Tuesday, November 28, 2023
Homeಇತರೆಮತಾಂತರ ಪುಸ್ತಕ ಹಂಚಿದ ಆರೋಪ : ಕೇರಳ ಮೂಲದ ವ್ಯಕ್ತಿಯನ್ನು ಪೊಲೀಸರಿಗೊಪ್ಪಿಸಿದ ಬಜರಂಗದಳ

ಮತಾಂತರ ಪುಸ್ತಕ ಹಂಚಿದ ಆರೋಪ : ಕೇರಳ ಮೂಲದ ವ್ಯಕ್ತಿಯನ್ನು ಪೊಲೀಸರಿಗೊಪ್ಪಿಸಿದ ಬಜರಂಗದಳ

ಮಂಗಳೂರು: ಹಿಂದೂ ಧರ್ಮದ ವಿರೋಧಿ ಪುಸ್ತಕಗಳನ್ನು ಹಂಚುತ್ತಿದ್ದಾನೆಂದು ಕೇರಳ ಮೂಲದ ಅಮಾಯಕ ವ್ಯಕ್ತಿಯ ಮೇಲೆ ಬಜರಂಗದಳ ಕಾರ್ಯಕರ್ತರು ಗಂಭೀರ ಆರೋಪ ಹೊರಿಸಿದ ಘಟನೆ ನಗರದ ಪಾಂಡೇಶ್ವರದಲ್ಲಿ ಶುಕ್ರವಾರ ನಡೆದಿದೆ.

ಪಾಂಡೇಶ್ವರದ ಕೇರಳ ಮೂಲದ ಶಾಲೆಯೊಂದರ ಸಮೀಪದಲ್ಲಿ ಕೇರಳ ಕೊಟ್ಟಾಯಂ ನಿವಾಸಿ ರಾಜೇಯನ್ ಎಂಬುವವರು ಪುಸ್ತಕಗಳ ಬ್ಯಾಗ್ ಹಿಡಿದುಕೊಂಡು ಹೋಗುತ್ತಿದ್ದರು. ಈ ಸಮಯದಲ್ಲಿ ಸ್ಥಳಕ್ಕೆ ಧಾವಿಸಿದ ಬಜರಂಗದಳದ ಕಾರ್ಯಕರ್ತರು ಆತನನ್ನು ತಡೆದು ವಿಚಾರಿಸಿದ್ದಾರೆ. ಬಳಿಕ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ರಾಜೇಯನ್ ನನ್ನು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಪುಸ್ತಕಗಳನ್ನು ಒಳಗೊಂಡ ಬ್ಯಾಗ್‌ ಸಹಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಆತ ಮತಾಂತರದ ಪುಸ್ತಕ ಹಂಚುತ್ತಿರಲಿಲ್ಲ ಎನ್ನುವುದು ಬಹಿರಂಗವಾಗಿದೆ. ಕೊನೆಗೆ ಪೊಲೀಸರು ಆತನನ್ನು ಠಾಣೆಯಿಂದ ಕಳಿಸಿದ್ದಾರೆ. ಕೇರಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯದಲ್ಲಿ ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹಲವೆಡೆ ಅಮಾಯಕ ಹಿಂದೂಗಳನ್ನು ಚರ್ಚ್ ಗೆ ಕರೆದೊಯ್ದು ಪ್ರಾರ್ಥನೆ ಮಾಡಿಸುತ್ತಿರುವ ಆರೋಪಗಳು ಕೇಳಿಬಂದಿತ್ತು. ಅಲ್ಲದೇ ಕರ್ನಾಟಕದ ಶಾಸಕ ಗೂಳಿಹಟ್ಟಿ ಚಂದ್ರಶೇಖರ್ ಅವರ ತಾಯಿಯನ್ನು ಕೂತ ಮತಾಂತರ ಮಾಡಲಾಗಿದ್ದು ಇತ್ತಿಚಿಗೆ ಅವರು ಮರಳಿ ಹಿಂದೂ ಧರ್ಮಕ್ಕೆ ವಾಪಾಸ್ಸಾಗಿದ್ದಾರೆ

Most Popular

Recent Comments