ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ತಾಲ್ಲೂಕು, ಮರ್ಕಲ್ ಗ್ರಾಮಪಂಚಾಯತಿ ಕಟ್ಟಡದ ಪಕ್ಕದಲ್ಲಿ 2023 ರ ವಿಧಾನಸಭೆ ಚುನಾವಣಾ ಅವಧಿಯಲ್ಲಿ ಮುಜರಾಯಿ ಇಲಾಖೆ ನೌಕರ ಅರುಣಾಚಲ ಅವರು ಅಕ್ರಮ ಕಟ್ಟಡ ಕಟ್ಟಲು ಪ್ರಾರಂಭಿಸಿರುತ್ತಾರೆ, ಇದರಿಂದ ಗ್ರಾಮಪಂಚಾಯತಿಯ ಮುಂದಿನ ಬೆಳವಣಿಗೆಗೆ ಧಕ್ಕೆ ಆಗಿರುತ್ತದೆ, ಹಾಗೂ ಗ್ರಾಮಪಂಚಾಯತಿ ಸದಸ್ಯರು ಹಣ ಪಡೆದು ಕಟ್ಟಸಿದರು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಬಂದಿರುತ್ತದೆ.
ಇದನ್ನೂ ಓದಿ; ಶೃಂಗೇರಿ; ಕಿಗ್ಗಾ ನಾಡಕಚೇರಿಯನ್ನು ಶೃಂಗೇರಿಗೆ ವರ್ಗಾಯಿಸುವಂತೆ ಒತ್ತಾಯ
ಈ ಸಲುವಾಗಿ 2021 ರಿಂದ ಗ್ರಾಮಪಂಚಾಯತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ವಯಕ್ತಿಕವಾಗಿ ಹಾಗೂ ಪಂಚಾಯತಿ ಕಡೆಯಿಂದಲೂ ದೂರು ದಾಖಲಾಗಿರುತ್ತೇವೆ. ಅಂದಿನ ತಹಸೀಲ್ದಾರ್ ಕಾಮಗಾರಿ ಮಾಡದಂತೆ ಕಾಮಗಾರಿ ತಡೆಹಿಡಿದಿರುತ್ತಾರೆ ಹಾಗೂ ಎಚ್ಚರಿಗೆ ನೀಡಿರುತ್ತಾರೆ.
ಇದನ್ನೂ ಓದಿ; ಹೊಸ ಫೋನ್ ಖರೀದಿಸಿದ್ರೆ 2 kg ಟೊಮೆಟೊ ಉಚಿತ!;ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಈಗ ಹಾಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಆಗಿರುವ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಇವರು ಕಾಮಗಾರಿ ನಡೆಯುತ್ತಿರುವ ಬಗ್ಗೆ ದೂರು ದಾಖಸಿದರೂ ಕಾಮಗಾರಿ ತಡೆಯದೇ ಸರ್ಕಾರಿ ಭೂಮಿ ಕಬಳಿಕೆಗೆ ಅವಕಾಶ ಮಾಡಿಕೊಟ್ಟಿರುತ್ತಾರೆ. ಹಾಗೂ ತಹಶೀಲ್ದಾರ್ ಕಛೇರಿಯ ಒತ್ತುವರಿ ಕಡತ ನಿರ್ವಾಹಕರಾಗಿರುವವರು ಸರಿಯಾಗಿ ಪತ್ರ ವ್ಯವಹಾರ ಮಾಡದೇ ಲೋಪವೆಸಗಿದ್ದಾರೆ. ಅದುದ್ದರಿಂದ ಇವರುಗಳ ವಿರುದ್ಧ ತಮ್ಮ ನ್ಯಾಯಾಲಯದಲ್ಲಿ ತನಿಖೆ ನಡೆಸಿ ಅರುಣಾಚಲ ಹಾಗೂ ಅವರ ಪತ್ನಿ, ಅವರ ಒತ್ತುವರಿಗೆ ಸಹಕರಿಸಿದ ಇನ್ನುಳಿದ ನೌಕರರ ವಿರುದ್ಧ ಶಿಸ್ತು ಕ್ರಮ ವಹಿಸಬೇಕಾಗಿ ಮರ್ಕಲ್ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಕೋರಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ನಾಳೆ ಚಿಕ್ಕಮಗಳೂರಿನಲ್ಲಿ ಬಹು ನಿರೀಕ್ಷಿತ hyundai exter ಬಿಡುಗಡೆ
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ? 11.07.2023
- ಕಳಸ :ಅವೈಜ್ಞಾನಿಕ ಕಾಮಗಾರಿಯಿಂದ ಕೆಸರುಮಯವಾದ ರಸ್ತೆ, ತುರ್ತು ಕ್ರಮಕ್ಕೆ ಒತ್ತಾಯ