Monday, December 11, 2023
Homeರಾಜಕೀಯಎತ್ತಿನ ಬಂಡಿಯನ್ನು ಏರಿ ಹಸುಗಳಿಗೆ ತೊಂದರೆ ಕೊಡೋ ಬದಲು ಸೈಕಲ್ ನನ್ನು ಏರಿ ಪ್ರತಿಭಟನೆಯನ್ನು ಮಾಡಿದ್ದರೆ...

ಎತ್ತಿನ ಬಂಡಿಯನ್ನು ಏರಿ ಹಸುಗಳಿಗೆ ತೊಂದರೆ ಕೊಡೋ ಬದಲು ಸೈಕಲ್ ನನ್ನು ಏರಿ ಪ್ರತಿಭಟನೆಯನ್ನು ಮಾಡಿದ್ದರೆ ಚೆನ್ನಾಗಿರುತ್ತಿತ್ತು: ಡಾ.ಸುಧಾಕರ್

ಬೆಂಗಳೂರು : ತೈಲದ ಬೆಲೆಯಲ್ಲಿ ಆದಂತಹ ತೀವ್ರ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಎತ್ತಿನ ಬಂಡಿ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದು, ಇದನ್ನು ಸಚಿವ ಡಾ. ಸುಧಾಕರ್ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಕೆ ಸುಧಾಕರ್ ಎತ್ತಿನ ಬಂಡಿಯನ್ನು ಏರಿ ಹಸುಗಳಿಗೆ ತೊಂದರೆ ಕೊಡೋ ಬದಲು ಸೈಕಲ್ ನನ್ನು ಏರಿ ಪ್ರತಿಭಟನೆಯನ್ನು ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಟಾಂಗ್ ಕೊಟ್ಟರು.

ಇವರು ನಡೆಸಿದ ಈ ಪ್ರತಿಭಟನೆಯಿಂದ ವಿಧಾನಸೌಧಕ್ಕೆ ಬರೋದಕ್ಕೆ ಮುಕ್ಕಾಲು ಗಂಟೆ ತಡ ಆಯ್ತು. ಯಾರು ಬೆಲೆ ಏರಿಕೆ ಮಾಡಿದ್ದಾರೆ , ಯಾರು ಸಾಲದ ಬಾಂಡ್ ಮಾಡಿದ್ದಾರೆ ಯಾರ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆ ಆಗಿದೆ ಎಂದು ಎಂದು ಸದನದಲ್ಲಿ ಸುದೀರ್ಘವಾಗಿ ಚರ್ಚೆ ಮಾಡಬಹುದಾಗಿತ್ತು ಅದನ್ನ ಬಿಟ್ಟು ಸುಮ್ಮನೆ ಹೀಗೆ ಜನಸಾಮಾನ್ಯರಿಗೆ ತೊಂದರೆ ಕೊಡೋದು ಸರಿಯಲ್ಲ ಎಂದರು.

Most Popular

Recent Comments