ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಕಡೆಯ ಪಟ್ಟಿಯಲ್ಲಿ 43 ಜನರ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು ತರೀಕೆರೆಯಲ್ಲಿ ಶ್ರೀನಿವಾಸ್ ಗೆ ಟಿಕೆಟ್ ಘೋಷಿಸಿದೆ. ಕೈ ಟಿಕೆಟ್ ತಪ್ಪಿದ ಬೆನ್ನಲ್ಲೇ ಪ್ರಭಲ ಆಕಾಂಕ್ಷಿಯಾಗಿದ್ದ ಗೋಪಿಕೃಷ್ಣ ಕಣ್ಣೀರಿಟ್ಟಿದ್ದಾರೆ.
ತರೀಕೆರೆಯಲ್ಲಿ ಕೈ ಟಿಕೆಟ್ ಗಾಗಿ ಶ್ರೀನಿವಾಸ್ ಹಾಗೂ ಗೋಪಿಕೃಷ್ಣ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಲ್ಲದೇ ಅತೀ ಹೆಚ್ಚು ಲಿಂಗಾಯಿತ ಮತ ಹೊಂದಿರುವ ತರೀಕೆರೆಯ ಟಿಕೆಟ್ ಅನ್ನು ಲಿಂಗಾಯಿತ ನಾಯಕ ದೋರನಾಳು ಪರಮೇಶ್ ಗೆ ನೀವುವಂತೆ ಪರಮೇಶ್ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಸುಟ್ಟು ದೋರನಾಳು ಪರಮೇಶ್ ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿಯಲ್ಲಿ ಶ್ರೀನಿವಾಸ್ ಹೆಸರು ಘೋಷಣೆ ಮಾಡಿದೆ.
ಶ್ರೀನಿವಾಸ್ ಹೆಸರು ಘೋಷಣೆಯಾಗುತ್ತಿದ್ದಂತೆ ಕೆರಳಿದ ಗೋಪಿಕೃಷ್ಣ ಬೆಂಬಲಿಗರು ತಮ್ಮ ಜೊತೆ ಸೋತಾಗಲೂ ಇದ್ದಿದ್ದು ಗೋಪಿಕೃಷ್ಣ.. ಕೋವಿಡ್ ಸಮಯದಲ್ಲಿ ಜನರ ಜೊತೆ ಗೋಪಿಕೃಷ್ಣ ಇದ್ದರು. ಕಾಂಗ್ರೆಸ್ ನ ಈ ನಡೆ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ಗೋಪಿಕೃಷ್ಣ ಕಣ್ಣೀರು ಹಾಕಿದರು.
ಇದನ್ನೂ ಓದಿ; ksrtc ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ; ಪುಟ್ಟ ಕಂದಮ್ಮ ಸೇರಿ ಆರು ಮಂದಿ ಬಲಿ
ಇದನ್ನೂ ಓದಿ; 5 ನಿಮಿಷದಲ್ಲಿ ಕೈ ಸೇರುತ್ತೆ ಡಿಜಿಟಲ್ ವೋಟರ್ ಐಡಿ
ಇತ್ತೀಚಿನ ಜನಪ್ರಿಯ ಸುದ್ದಿಗಳು
- ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ಜೀವರಾಜ್ ಘೋಷಿಸಿರುವ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?
- ಶೃಂಗೇರಿ ಕ್ಷೇತ್ರದಿಂದ ಮಲ್ನಾಡ್ ಕೇಸರಿ ಸೇನೆಯ ಪುನೀತ್ ಪೂಜಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ.!
- ಕೊಪ್ಪದ ರ್ಯಾಪರ್ ಚೇತನ್ ನಿಂದ ‘rcb hawa’ ಹೊಸ ಸಾಂಗ್
ಇದನ್ನೂ ಓದಿ; ಹೊಳೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತ್ಯು.!
