ಬೆಂಗಳೂರು: ಬ್ರಿಟಿಷರ ಬೂಟಿನ ರುಚಿಯನ್ನು ಕಂಡಿರುವ ಬಿಜೆಪಿಗರು ಬ್ರಿಟಿಷರಿಗಿಂತ ಕ್ರೂರಿಗಳು ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿಯನ್ನು ನಡೆಸಿದರು
ಕೆಲವು ದಿನಗಳ ಹಿಂದೆ ಬಿಜೆಪಿ ಪಕ್ಷ, ಬ್ರಿಟಿಷರು ಜನರನ್ನು ಬಹಳ ಗೌರವದಿಂದ ನೋಡಿಕೊಳ್ಳುತ್ತಿದ್ದರು ಎಂಬ ಹೇಳಿಕೆಯ ವಿಡಿಯೋ ಒಂದನ್ನು ಬಿಡುಗಡೆ ಮಾಡಿತ್ತು ಇದರಿಂದ ವ್ಯಾಪಕ ವಿರೋಧ ವ್ಯಕ್ತವಾದ ನಂತರ ದೇಶವನ್ನು ಸುದೀರ್ಘ ಕಾಲ ದಾಸ್ಯಕ್ಕೆ ತಳ್ಳಿದ ಬ್ರಿಟಿಷರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಡಿ ಹೊಗಳಿದ್ದಾರೆ ಎಂದು ಬಿಜೆಪಿಯವರು ತಮ್ಮ ಪಕ್ಷದ ಮೇಲೆ ಬಂದಿದ್ದ ಮಾತನ್ನು ತಳ್ಳಿಹಾಕಿ ಡಿ. ಕೆ. ಶಿ ಯ ಮೇಲೆ ಆರೋಪವನ್ನು ಹೊರೆಸಿದರು.
ಇದನ್ನು ತೀವ್ರವಾಗಿ ವಿರೋಧಿಸಿ ಬಿಜೆಪಿಯವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಬ್ರಿಟಿಷರ ಬೂಟಿನ ರುಚಿಯನ್ನು ಕಂಡಿರುವ ಬಿಜೆಪಿಗರು ಬ್ರಿಟಿಷರಿಗಿಂತ ಕ್ರೂರಿಗಳಾಗಿದ್ದಾರೆ. ಬ್ರಿಟಿಷರು ಅಹಿಂಸಾ ಸತ್ಯಾಗ್ರಹಕ್ಕೆ ಮಣಿದಿದ್ದರು, ಆದರೆ ಬಿಜೆಪಿಗರು ರೈತರ ಅಹಿಂಸಾ ಪ್ರತಿಭಟನೆಯಲ್ಲಿ ಮಾರಣಹೋಮ ನಡೆಸಿದರು. ಹೊರಗಿನವರ ದೌರ್ಜನ್ಯಕ್ಕಿಂತ ಒಳಗಿನವರ ದೌರ್ಜನ್ಯವೇ ಹೆಚ್ಚು ಆಘಾತಕಾರಿ ಎಂದು ಬಿಜೆಪಿಯ ವಿರುದ್ಧ ತಿರುಗೇಟನ್ನು ನೀಡಿದ್ದಾರೆ.