(ನ್ಯೂಸ್ ಮಲ್ನಾಡ್ ವರದಿ)ನೂರು ಬೆಡ್ ಆಸ್ಪತ್ರೆಗೆ ಆಗ್ರಹಿಸಿ ಇಂದು ಬೆಳಗ್ಗೆ 10 ಗಂಟೆಯಿಂದ ಶೃಂಗೇರಿ ಸಂತೆ ಮಾರುಕಟ್ಟೆ ಬಸ್ ನಿಲ್ದಾಣದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು.
ಇದು ನೂರಕ್ಕೆ ನೂರು ನಿಷ್ಪಕ್ಷಪಾತ ಹೋರಾಟವಾಗಿದ್ದು, ಆಸ್ಪತ್ರೆ ಮೊದಲು ರಾಜಕೀಯ ನಂತರ. ಆದಕಾರಣ
ರಾಜಕಾರಣಕ್ಕಿಂತ ನಿಮ್ಮ ಕುಟುಂಬ ಮುಖ್ಯವಾಗಿದ್ದರೆ ಭಾಗವಹಿಸಿ ಎಂದು ಹೋರಾಟ ಸಮಿತಿ ಕರೆ.
ತಾಲೂಕು ಮಟ್ಟದ ರಾಜಕೀಯ ನಾಯಕರು ಹಾಗೂ ಪಕ್ಷದ ಚಿಹ್ನೆ ಅಡಿಯಲ್ಲಿ ಚುನಾಯಿತರಾದವರು ಭಾಗವಹಿಸಲು ಇರುವ ಸೂಚನೆಯನ್ನು ಈಗಾಗಲೇ ತಿಳಿಸಲಾಗಿದೆ.
ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ, ಸುಳ್ಳು ಮಾಹಿತಿಗಳಿಗಳನ್ನು ನಂಬದೇ ಈ ನಿರ್ಣಾಯಕ ಹೋರಾಟದಲ್ಲಿ ಭಾಗಿಯಾಗಿ ಎಂದು ಸಮಿತಿ ತಿಳಿಸಿದ್ದು ರಾಜಕಾರಣ ಮಾಡಲು ಸಾವಿರ ದಾರಿಗಳಿವೆ, ಆದರೆ ಆಸ್ಪತ್ರೆ ವಿಷಯದಲ್ಲಿ ಬೇಡ.
ಇಂದು ಯಾರದೋ ಕುಟುಂಬಕ್ಕಾದ ಆರೋಗ್ಯ ಸಮಸ್ಯೆಗಳು ನಾಳೆ ನಮ್ಮ ನಿಮ್ಮ ಕುಟುಂಬಕ್ಕೂ ಆಗಬಹುದು. ಆಗ ನಮ್ಮನ್ನು ಹಾಗೂ ಕುಟುಂಬಸ್ಥರನ್ನು ರಾಜಕಾರಣ ಬದುಕಿಸುವುದಿಲ್ಲ.
ಆಸ್ಪತ್ರೆ ಮೊದಲು ರಾಜಕೀಯ ನಂತರ ಎಂದು ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಕರೆ ನೀಡಿದೆ.
ಹಾಗೆಯೇ 48 ಗಂಟೆಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹ ಇದ್ದು ಬೇಡಿಕೆ ಈಡೇರಿದಲ್ಲಿ ತಕ್ಷಣವೇ ಹೋರಾಟ ಕೈಬಿಡುವುದಾಗಿ ತಿಳಿಸಿದ್ದು. ಬೇಡಿಕೆ ಈಡೇರಿದೆ ಇದ್ದಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಅಂದಿನ ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದೆ.