Tuesday, November 28, 2023
Homeರಾಜಕೀಯಬಸವರಾಜ ಬೊಮ್ಮಾಯಿ ಯವರ ಕಾರ್ಯದರ್ಶಿಯಾಗಿ ವಿ.ಪೊನ್ನುರಾಜ್ ನೇಮಕ.

ಬಸವರಾಜ ಬೊಮ್ಮಾಯಿ ಯವರ ಕಾರ್ಯದರ್ಶಿಯಾಗಿ ವಿ.ಪೊನ್ನುರಾಜ್ ನೇಮಕ.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಾರ್ಯದರ್ಶಿಯನ್ನಾಗಿ ವಿ.ಪೊನ್ನುರಾಜ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.

ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಂತಹ ವಿ.ಪೊನ್ನುರಾಜ್ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿ. ಈ ಹಿಂದೆ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿದ್ದಂತಹ ಡಾ. ಎಸ್ ಸೆಲ್ವಕುಮಾರ್ ರವರನ್ನು ವರ್ಗಾವಣೆ ಮಾಡಲಾಗಿದೆ.

ಸೆಲ್ವಕುಮಾರ್ ರವರು ವರ್ಗಾವಣೆಯಾದ ನಂತರ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ ಪೊನ್ನುರಾಜ್‌ರವರನ್ನು ನೇಮಕ ಮಾಡಲಾಗಿದೆ, ಕೆಪಿಸಿಎಲ್ ವ್ಯವಸ್ಥಾಪಕ ಹುದ್ದೆಯಲ್ಲಿ ಮುಂದಿನ ಆದೇಶದವರೆಗೆ ಮುಂದುವರೆಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಸೆಲ್ವಕುಮಾರ್ ಅವರನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶಿತೆ ಹಾಗೂ ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಎಂದು ರಾಜ್ಯಸರ್ಕಾರವು ಆದೇಶವನ್ನು ಹೊರಡಿಸಿದೆ.

Most Popular

Recent Comments