Sunday, September 24, 2023
Homeಆಧ್ಯಾತ್ಮದೇಶದ ಜನತೆಗೆ ದೀಪಾವಳಿ ಹಬ್ಬದ ಬದಲು ಹೋಳಿ ಹಬ್ಬದ ಶುಭಾಷಯ ಕೋರಿದ ಸಿಎಂ.

ದೇಶದ ಜನತೆಗೆ ದೀಪಾವಳಿ ಹಬ್ಬದ ಬದಲು ಹೋಳಿ ಹಬ್ಬದ ಶುಭಾಷಯ ಕೋರಿದ ಸಿಎಂ.

ಪಾಕಿಸ್ತಾನ: ದೀಪಾವಳಿ ಹಬ್ಬದ ಶುಭಾಷಯ ಹೇಳುವ ಬದಲು ದೇಶದ ಜನತೆಗೆ ಹೋಳಿ ಹಬ್ಬದ ಶುಭಾಷಯ ಕೋರಿದ ವ್ಯಂಗ್ಯ ತರಿಸುವ ಘಟನೆ ಪಾಕಿಸ್ತಾನದ ಸಿಂಧ್ ನಲ್ಲಿ ನಡೆದಿದೆ.

ಸಿಂಧ್ ನ ಮುಖ್ಯಮಂತ್ರಿ ಮುರಾದ್ ಅಲಿ ಷಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ದೀಪಾವಳಿ ಹಬ್ಬದ ಬದಲು ಹೋಳಿ ಹಬ್ಬದ ಫೋಟೋವನ್ನು ಹಾಕಿ ಜನತೆಗೆ ಶುಭಾಷಯವನ್ನು ಕೋರಿದ್ದರು. ಇದರ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಖಾತೆಯ ಫೋಟೋವನ್ನು ತೆಗೆದು ಹಾಕಿದ್ದಾರೆ.

ಪಾಕಿಸ್ತಾನ ಮೂಲದ ಪತ್ರಕರ್ತ ಮುರ್ತಾಜಾ ಸೋಲಂಗಿ ಅವರು ಮುಖ್ಯಮಂತ್ರಿ ತೆಗೆದುಹಾಕಿದ ಫೋಟೋವನ್ನು ಜಾಲತಾಣಗಳಲ್ಲಿ ಶೇರ್ ಮಾಡಿ.” ಹಿಂದೂ ಧರ್ಮದವರು ಹೆಚ್ಚಾಗಿರುವ ಪ್ರದೇಶ ಪಾಕಿಸ್ತಾನದ ಸಿಂಧ್. ಸಿಎಂ ಭವನದ ಸಿಬ್ಬಂದಿಗಳಿಗೆ ದೀಪಾವಳಿ ಮತ್ತು ಹೋಳಿ ಹಬ್ಬದ ನಡುವಿನ. ವ್ಯತ್ಯಾಸ ತಿಳಿಯದೇ ಇದ್ದದ್ದು ರಾಜ್ಯದ ಜನರಿಗೆ ದುಃಖಕರ ಸಂಗತಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋವನ್ನು ನೋಡಿದ ಜನತೆ ತಮ್ಮ ರಾಜ್ಯದ ಮುಖ್ಯಮಂತ್ರಿ ಬೇಜವಾಬ್ದಾರಿತನ ಮತ್ತು ಮೊಂಡುತನವನ್ನು ಕಂಡು ಆಕ್ರೋಶಗೊಂಡಿದ್ದಾರೆ.

Most Popular

Recent Comments