ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಐಸಿಯುನಲ್ಲಿದೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಫೈಟ್ ಜೋರಾಗಿದ್ದು, ಪೂರ್ಣ ಅವಸಾನದತ್ತ ಪಕ್ಷ ಸಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಿದ್ದು ಸಿದ್ದರಾಮಯ್ಯ ಹಾಗೂ ಡಿಕೆಶಿಯವರ ಗುಂಪಿನ ಮಧ್ಯೆ ಕದನ ಶುರುವಾಗಿದೆ.
ಈ ಫೈಟ್ ಸಿಎಂ ಹುದ್ದೆಗಾಗಿ ನಡೆಯುತ್ತಿದೆ. ಉಗ್ರಪ್ಪ, ಸಲೀಂ ನಡುವಿನ ಸಂಭಾಷಣೆ ಈ ಫೈಟ್‌ನ ಒಂದು ಭಾಗವಾಗಿದೆ ಉಗ್ರಪ್ಪ ಸಿದ್ದರಾಮಯ್ಯ ರವರ ಪಟ್ಟದ ಶಿಷ್ಯ ಅವರೇ ಡಿ.ಕೆ. ಶಿವಕುಮಾರ ವಿರುದ್ಧ ಆರೋಪವನ್ನು ಮಾಡಿದ್ದಾರೆ. ಡಿಕೆಶಿಯವರನ್ನು ಹಣಿಯಲು ಸಿದ್ದರಾಮಯ್ಯರವರ ಬೆಂಬಲಿಗರು ನಿಂತಿದ್ದಾರೆ. ತಂತ್ರ, ಕುತಂತ್ರಗಳನ್ನೆಲ್ಲ ಮಾಡುತ್ತಿದ್ದಾರೆ. ಮೊದಲು ಎಲ್ಲವನ್ನೂ ಆರೋಪ ಮಾಡುತ್ತಾರೆ. ಬಳಿಕ ಕ್ಷಮೆಯನ್ನು ಕೇಳುತ್ತಾರೆ ಈ ಕ್ಷಮೆಯನ್ನು ಕೇಳಿದರೆ ಹೇಗೆ? ಇದು ಕಾಂಗ್ರೆಸ್ ಐಸಿಯುನಲ್ಲಿರುವ ಸೂಚನೆಯನ್ನು ನೀಡುತ್ತಿದೆ. ಆ ಪಕ್ಷ ಅವಸಾನದತ್ತ ಸಾಗಿದೆ ಎಂದು ಹೇಳಿದರು.