ಉಡುಪಿ: ಡಿಕೆಶಿ ವಿರುದ್ಧ ಹೇಳಿಕೆಯನ್ನು ನೀಡಿದ್ದಕ್ಕೆ ಕಾಂಗ್ರೆಸ್ ನಿಂದಲೇ ಆ ನಾಯಕರನ್ನುಉಚ್ಛಾಟನೆ ಮಾಡಿ ಶೋಕಾಸ್ ನೋಟಿಸ್ ನನ್ನು ಜಾರಿಮಾಡಿದ್ದನ್ನು ವಿಷಾಧಿಸಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ್ದಾರೆ.
ಸತ್ಯವನ್ನು ಮಾತನಾಡುವವರಿಗೆ ಕಾಂಗ್ರೆಸ್ ನಲ್ಲಿ ಉಳಿಗಾಲವಿಲ್ಲ ಅವರನ್ನು ಪಕ್ಷದಿಂದದಲೇ ಉಚ್ಛಾಟನೆ ಮಾಡಲಾಗುತ್ತದೆ ಎಂದರು.
ಉಡುಪಿಯಲ್ಲಿ ಮಾಧ್ಯಮವರ್ಗದವರೊಂದಿಗೆ ಮಾತನಾಡಿದ ಅವರು, ನಾವು ಯಾರೂ ಇಂತಹ ಸ್ಥಿತಿಯನ್ನು ನಿರೀಕ್ಷೆ ಮಾಡಿರಲಿಲ್ಲ. ಪಕ್ಷದವರನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತಿರುವುದು ಕಾಂಗ್ರೆಸ್ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ದಲಿತ ನಾಯಕರ ಮನೆಗೆ ಬೆಂಕಿ ಹಾಕಿದಾಗಲೂ ಕಾಂಗ್ರೆಸ್ ಇದೇ ರೀತಿ ವರ್ತನೆಯನ್ನು ತೋರಿಸಿತ್ತು ಎಂದು ತಿಳಿಸಿದರು.
ಸತ್ಯ ಹೇಳಿದವರನ್ನು ಕಾಂಗ್ರೆಸ್ ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಈ ಘಟನೆಯಿಂದ ಗೊತ್ತಾಗಿದೆ. ಈ ಮಾತುಕತೆಯಿಂದ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿತ್ತು. ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕಾಗಿತ್ತು ಆದರೆ ಈ ರೀತಿ ವರ್ತನೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಸಚಿವರು ಹೇಳಿದರು