Coffee Nadu Chandu: ನಾನು ಪುನೀತಣ್ಣ ಶಿವಣ್ಣನವರ ಅಭಿಮಾನಿ ಅಂತಲೇ ಸೋಶಿಯಲ್ ಮೀಡಿಯಾದಲ್ಲಿ ಬರ್ತ್ ಡೇ ಸಾಂಗ್ ಗಳ ಮೂಲಕವೇ ಮನೋರಂಜನೆ ಕೊಡುತ್ತಿದ್ದ ಕಾಫಿನಾಡು ಚಂದು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡೋದಕ್ಕೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಆಟೋ ಓಡಿಸಿಕೊಂಡೇ ಹೋಗಿದ್ದಾರೆ.
ಇದನ್ನೂ ಓದಿ; ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕನ್ನಡದ ನ್ಯೂಸ್ ಚಾನೆಲ್ ನಲ್ಲಿ ಕಾಣಿಸಿಕೊಂಡ ai ಆ್ಯಂಕರ್
ಶಿವಣ್ಣನಿಗೆ ಮುತ್ತಿಟ್ಟ ಚಂದು
ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿಗೆ ಬಂದಿದ್ದೇನೆ ಎಂದು ಶಿವರಾಜ್ ಕುಮಾರ್ ಗೆ ವಿಶ್ ಮಾಡಿದ ಕಾಫಿನಾಡು ಚಂದು ಶಿವಣ್ಣನಿಗೆ ಮುತ್ತಿಟ್ಟಿದ್ದಾರೆ. ಈ ವೇಳೆ ಶಿವಣ್ಣನಿಗಾಗಿ ಸಾಂಗ್ ಒಂದನ್ನು ಹೇಳಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ನಂತರ ಶಿವರಾಜ್ ಕುಮಾರ್ ಅವರ ಜೊತೆ ಫೋಟೋ ತೆಗೆಸಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ರಘು ಸಕಲೇಶಪುರ ಸೇರಿದಂತೆ ಮೂರು ಜನರಿಗೆ ನಿರೀಕ್ಷಣಾ ಜಾಮೀನು ನೀಡಿದ ನ್ಯಾಯಾಲಯ
ಮಗನನ್ನು ಪೊಲೀಸ್ ಮಾಡೋದೇ ನನ್ನ ಗುರಿ ಎಂದ ಚಂದು
ವೈರಲ್ ಸ್ಟಾರ್ ಕಾಫಿನಾಡು ಚಂದು ಜೊತೆ ಈ ಬಾರಿ ಅವರ ಮಗ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ತಂದೆ ಈ ರೀತಿ ಸಾಂಗ್ ಮಾಡುತ್ತಿರುವುದು, ರಾಜ್ಯದೆಲ್ಲೆಡೆ ಪೇಮಸ್ ಆಗಿರೋದು ಖುಷಿ ತಂದಿದೆ ಆದರೆ ಕೆಲವರು ಟ್ರೋಲ್ ಮಾಡುತ್ತಾರೆ ಆಗ ನೋವಾಗುತ್ತದೆ. ಆದರೆ ಈಗ ಟ್ರೋಲ್ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನನ್ನ ತಂದೆಗೆ ನಾನು ಪೊಲೀಸ್ ಆಗಬೇಕೆಂಬ ಆಸೆ ಇದೆ ಇದಕ್ಕಾಗಿ ನಾನು ಕಷ್ಟಪಟ್ಟು ಓದುತ್ತಿದ್ದೇನೆ ಎಂದಿದ್ದಾರೆ. ಈ ಕುರಿತು ಮಾತನಾಡಿರೋ ಚಂದು ನನಗೆ ಚಿಕ್ಕಮಗಳೂರಿನಲ್ಲಿ ಪೊಲೀಸ್ (Chikkamagalore) ನವರು ಕೂಡ ಸಾಕಷ್ಟು ಸಹಾಯ ಮಾಡುತ್ತಾರೆ. ಹಣ ಇಲ್ಲದಾಗ ಊಟ ಕೊಡಿಸುತ್ತಾರೆ. ನನ್ನ ಮಗನನ್ನು ಪೊಲೀಸ್ ಇಲಾಖೆಯಲ್ಲಿ ನೋಡೋದು ನನ್ನ ಕನಸು ಎಂದಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರಿನಲ್ಲಿ ಹ್ಯುಂಡೈ ಎಕ್ಸ್ಟರ್ ಕಾರು ಲಾಂಚ್
