾಗಿ ಹೂ, ಹಣ್ಣು, ಬಟ್ಟೆ, ದೇವರ ಅಲಂಕಾರದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.
ಇದು ಹಬ್ಬದ ಖರೀದಿ ಮಾತ್ರವಲ್ಲ ಕೊರೊನಾ ಮೂರನೇ ಅಲೆಯ ಆರಂಭಕ್ಕೂ ನಾಂದಿಯಾಗುವ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿದೆ. ಕಾರಣ ಜನ ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಬ್ರೇಕ್ ಮಾಡಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಇದೇ ವ್ಯಾಪಾರಕ್ಕೆ ಸರಿಯಾದ ಸಮಯ ಅಂತ ವ್ಯಾಪಾರಿಗಳು ಸಹ ನೈಟ್ ಕರ್ಫ್ಯೂ ಇದ್ದರೂ ಅಂಗಡಿಗಳನ್ನು ಓಪನ್ ಮಾಡಿಕೊಂಡಿದ್ದಾರೆ.