Saturday, September 30, 2023
Homeಇತರೆಹೊಟ್ಟೆಯೊಳಗೆ 1.2 ಕೆಜಿ ಕೊಕೈನ್ ಡ್ರಗ್ ನನ್ನು ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಹೊಟ್ಟೆಯೊಳಗೆ 1.2 ಕೆಜಿ ಕೊಕೈನ್ ಡ್ರಗ್ ನನ್ನು ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಬೆಂಗಳೂರು: ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ತನ್ನ ಹೊಟ್ಟೆಯೊಳಗೆ 1.25 ಕೆ.ಜಿ ಕೊಕೈನ್ ಸಾಗಿಸುತ್ತಿರುವ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ಆ ವ್ಯಕ್ತಿಯನ್ನು ಬಂಧಿಸಿರುವAತಹ ಘಟನೆ ಬೆಂಗಳೂರಿನ ಅಂತರಾಷ್ಟ್ರೀಯ  ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಇದುವರೆಗೂ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುವಿನ ಸಾಗಣೆಗೆ ಯತ್ನಿಸಿದ್ದು ಇದೇ ಮೊದಲು ಎಂದು ಅಧಿಕಾರಿಗಳು ಅಚ್ಚರಿಪಟ್ಟಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ವ್ಯಕ್ತಿಯು ಅನುಮಾನಾಸ್ಪದವಾಗಿ ಕಂಡುಬoದ ಪರಿಣಾಮ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ಪ್ರಾರಂಭದಲ್ಲಿ ಆತ ತಾನು ಮಾದಕ ವಸ್ತು ಸಾಗಿಸುತ್ತಿದ್ದುದ್ದನ್ನು ನಿರಾಕರಿಸಿದರೂ ಸ್ವಲ್ಪ ಹೊತ್ತಿನಲ್ಲಿ ಆತ ಅಸ್ವಸ್ಥಗೊಂಡಿದ್ದ. ಅತನಿಗೆ ಚಿಕಿತ್ಸೆ ನೀಡಬೇಕಾಗಿ ಬಂದಿತ್ತು. ಈ ಸಂದರ್ಭದಲ್ಲಿ ಆತ ತನ್ನ ಹೊಟ್ಟೆಯ ಒಳಗೆ ಮಾದಕ ವಸ್ತು ಇರುವುದನ್ನು ಒಪ್ಪಿಕೊಂಡಿದ್ದ.

1.25 ಕೆ.ಜಿ ಕೊಕೈನ್ ಅನ್ನು ದೊಡ್ಡ ದೊಡ್ಡ ಕ್ಯಾಪ್ಸೂಲ್ ಗಳಲ್ಲಿ ತುಂಬಿಡಲಾಗಿತ್ತು. ಈ ಕ್ಯಾಪ್ಸೂಲ್ ಗಳನ್ನು ಆತ ನುಂಗಿದ್ದನು. ಆತನಿಗೆ ಈ ಕ್ಯಾಪ್ಸೂಲ್ ಗಳನ್ನು ನೀಡಿದ್ದು ಯಾರು ಎಂಬ ವಿಷಯದ ಬಗ್ಗೆ ಆರೋಪಿ ಬಾಯಿಯನ್ನು ಬಿಟ್ಟಿಲ್ಲ. ವಿಮಾನ ನಿಲ್ದಾಣದಿಂದ ನೇರವಾಗಿ ಆತನಿಗೆ ಹೊಟೇಲೊಂದರಲ್ಲಿ ರೂಮನ್ನು ಬುಕ್ ಮಾಡಲು ಸೂಚನೆಯನ್ನು ನೀಡಲಾಗಿದ್ದು. ಅಲ್ಲಿಗೇ ವ್ಯಕ್ತಿಯೊಬ್ಬ ಬಂದು ಈ ಕ್ಯಾಪ್ಸೂಲ್ ಗಳನ್ನು ಪಡೆದುಕೊಳ್ಳುವುದಾಗಿ ಆರೋಪಿಗೆ ನಿರ್ದೇಶನವನ್ನು ನೀಡಲಾಗಿತ್ತು.

ಆರೋಪಿ ಬಳಿ ಪತ್ತೆಯಾಗಿರುವ ಕೊಕೈನ್ ಬೆಲೆ 11 ಕೋಟಿ ರೂ ಎಂದು ತಿಳಿದುಬಂದಿದೆ. ಆರೋಪಿಯನ್ನು ಎನ್ ಡಿ ಪಿ ಎಸ್ ಕಾಯ್ದೆಯಡಿ ಬಂಧಿಸಲಾಗಿದೆ.

Most Popular

Recent Comments