ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಅನೇಕ ವರ್ಷಗಳಿಂದ ಜಿಲ್ಲಾ ಕಾಂಗ್ರೇಸ್ ಪ್ರಮುಖ ಪದಾಧಿಕಾರಿಯಾಗಿ ಪಕ್ಷದ ಕಾರ್ಯಚಟುವಟಿಕೆಗಳನ್ನು ಸಂಘಟಿಸುವಲ್ಲಿ ಮತ್ತು ಪಕ್ಷದ ಮುಖವಾಣಿಯಾಗಿ ಕೆಲಸ ಮಾಡಿದ್ದ ಹೆಚ್.ಎಸ್. ಪುಟ್ಟಸ್ವಾಮಿ ಹಿರೇಮಗಳೂರು ಕಾಂಗ್ರೇಸ್ ತೊರೆದು ಬಿ.ಜೆ.ಪಿ. ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ; ಸಿ.ಟಿ ರವಿ ಸೋಲಿಸಲು ಕಾಂಗ್ರೆಸ್ – ಜೆಡಿಎಸ್ ಒಳಒಪ್ಪಂದ
ನಿನ್ನೆ ಕಡೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಸಮ್ಮುಖದಲ್ಲಿ ಪುಟ್ಟಸ್ವಾಮಿ ಬಿ.ಜೆ.ಪಿ. ಸೇರ್ಪಡೆಯಾದರು.
ಚಿಕ್ಕಮಗಳೂರು ಜಿಲ್ಲಾ ಕಾಂಗ್ರೇಸ್ ವಕ್ತಾರರಾಗಿದ್ದ ನಗರಸಭೆ ಮಾಜಿ ಸದಸ್ಯ ಹೆಚ್.ಎಸ್. ಪುಟ್ಟಸ್ವಾಮಿ ಹಿರೇಮಗಳೂರು ಈ ಹಿಂದೆ ವಿಜಯಕರ್ನಾಟಕ ದಿನಪತ್ರಿಕೆ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು ನಂತರ ಕಾಂಗ್ರೇಸ್ ಪಕ್ಷವನ್ನು ಸೇರಿ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕೊನೆಯ ಹಂತದಲ್ಲಿ ನಾಮಪತ್ರ ಹಿಂಪಡೆದ ಬಿ.ಬಿ. ನಿಂಗಯ್ಯ
- ‘ಯಾರು ಡಮ್ಮಿ ಅನ್ನೋದನ್ನು ತೋರಿಸ್ತೀನಿ’ ಸೈಲೆಂಟಾಗೇ ಸವಾಲೆಸೆದ ತಿಮ್ಮಶೆಟ್ಟಿ ಹೇಳಿದ್ದೇನು? ಓದಿ
- ನಟ ಸಂಪತ್ ಜಯರಾಮ್ ಸಾವಿನ ರಹಸ್ಯ ಬಿಚ್ಚಿಟ್ಟ ಆತ್ಮೀಯ ಸ್ನೇಹಿತ!
ಒಂದು ಅವಧಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಪಕ್ಷದ ಜಿಲ್ಲಾ ವಕ್ತಾರರಾಗಿದ್ದರು. ಕಳೆದ ಅವಧಿಯಲ್ಲಿ ಚಿಕ್ಕಮಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ; ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದು ಮುಖಂಡ ಪ್ರವೀಣ್ ಖಾಂಡ್ಯ ಬಿಜೆಪಿ ಸೇರ್ಪಡೆ
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಪುಟ್ಟಸ್ವಾಮಿಯವರು ಕಾಂಗ್ರೇಸ್ ಪಕ್ಷದಲ್ಲಿ ಇತ್ತೀಚೆಗೆ ವಲಸೆ ಬಂದ ಹೆಚ್.ಡಿ.ತಮ್ಮಯ್ಯ ಅವರಿಗೆ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಿರುವುದನ್ನು ವಿರೋಧಿಸಿ, ಪಕ್ಷದಲ್ಲಿ ಸಂಘಟನೆ ಮಾಡುವವರಿಗೆ ಪ್ರೋತ್ಸಾಹ ಸಿಗದೇ ಪ್ರಾಮಾಣಿಕರನ್ನು ಮೂಲೆಗುಂಪು ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಇದನ್ನು ವಿರೋಧಿಸಿ ನಾನು ಕಾಂಗ್ರೇಸ್ ಪಕ್ಷವನ್ನು ತೊರೆದಿದ್ದೇನೆ ಎಂದಿದ್ದಾರೆ.
ನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ?
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ
1) ಎಂ ಪಿ ಈರೇಗೌಡ – ಆಮ್ ಆದ್ಮಿ ಪಾರ್ಟಿ
2) ಹೆಚ್ ಡಿ ತಮ್ಮಯ್ಯ – ಕಾಂಗ್ರೆಸ್ (inc)
3) ಬಿ ಎಮ್ ತಿಮ್ಮಶೆಟ್ಟಿ – ಜನತಾದಳ (ಜಾತ್ಯತೀತ)
4) ಸಿ ಟಿ ರವಿ – ಭಾರತೀಯ ಜನತಾ ಪಾರ್ಟಿ
5) ಸುಧಾ ಕೆ ಬಿ – ಬಹುಜನ ಸಮಾಜ ಪಾರ್ಟಿ
6) ಯತೀಶ್ ಬಿ ಜೆ – ಉತ್ತಮ ಪ್ರಜಾಕೀಯ ಪಾರ್ಟಿ
7) ಶಿವಪ್ರಕಾಶ್ – ಕರ್ನಾಟಕ ರಾಷ್ಟ್ರ ಸಮಿತಿ
8) ಅಫ್ಜಲ್ ಪಾಷ – ಪಕ್ಷೇತರ
9) ಸಿ ಕೆ ಜಗದೀಶ – ಪಕ್ಷೇತರ
10) ನೂರುಲ್ಲಾ ಖಾನ್ – ಪಕ್ಷೇತರ
11) ಮುನಿಯಪ್ಪಾ – ಪಕ್ಷೇತರ
12) ಹೆಚ್ ಸಿ ಮುಳ್ಳಪ್ಪ ಶೆಟ್ಟಿ – ಪಕ್ಷೇತರ
13) ಮೋಸೀನ – ಪಕ್ಷೇತರ
14) ಎಂ ಜಿ ವಿಜಯ ಕುಮಾರ್ – ಪಕ್ಷೇತರ
15) ಶಶಿಧರ ಬಿ ಜೆ – ಪಕ್ಷೇತರ
16) ಸೈಯದ್ ಜಬಿ – ಪಕ್ಷೇತರ
1) ಆನಂದ್ ಕೆ ಎಸ್ – ಕಾಂಗ್ರೆಸ್ (inc)
2) ವೈ ಎಸ್ ವಿ ದತ್ತಾ – ಜನತಾದಳ (ಜಾತ್ಯತೀತ)
3) ಬೆಳ್ಳಿ ಪ್ರಕಾಶ್ – ಭಾರತೀಯ ಜನತಾ ಪಾರ್ಟಿ
4) ರಾಜೇಶ್ವರಿ – ಆಮ್ ಆದ್ಮಿ ಪಾರ್ಟಿ
5) ಆನಂದ್ ಕೆ ಟಿ – ಸರ್ವೋದಯ ಕರ್ನಾಟಕ ಪಕ್ಷ
6) ಆನಂದ ನಾಯ್ಕ ಎಸ್ ಎಲ್ – ಕರ್ನಾಟಕ ರಾಷ್ಟ್ರ ಸಮಿತಿ
7) ಲೋಹಿತ ಜಿ ಟಿ – ಉತ್ತಮ ಪ್ರಜಾಕೀಯ ಪಾರ್ಟಿ
8) ಕೋಟಿ ಉಮೇಶ್ ಹೊಂಬಾಳೆ – ಪಕ್ಷೇತರ
9) ಕೆ ಆರ್ ಗಂಗಾಧರಪ್ಪ – ಪಕ್ಷೇತರ
10) ಹೆಚ್ ಆರ್ ಶ್ರೀನಿವಾಸ್ ಭಗೀರತ – ಪಕ್ಷೇತರ
ಮೂಡಿಗೆರೆ ವಿಧಾನಸಭಾ ಕ್ಷೇತ್ರ (ಎಸ್ ಸಿ ಮೀಸಲು)
1) ಎಂ. ಪಿ ಕುಮಾರಸ್ವಾಮಿ – ಜನತಾದಳ (ಜಾತ್ಯತೀತ)
2) ದೀಪಕ್ ದೊಡ್ಡಯ್ಯ – ಬಿಜೆಪಿ
3) ನಯನ ಮೋಟಮ್ಮ – ಕಾಂಗ್ರೆಸ್
4) ಪ್ರಭು ಸಿ. – ಆಮ್ ಆದ್ಮಿ ಪಾರ್ಟಿ
5) ಲೋಕವಳ್ಳಿ ರಮೇಶ – ಬಹುಜನ ಸಮಾಜ ಪಾರ್ಟಿ (bsp)
