ರಿಪ್ಪನ್ ಪೇಟೆ: (ನ್ಯೂಸ್ ಮಲ್ನಾಡ್ ವರದಿ) ನವೋದಯ ವಿವಿಧೋದ್ದೇಶ ಸೌಹಾರ್ದ ಬ್ಯಾಂಕ್ ನ ಹಿಂದಿನ ಮ್ಯಾನೇಜರ್ ವಿರುದ್ಧ ದಾಖಲಾತಿ ದುರುಪಯೋಗದ ದೂರು ದಾಖಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯಲ್ಲಿ ನಡೆದಿದೆ.
ಇದನ್ನೂ ಓದಿ; ಮೂಡಿಗೆರೆ ಪೊಲೀಸ್ ಠಾಣೆಯ ಮೇಲೆಯೇ ಹತ್ತಿ ಆತ್ಮಹತ್ಯೆಗೆ ಯತ್ನ
ಇದನ್ನೂ ಓದಿ; ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು
ನವೋದಯ ವಿವಿಧೋದ್ದೇಶ ಸೌಹಾರ್ದ ಬ್ಯಾಂಕ್ ನ ಹಿಂದಿನ ಮ್ಯಾನೇಜರ್ ಮಿಥುನ್ ವಿರುದ್ಧ ಬಟ್ಟೆಮಲ್ಲಪ್ಪ ನಿವಾಸಿ ಮಂಜುನಾಥ್ ಬ್ಯಾಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿರುವ ಮಂಜುನಾಥ್ ಬ್ಯಾಣದ ನವೋದಯ ವಿವಿದ್ದೋದ್ದೇಶ ಸೌಹಾರ್ದ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಒಂದು ಲಕ್ಷ ರೂ ಎಫ್ ಡಿ ಇಟ್ಟು ತಮ್ಮ ಓಡಿ ಖಾತೆಯಲ್ಲಿ 1.5 ಲಕ್ಷ ರೂ.ಸಾಲ ಪಡೆದಿದ್ದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ನಾಮಪತ್ರ ಸಲ್ಲಿಸಿರುವ ಬಿಜೆಪಿ ಅಭ್ಯರ್ಥಿ ಜೀವರಾಜ್ ಘೋಷಿಸಿರುವ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?
- ಶೃಂಗೇರಿ ಕ್ಷೇತ್ರದಿಂದ ಮಲ್ನಾಡ್ ಕೇಸರಿ ಸೇನೆಯ ಪುನೀತ್ ಪೂಜಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ.!
- ಕೊಪ್ಪದ ರ್ಯಾಪರ್ ಚೇತನ್ ನಿಂದ ‘rcb hawa’ ಹೊಸ ಸಾಂಗ್
2017 ರಲ್ಲಿ ಸಾಲ ಪಡೆದ ಬ್ಯಾಣದ ರವರು ಕೊರೋನ ವೇಳೆ ಸಾಲ ತೀರಿಸಲು ಕಷ್ಟವಾಗಿತ್ತು. ಹಿಂದಿನ ಮ್ಯಾನೇಜರ್ ಅವರ ಚೆಕ್ ಮತ್ತು ಬರೆದುಕೊಟ್ಟಿದ್ದ ಪತ್ರಗಳನ್ನ ದುರುಪಯೋಗ ಪಡಿಸಿಕೊಂಡು ಅವರ ಓಡಿ ಸಾಲವನ್ನ 2.5ಗೆ ಹೆಚ್ಚಿಸಿದ್ದು ಇವರ ದಾಖಲಾತಿಗಳನ್ನ ದುರುಪಯೋಗ ಪಡಿಸಿಕೊಂಡಿರುವುದಾಗಿ ಬ್ಯಾಣದ್ ಎಫ್‌ಐಆರ್ ನಲ್ಲಿ ಆರೋಪಿಸಿದ್ದಾರೆ.
ಸಾಲ ಪಡೆಯುವಾಗ ಬ್ಯಾಂಕ್ ನಲ್ಲಿಟ್ಟಿದ್ದ ದಾಖಲಾತಿಯನ್ನ ವಾಪಾಸ್ ಕೇಳಿದರೂ ಈಗಿನ ಮ್ಯಾನೇಜರ್ ಕೊಡುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿದ್ದ ಇವರ ಪತ್ನಿ ಹೆಸರಿನಲ್ಲಿರುವ ಚೆಕ್ ನ ಬೌನ್ಸ್ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ; KSRTC ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ; ಪುಟ್ಟ ಕಂದಮ್ಮ ಸೇರಿ ಆರು ಮಂದಿ ಬಲಿ