ಇದನ್ನೂ ಓದಿ👇:
ಕೊನೆಗೂ ಮೂಡಿಗೆರೆ ಹಾಗೂ ತರೀಕೆರೆಯ ಟಿಕೆಟ್ ಘೋಷಿದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಕಡೆಯ ಪಟ್ಟಿಯಲ್ಲಿ 43 ಜನರ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಕೊನಗೂ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೊದಲ 2 ಎರಡು ಪಟ್ಟಿ ಬಿಡುಗಡೆಗೊಳಿಸಿದ್ದ ಕಾಂಗ್ರೆಸ್ ಟಿಫ್ ಫೈಟ್ ಇರೋ ಕ್ಷೇತ್ರಗಳನ್ನು ಹಾಗೆ ಉಳಿಸಿಕೊಂಡಿತ್ತು. ಒಟ್ಟು 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ ಎಂಬುದರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ; ನವೋದಯ ವಿವಿದ್ದೋದ್ದೇಶ ಸೌಹಾರ್ದ ಬ್ಯಾಂಕ್ ಮಾನೇಜರ್ ವಿರುದ್ಧ ದೂರು
ಇನ್ನೂ ಮೂಡಿಗೆರೆ ಕ್ಷೇತ್ರದಿಂದ ನಯನ ಮೋಟಮ್ಮಗೆ ಟಿಕೆಟ್ ಫೈನಲ್ ಆಗಿದೆ. ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಶ್ರೀನಿವಾಸ್ ಅವರಿಗೆ ಟಿಕೆಟ್ ಫೈನಲ್ ಆಗಿದೆ.
ಮೂಡಿಗೆರೆಯಿಂದ ಕಾಂಗ್ರೆಸ್ ನಲ್ಲಿ 5ಕ್ಕೂ ಹೆಚ್ಚು ಜನ ಟಿಕೆಟ್ ಆಕಾಂಕ್ಷಿಗಳಿದ್ದರು, ನಯನ ಮೋಟಮ್ಮಗೆ ಟಿಕೆಟ್ ನೀಡಬಾರದೆಂದು ಹಲವು ಬಾರಿ ಬಹಿರಂಗ ಸಭೆ ಮಾಡಿದ್ದರು. ನಯನ ಮೋಟಮ್ಮ ಇಲ್ಲಿಯವರಲ್ಲ ಅವರು ಹೊರಗಿನವರು, ಮೋಟಮ್ಮ ಅವರ ಮಗಳು ಎನ್ನುವುದೇ ಚುನಾವಣೆಗೆ ಸ್ಪರ್ಧಿಸಲು ಮಾನದಂಡವಾಗುವುದಿಲ್ಲ ಎಂಬ ಮಾತುಗಳು ಮೂಡಿಗೆರೆಯ ಕಾಂಗ್ರೆಸ್ ಆಕಾಂಕ್ಷಿಗಳಿಂದ ಕೇಳಿಬಂದಿತ್ತು. ತೀವ್ರ ವಿರೋಧದ ನಡುವೆಯೂ ನಯನ ಮೋಟಮ್ಮಗೆ ಕೈ ಟಿಕೆಟ್ ಘೋಷಣೆ ಮಾಡಿದೆ.
ಇನ್ನು ತರೀಕೆರೆಯಲ್ಲಿ ಗೋಪಿಕೃಷ್ಣ ಪ್ರಭಲ ಆಕಾಂಕ್ಷಿಯಾಗಿದ್ದರು. ಲಿಂಗಾಯಿತ ನಾಯಕ ದೋರನಾಳು ಪರಮೇಶ್ ಕೂಡ ರೇಸ್ ನಲ್ಲಿದ್ದರು. ಇತ್ತೀಚಿಗಷ್ಟೇ ದೋರನಾಳು ಪರಮೇಶ್ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಕೊಟ್ಟು ಈ ಬಾರಿ ದೋರನಾಳ್ ಪರಮೇಶ್ ಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು. ಆದರೆ ನಿರೀಕ್ಷೆಯಂತೆ ಕಾಂಗ್ರೆಸ್ ಹೈಕಮಾಂಡ್ ಶ್ರೀನಿವಾಸ್ ಗೆ ಟಿಕೆಟ್ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲೂ ಟಿಕೆಟ್ ಘೋಷಣೆ ಮಾಡಿದ್ದು, ಬಾರೀ ಗೊಂದಲವಿರುವ ಚಿಕ್ಕಮಗಳೂರಿನ ಟಿಕೆಟ್ ಬಾಕಿ ಉಳಿಸಿಕೊಂಡಿದೆ.