Sunday, June 4, 2023
Homeವಿಶೇಷಆರೋಗ್ಯಬಿಲ್ ಪಾವತಿಸಲು ಕಮಿಷನ್ ಬೇಡಿಕೆಯಿಟ್ಟ ಆರೋಪ; ತಾ.ಪಂ ಪ್ರಭಾರ E.O ಅಮಾನತು

ಬಿಲ್ ಪಾವತಿಸಲು ಕಮಿಷನ್ ಬೇಡಿಕೆಯಿಟ್ಟ ಆರೋಪ; ತಾ.ಪಂ ಪ್ರಭಾರ E.O ಅಮಾನತು

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಕೋವಿಡ್ ಅವಧಿಯಲ್ಲಿ ಪರಿಕರಗಳನ್ನು ಪೂರೈಕೆ ಮಾಡಿದ್ದ ಗುತ್ತಿಗೆದಾರನಿಗೆ ಬಿಲ್ ಸಂದಾಯ ಮಾಡಲು ಕಮಿಷನ್ ಬೇಡಿಕೆ ಇಟ್ಟಿದ್ದ ಆರೋಪದ ಕುರಿತು, ಜಿ.ಪಂ ಸಿಇಒ ಅವರು ನೀಡಿದ ವರದಿ ಆಧರಿಸಿ ರಾಜ್ಯ ಸರಕಾರ ತಾ.ಪಂ ಪ್ರಭಾರ ಇಒ ಡಾ.ದೇವರಾಜ್ ನಾಯಕ್ ನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಕೋವಿಡ್‌ ಪರಿಕರ ಪೂರೈಕೆ ಮಾಡಿದ ಬಿಲ್‌ ಪಾವತಿಸಲು ದೇವರಾಜ್ ನಾಯಕ್‌ ಅವರು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ್‌ ಅಮರಗೋಳ ಈ ಹಿಂದೆ ಆರೋಪಿಸಿದ್ದರು.

ಕೋವಿಡ್‌ ಪರಿಕರ ಪೂರೈಕೆ ಬಿಲ್‌ ಪಾವತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಸೂಚನೆ ನೀಡಿ ಒಂದು ವರ್ಷವಾದರೂ ಕ್ರಮವಹಿಸದಿರುವುದು, ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಬಿಲ್‌ ಪಾವತಿಸಲು ನಿರ್ದೇಶನ ನೀಡಿ ಅಗತ್ಯ ಕ್ರಮವಹಿಸದೆ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅಮಾನತುಗೊಳಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Most Popular

Recent Comments