ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಈ ಬಾರಿ ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಕ್ಷೇತ್ರದ ಎಲ್ಲ ಸಮುದಾಯದವರು ಸಹಕಾರ ನೀಡಿದ್ದರಿಂದ ಮತ್ತೊಮ್ಮೆ ಆಯ್ಕೆಯಾಗಿ ಜನ ಸೇವೆ ಮಾಡುವ ಅವಕಾಶ ಒದಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಕ್ಷೇತ್ರಾಧ್ಯಕ್ಷ ಕೆ.ಎಂ. ರಮೇಶ್ ಭಟ್ ಹೇಳಿದರು.
ಇದನ್ನೂ ಓದಿ; ದತ್ತಪೀಠ ಮಾರ್ಗದಲ್ಲಿ ಭೀಕರ ಅಪಘಾತ; ಪ್ರಪಾತಕ್ಕೆ ಉರುಳಿದ ಕಾರು
ಇದನ್ನೂ ಓದಿ; ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಬ್ಬ ಸಾವು, ಮತ್ತೊಬ್ಬ ಗಂಭೀರ
ಅನಂತಕಲ್ಯಾಣ ಗೃಹದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಮತ್ತು ವಿಪ್ರ ಸಾಮಾಜಿಕ ಸಭಾ ಜಂಟಿಯಾಗಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಟಿ.ಡಿ.ರಾಜೇಗೌಡ ಅವರ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆಸಿದರೂ, ಆದರೆ ರಾಜೇಗೌಡರ ಪ್ರೀತಿ ರಾಜಕಾರಣವನ್ನು ಜನ ಮೆಚ್ಚಿದ್ದು, ಅವರ ವಿಜಯಕ್ಕೆ ಕಾರಣವಾಗಿದೆ. ಶಾಸಕರಾಗಿ ಈಗ ಮರು ಆಯ್ಕೆಯಾಗಿರುವ ರಾಜೇಗೌಡರು ಸಚಿವ ಸ್ಥಾನಕ್ಕೆ ಸಂಪೂರ್ಣ ಅರ್ಹತೆ ಇದ್ದು, ಸಂಪುಟದಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ವಿಶ್ವಾಸವಿದೆ. ಕ್ಷೇತ್ರದ ಪ್ರಮುಖ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿರುವ ಅವರು ಇವುಗಳನ್ನು ಸಮರ್ಥವಾಗಿ ಪರಿಹರಿಸಲಿದ್ದಾರೆ ಎಂದರು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಲಾರಿಯ ಹೆಡ್ ಲೈಟ್ ಫೋಕಸ್ ಗೆ ಸ್ಕಿಡ್ ಆದ ಬೈಕ್; ಗಂಭೀರ ಗಾಯ
- ಪಶ್ಚಾತ್ತಾಪ ಪಾದಯಾತ್ರೆ ಕೈಗೊಂಡ ವೈ ಎಸ್ ವಿ ದತ್ತಾ; ರಾಜಕೀಯದಿಂದಲೂ ನಿವೃತ್ತಿ
- ಹಿಂದಿನ ಶಾಸಕರು ಹಾಗೂ ಅವರ ಬಾವನಿಂದ ಪ್ರಜಾಪ್ರಭುತ್ವದ ಕಗ್ಗೊಲೆ
ವಿಪ್ರ ಸಾಮಾಜಿಕ ಸಭಾದ ನಾಗೇಶ್ ಮಾತನಾಡಿ, ಈ ಬಾರಿ ರಾಜೇಗೌಡರ ಬೆಂಬಲಕ್ಕೆ ಕ್ಷೇತ್ರದ ಬ್ರಾಹ್ಮಣ ವರ್ಗ ನಿಂತಿತ್ತು, ಕಾರ್ ಬೈಲು ಶಿವಶಂಕ ಮನೆಯಲ್ಲಿ ಏರ್ಪಡಿಸಿದ್ದ ವಿಪ್ರ ಸಭೆಯಲ್ಲಿ ನೂರಾರು ಜನರು ಭಾಗವಹಿಸಿ, ತಮ್ಮ ಬೆಂಬಲ ಸೂಚಿಸಿದ್ದರು. ನಮ್ಮ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಕುಟುಂಬಗಳಿದ್ದು, ಮನೆಗಳಿಗೆ ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ. ಅನೇಕ ಕುಟುಂಬದಲ್ಲಿ ವೃದ್ಧರು ಮಾತ್ರ ಮನೆಯಲ್ಲಿದ್ದು, ಅನಾರೋಗ್ಯ ಉಂಟಾದಾಗ ಆಸ್ಪತ್ರೆಗೆ ತೆರಳಲು ಕಷ್ಟ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಶಾಸಕರಾಗಿ, ಮಂತ್ರಿಯಾಗಿ ನಮ್ಮ ಸಮುದಾಯದ ಸಮಸ್ಯೆಯ ಪರಿಹಾರ ನಮ್ಮ ಮಾಡಿಕೊಡಲಿದ್ದಾರೆ. ಸಮುದಾಯದ ಬಗ್ಗೆ ವಿಶೇಷ ಗೌರವ ಹೊಂದಿರುವ ಶಾಸಕರು ನಮ್ಮೆಲ್ಲಾ ಸಮಸ್ಯೆಗೆ ಪರಿಹಾರ ಒದಗಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ್, ಕೆ.ಆರ್ ಪ್ರಕಾಶ್, ಮೇಗಳಬೈಲು ಚಂದ್ರಶೇಖರ್, ಕಾರ್‌ಬೈಲು ಶಿವಶಂಕರ್, ರವಿಶಂಕರ್, ಸೌಮ್ಯ ವಿಜಯಕುಮಾರ್, ದೊಡ್ಡಾನೆ ಸುಬ್ರಮಣ್ಯ, ಭಾಸ್ಕರ್ ರಾವ್ ಸಿರಿಮನೆ, ಕೊಪ್ಪದ ಸತೀಶ್ ಇದ್ದರು.