ಚಂದು ಎಷ್ಟು ಹಣ ಮಾಡಿದ್ದಾರೆ ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ಫೇಮಸ್ ಆಗಿಬಿಟ್ರೆ ಸಾಕು ಅವರಿಗೆ ಸಾಕಷ್ಟು ಪ್ರಮೋಶನ್ ಆಫರ್ (Promotion Offer) ಗಳು ಬರುತ್ತವೆ. ಇಂದು ಅದೆಷ್ಟೋ ಜನ ತಿಂಗಳಿಗೆ ಲಕ್ಷಾಂತರ ರೂ. ಇದರಿಂದಲೇ ದುಡಿಯುವವರು ಇದ್ದಾರೆ. ಆದ್ರೆ ಚಂದು ಹೇಳೋ ಪ್ರಕಾರ ಅವನಿಗೆ ಇದರ ಯಾವುದೇ ಅರಿವಿಲ್ಲ. ಈವರೆಗೂ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ನಿಂದ ಯಾವುದೇ ಹಣವೂ ಬಂದಿಲ್ಲವಂತೆ. ಈ ಕುರಿತು ಮಾತನಾಡಿರೋ ಚಂದು ‘ನನ್ನ ಹೆಸರಲ್ಲಿ ಸಾಕಷ್ಟು ಜನ ಲಕ್ಷಗಟ್ಟಲೆ ಹಣ ಮಾಡಿಕೊಂಡಿದ್ದಾರೆ ಆದರೆ ನಾನು ಯಾವುದೇ ಹಣ ಮಾಡಿಲ್ಲ. ಯಾರೋ ಸ್ನೇಹಿತರು, ಪೊಲೀಸರು ಊಟಕ್ಕೆ ನನಗೆ ದುಡ್ಡು ಕೊಡ್ತಾರೆ. ಹಾಗೊಂದು ವೇಳೆ ಹಣ ಮಾಡಿದ್ದರೆ ಬೆಂಗಳೂರಿಗೆ ಆಟೋದಲ್ಲಿ ಬರ್ತಿರ್ಲಿಲ್ಲ.. ಬದಲಾಗಿ ಕಾರ್ ನಲ್ಲಿ ಬರ್ತಿದ್ದೆ’ ಎಂದಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-13.07.2023
- ಅನ್ನ ಭಾಗ್ಯ ಯೋಜನೆ:ಅಕ್ಕಿ ಜೊತೆ ನಿಮಗೂ ಹಣ ಬಂತಾ?.ಇನ್ನೂ ಬಂದಿಲ್ವಾ, ಮ್ಮ ಮೊಬೈಲ್ ನಲ್ಲೆ ಚೆಕ್ ಮಾಡಿ?
- ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 13-07-2023
ಚಂದು ಇದುವರೆಗೂ ಮಾಡಿದ್ದು ಎಷ್ಟು ಸಾಂಗ್ ಅಂತ ಕೇಳಿ..
ಇನ್ನು ಸಾಂಗ್ ಕುರಿತು ಮಾತನಾಡಿರುವ ಕಾಫಿನಾಡು ಚಂದು (coffenadu chandu) ಈವರೆಗೂ ಬರೋಬ್ಬರಿ ನಾಲ್ಕು ಲಕ್ಷ ಸಾಂಗ್ ಮಾಡಿದ್ದೇನೆ ಎಂದಿದ್ದಾರೆ. ನಾಲ್ಕು ಲಕ್ಷ ಸಾಂಗ್ ಮಾಡೋಕೆ ಅಸಾಧ್ಯ ಅಂತ ಎಲ್ಲರಿಗೂ ತಿಳಿದಿದ್ದರೂ ಚಂದು ಮುಗ್ದತೆಗಾಗಿ ‘ಹ್ಮ್’ ಅನ್ನಲೇಬೇಕು. ಇನ್ನು ಫೇಮಸ್ ಆಗಿ ಒಂದು ವರ್ಷ ಆದ್ರೂ ಚಂದು ಜನಪ್ರಿಯತೆ ಮಾತ್ರ ಕಮ್ಮಿಯಾಗಿಲ್ವಂತೆ. ಊಟ ಮಾಡುವಾಗ, ಆಟೋ ಓಡಿಸುವಾಗ, ಕೂತಲ್ಲಿ.. ನಿಂತಲ್ಲಿ ಅಷ್ಟೇ ಯಾಕೆ ವಾಶ್ ರೂಂ ಗೆ ಹೋದ್ರೂ ಸಾಂಗ್ ಮಾಡಿಕೊಡು ಅಂತಾರಂತೆ. ಸದ್ಯ ಕಾಫಿನಾಡು ಚಂದುಗೆ Instagram ನಲ್ಲಿ ಮೂರು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.