Sunday, June 4, 2023
Homeಉದ್ಯೋಗಚಿಕ್ಕಮಗಳೂರು: ಗೃಹರಕ್ಷಕ ದಳದಲ್ಲಿ ಉದ್ಯೋಗಾವಕಾಶ, 283 ಹುದ್ದೆಗಳಿಗೆ ಅರ್ಜಿ ಆಹ್ವಾನ.

ಚಿಕ್ಕಮಗಳೂರು: ಗೃಹರಕ್ಷಕ ದಳದಲ್ಲಿ ಉದ್ಯೋಗಾವಕಾಶ, 283 ಹುದ್ದೆಗಳಿಗೆ ಅರ್ಜಿ ಆಹ್ವಾನ.

(ನ್ಯೂಸ್ ಮಲ್ನಾಡ್ ವರದಿ)ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲೂಕು ಹಾಗೂ ಉಪ ಘಟಕಗಳಲ್ಲಿ ಖಾಲಿ ಇರುವ 283 ಸ್ವಯಂ ಸೇವಕ ಗೃಹರಕ್ಷಕ ಹಾಗೂ ಗೃಹರಕ್ಷಕಿಯರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗೆ ಒಳಪಡುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಆಭ್ಯರ್ಥಿಗಳು ಅರ್ಜಿಗಳನ್ನು ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕದಳದ ಕಛೇರಿಯಿಂದ ಹಾಗೂ ಘಟಕಾಧಿಕಾರಿ ಕಛೇರಿ ಗೃಹರಕ್ಷಕ ದಳ, ಚಿಕ್ಕಮಗಳೂರು, ಬೆಳವಾಡಿ, ಕಡೂರು, ಸಖರಾಯಪಟ್ಟಣ, ಕಾಟಿಗನೆರೆ, ಬೀರೂರು, ತರೀಕೆರೆ, ಶಿವನಿ, ಅಜ್ಜಂಪುರ, ಬಾಳೆಹೊನ್ನೂರು, ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಕಳಸಾಪುರ, ಲಿಂಗದಹಳ್ಳಿ, ಹರಿಹರಪುರ, ಜಯಪುರ, ಹೋಚಿಹಳ್ಳಿ, ಮೂಡಿಗೆರೆ ಹಾಗೂ ಜಾವೂರು ಇಲ್ಲಿಂದ ಉಚಿತವಾಗಿ ಪಡೆಯಬಹುದಾಗಿದೆ.

ಅರ್ಜಿಯೊಂದಿಗೆ ಜನ್ಮ ದಿನಾಂಕದ ದೃಢೀಕರಣ, ವೈದ್ಯಕೀಯ ಪ್ರಮಾಣ ಪತ್ರ, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ದಿನಾಂಕ 31/01/2023 ರ ಒಳಗೆ ಸಂಬಂಧಿಸಿದ ಗೃಹರಕ್ಷಕ ಘಟಕಾಧಿಕಾರಿಯವರಿಗೆ ಸಲ್ಲಿಸಲು ಸೂಚಿಸಲಾಗಿದೆ.

ವಯೋಮಿತಿ:
ಕನಿಷ್ಠ 20 ರಿಂದ ಗರಿಷ್ಠ 50 ವರ್ಷದ ಒಳಗಿರಬೇಕು

ವಿದ್ಯಾರ್ಹತೆ:
10ನೇ ತರಗತಿ ಉತ್ತೀರ್ಣರಾಗಿರಬೇಕು

ಷರತ್ತುಗಳು:
▪️ ಗೃಹರಕ್ಷಕ ಸದಸ್ಯರಾಗಲು ಬಯಸುವವರು ತಮ್ಮ ವಾಸ ಸ್ಥಳದಿಂದ ತಾವು ಸೇರಲು ಬಯಸುವ ಘಟಕಕ್ಕೆ 6 ಕಿ.ಮೀ. ವ್ಯಾಪ್ತಿಯ ಒಳಗಿರಬೇಕು
▪️ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರಬಾರದು
▪️ಧೃಢಕಾಯರಾಗಿದ್ದು ಆರೋಗ್ಯವಂತರಾಗಿರಬೇಕು
▪️ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕ ದಳದ ಕಛೇರಿ, ಅಗ್ನಿಶಾಮಕ ಇಲಾಖೆ ಪಕ್ಕದಲ್ಲಿ, ಕೆ.ಎಂ. ರಸ್ತೆ, ಚಿಕ್ಕಮಗಳೂರು ಮೊಬೈಲ್ ಸಂಖ್ಯೆ: 8151914734
9164283743 ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.

(ಕಛೇರಿ ವೇಳೆಯಲ್ಲಿ ಮಾತ್ರ ಮೊಬೈಲ್ ದೂರವಾಣಿಗೆ ಸಂಪರ್ಕಿಸಬಹುದು.)

Most Popular

Recent Comments