ಇದನ್ನೂ ಓದಿ; ಮಡಿಕೇರಿಯ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ
ಗಳಿಕೆಯಲ್ಲಿ ಇತಿಹಾಸ ನಿರ್ಮಿಸಿದ ‘ದಿ ಕೇರಳ ಸ್ಟೋರಿ’
ದೇಶಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿರುವ ‘ದಿ ಕೇರಳ ಸ್ಟೋರಿ’ ನಿಧಾನವಾಗಿ ಸದ್ದು ಮಾಡಲು ಆರಂಭಿಸಿದೆ. ಈಗಾಗಲೇ ಕೆಲವೆಡೆ ಸಿನಿಮಾ ಪ್ರದರ್ಶನ ನಿಲ್ಲಿಸಲಾಗುತ್ತಿದೆ. ಆದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಇದು ಮತ್ತೊಂದು ‘ಕಾಶ್ಮೀರ್ ಫೈಲ್ಸ್’ ಆಗುವ ಸುಳಿವು ಸಿಗುತ್ತಿದೆ.
ಇದನ್ನೂ ಓದಿ; ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ
ಸುದೀಪ್ತೊ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ ಹಾಗೂ ಸೋನಿಯಾ ಬಾಲಾನಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ರಿಲೀಸ್‌ಗೂ ಮೊದಲೇ ಈ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಕೇರಳದಲ್ಲಿ ಒತ್ತಡ ಶುರುವಾಗಿತ್ತು. ಸಿನಿಮಾ ಬಿಡುಗಡೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸಿನಿಮಾ ಬಿಡುಗಡೆಗೆ ಕೋರ್ಟ್ ಅಸ್ತು ಎಂದಿತ್ತು.
ಇದನ್ನೂ ಓದಿ; ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್
ಮೇ 5ರಂದು ದೇಶಾದ್ಯಂತ ಬಿಡುಗಡೆಗೊಂಡ ಈ ಚಿತ್ರ ೧೦ ದಿನಗಳಲ್ಲಿ ಮೈಲುಗಲ್ಲೊಂದನ್ನು ನೆಟ್ಟಿದೆ. ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಸಿನಿಮಾ 135 ಕೋಟಿ ರೂ. ಗಳಿಸಿದೆ. ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಈ ಮೂಲಕ 2023 ರಲ್ಲಿ ಬಾಲಿವುಡ್ ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಎರಡನೇ ಸಿನಿಮಾವಾಗಿ ‘ದಿ ಕೇರಳ ಸ್ಟೋರಿ’ ಹೊರಹೊಮ್ಮಿದೆ.
ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆಗೆ ದೂಡಲಾಗುತ್ತಿದೆ ಎನ್ನುವ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ವ್ಯವಸ್ಥಿತ ಮತಾಂತರ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ಈ ಸಿನಿಮಾದಲ್ಲಿ ಹೇಳಿರುವುದು ಕಟ್ಟು ಕತೆ, ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೊಡಬಾರದು ಎಂದು ಕೆಲವರು ಆಗ್ರಹಿಸಿದ್ದರು. ಐಪಿಎಲ್ ಭರಾಟೆ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೀತಿದೆ.
ಇದನ್ನೂ ಓದಿ; ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಇದನ್ನೂ ಓದಿ; ಮಗಳ ಮೊಬೈಲ್ ಫೋನ್ ನಿಂದಲೇ ಬಂತು 20 ಲಕ್ಷ ರೂ.ಗಳ ಬೇಡಿಕೆ
ಫಸ್ಟ್ ವೀಕೆಂಡ್ 35. 25 ಕೋಟಿ ರೂ. ಗಳಿಕೆ:
ಭಾರತದಲ್ಲಿ ಶುಕ್ರವಾರ 8.03 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ಶನಿವಾರ 11.22 ಕೋಟಿ ರೂ. ಹಾಗೂ ಭಾನುವಾರ 16 ಕೋಟಿ ರೂ. ಗಳಿಕೆ ಕಂಡು ಸಂಚಲನ ಸೃಷ್ಟಿಸಿದೆ. ಒಟ್ಟಾರೆ ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ 35. 25 ಕೋಟಿ ರೂ. ಬಾಚಿ ಗೆಲುವಿನ ಓಟ ಮುಂದುವರೆಸಿದೆ.