6) ಅಂಗಡಿ ಚಂದ್ರು – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (sdpi)
7) ರಮೇಶ್ ಕೆಳಗೂರು – ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ
8) ಚೇತನ್ ಪ್ರಸಾದ್ – ಪಕ್ಷೇತರ ಅಭ್ಯರ್ಥಿ
9) ರುದ್ರೇಶ್ ಕಹಳೆ – ಪಕ್ಷೇತರ
ಶೃಂಗೇರಿ ವಿಧಾನಸಭಾ ಕ್ಷೇತ್ರ
1) ಕೆ.ಎಮ್ ಗೋಪಾಲ – ಬಹುಜನ ಸಮಾಜ ಪಾರ್ಟಿ
2) ಜೀವರಾಜ್ ಡಿ ಎನ್ – ಭಾರತೀಯ ಜನತಾ ಪಾರ್ಟಿ (bjp)
3) ರಾಜನ್ ಗೌಡ ಹೆಚ್ ಎಸ್ – ಆಮ್ ಆದ್ಮಿ ಪಾರ್ಟಿ
4) ಟಿ ಡಿ ರಾಜೇಗೌಡ – ಕಾಂಗ್ರೆಸ್ (inc)
5) ಸುಧಾಕರ್ ಎಸ್ ಶೆಟ್ಟಿ – ಜನತಾದಳ (ಜಾತ್ಯತೀತ)
6) ಕಾಮ್ರೇಡ್ ಉಮೇಶ್ – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ
7) ಎಂ ಕೆ ದಯಾನಂದ ಮಾವಿನಕೆರೆ – ಪ್ರೌಟೀಸ್ಟ್ ಸರ್ವ ಸಮಾಜ
8) ಇಲ್ಲಿಯಾಜ್ ಅಹ್ಮದ್ – ಪಕ್ಷೇತರ
9) ಕೆ ಆರ್ ಕುಸುಮ – ಪಕ್ಷೇತರ
10) ಜಿ ಭಾರತಿ – ಪಕ್ಷೇತರ
11) ಅಭ್ರಾಹಾಮ್ – ಪಕ್ಷೇತರ
ತರೀಕೆರೆ ವಿಧಾನಸಭಾ ಕ್ಷೇತ್ರ
1) ಜಿ ಹೆಚ್ ಶ್ರೀನಿವಾಸ್ – ಕಾಂಗ್ರೆಸ್ (inc)
2) ಡಿ ಎಸ್ ಸುರೇಶ್ – ಭಾರತೀಯ ಜನತಾ ಪಾರ್ಟಿ
3) ಡಿ ಸಿ ಸುರೇಶ್ – ಆಮ್ ಆದ್ಮಿ ಪಾರ್ಟಿ
4) ಕೆ ಗೋವಿಂದಪ್ಪ – ಕರ್ನಾಟಕ ರಾಷ್ಟ್ರ ಸಮಿತಿ
5) ಬಿ ಪಿ ವಿಕಾಸ್ – ಉತ್ತಮ ಪ್ರಜಾಕೀಯ ಪಾರ್ಟಿ
6) ಕಡ್ಲೆ ಬಟ್ಟಿ ಅಶೋಕಣ್ಣ – ಪಕ್ಷೇತರ
7) ಗೋಪಿಕೃಷ್ಣ ಅಲಿಯಾಸ್ ಗೋಪಾಲ ಕೃಷ್ಣ – ಪಕ್ಷೇತರ
8) ಹೆಚ್ ಎಮ್ ಗೋಪಿಕೃಷ್ಣ – ಪಕ್ಷೇತರ
9) ಎ ಆರ್ ನಾಗರಾಜಪ್ಪ – ಪಕ್ಷೇತರ
10) ಸಿ ಎಂ ನಂಜುಂಡಪ್ಪ – ಪಕ್ಷೇತರ
11) ದೋರನಾಳು ಪರಮೇಶ್ – ಪಕ್ಷೇತರ
12) ರಫೀಕ್ ಅಹ್ಮದ್ – ಪಕ್ಷೇತರ
13) ಎ ಬಿ ರಾಜ್ ಕುಮಾರ್ – ಪಕ್ಷೇತರ
14) ಎ ಆರ್ ಸತೀಶ – ಪಕ್ಷೇತರ