Tuesday, November 28, 2023
Homeಕರಾವಳಿತಲಪಾಡಿ ಚೆಕ್ ಪೋಸ್ಟ್ ಬಳಿ ಕೇರಳಿಗರಿಂದ ಪ್ರತಿಭಟನೆಯ ಸುಳಿವು : ತಲಪಾಡಿ ಭೇಟಿಯನ್ನು ರದ್ದುಗೊಳಿಸಿದ...

ತಲಪಾಡಿ ಚೆಕ್ ಪೋಸ್ಟ್ ಬಳಿ ಕೇರಳಿಗರಿಂದ ಪ್ರತಿಭಟನೆಯ ಸುಳಿವು : ತಲಪಾಡಿ ಭೇಟಿಯನ್ನು ರದ್ದುಗೊಳಿಸಿದ ಸಿಎಂ ಬೊಮ್ಮಾಯಿ

ಮಂಗಳೂರು: ಕೋವಿಡ್ 3ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೆರೆ ರಾಜ್ಯ ಕೇರಳದಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದೊಳಗೆ ಬರುವುದನ್ನು ತಡೆಯಲು ತಲಪಾಡಿ ಚೆಕ್ ಪೋಸ್ಟ್ ಬಳಿ ಕಟ್ಟುನಿಟ್ಟಿನ ತಪಾಸಣೆಯ ಕ್ರಮವನ್ನು ರಾಜ್ಯ ಸರ್ಕಾರವು ಕೈಗೊಂಡಿದೆ. ಇದು ಸಹಜವಾಗಿ ಕೇರಳಿಗರನ್ನು ಕೆರಳಿಸಿದೆ.

ಕೋವಿಡ್-19 ಪರಿಸ್ಥಿತಿ ಪರಾಮರ್ಶೆಗೆ 2 ದಿನಗಳು ಕರಾವಳಿ ಜಿಲ್ಲೆಯಲ್ಲಿ ಭೇಟಿ ಕೈಗೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ತಲಪಾಡಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಗಡಿಭಾಗದ ಪರಿಸ್ಥಿತಿಯನ್ನು ತಪಾಸಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಅದು ಇಂದು ರದ್ದಾಗಿದೆ.

ಕೇರಳ ರಾಜ್ಯದ ಕಾರ್ಯಕರ್ತರು ಮುಖ್ಯಮಂತ್ರಿಗಳು ಬಂದರೆ ತೀವ್ರ ಪ್ರತಿಭಟನೆಯನ್ನು ನಡೆಸಿ ಕಪ್ಪು ಧ್ವಜವನ್ನು ಹಾರಿಸಿ ತಮ್ಮ ಅಸಹನೆ, ಆಕ್ರೋಶವನ್ನು ವ್ಯಕ್ತಪಡಿಸಬಹುದು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಯನ್ನು ನಡೆಯುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಸಿಎಂ ಬೊಮ್ಮಾಯಿಯವರ ಇಂದಿನ ತಲಪಾಡಿ ಚೆಕ್ ಪೋಸ್ಟ್ ಭೇಟಿಯನ್ನು ರದ್ದುಗೊಳಿಸಿದ್ದಾರೆ.

ಇಂದು ಮುಖ್ಯಮಂತ್ರಿಗಳು ಸ್ಥಳಕ್ಕೆ ಹೋದರೆ ಕೇರಳದ ವಿವಿಧ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಲು ಯೋಜನೆ ಹಾಕಿಕೊಂಡಿದ್ದರು. ಈಗಾಗಲೇ ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಸಿಎಂ ಭೇಟಿ ಕೊಟ್ಟರೆ ಉರಿಯುವ ಬೆಂಕಿಗೆ ತುಪ್ಪವನ್ನು ಸುರಿದಂತೆ ಆಗುತ್ತದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

 

Most Popular

Recent Comments