Sunday, September 24, 2023
Homeಮಲೆನಾಡುಚಿಕ್ಕಮಗಳೂರುಕಾಂಗ್ರೆಸ್ ಅಭ್ಯರ್ಥಿ ಟಿ ಡಿ ರಾಜೇಗೌಡರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆ

ಕಾಂಗ್ರೆಸ್ ಅಭ್ಯರ್ಥಿ ಟಿ ಡಿ ರಾಜೇಗೌಡರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆ

ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಟಿ.ಡಿ.ರಾಜೇಗೌಡ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ;  ಶೃಂಗೇರಿ: ಕರಡಿ ದಾಳಿಗೆ ರೈತನ ಸ್ಥಿತಿ ಗಂಭೀರ; ಮಣಿಪಾಲಕ್ಕೆ ದಾಖಲು

ನಾಮಪತ್ರ ಸಲ್ಲಿಸುವ ಮೊದಲು ಬೆಳಗ್ಗೆ ಕೊಪ್ಪ ಪಟ್ಟಣದ ಅರಳಿಕಟ್ಟೆ ಶ್ರೀ ಶಕ್ತಿ ಗಣಪತಿ ದೇವಸ್ಥಾನದಲ್ಲಿ ನಡೆದ ಗಣ ಹೋಮದಲ್ಲಿ ಭಾಗವಹಿಸಿ ನಂತರ, ನಿತ್ಯಧಾರ ಮಾತೆಯ ಚರ್ಚ್, ಜಾಮಿಯಾ ಮಸೀದಿ, ಗಣೇಶ ದುರ್ಗಾ ದೇವಸ್ಥಾನ, ಮೊಹಿಯಿದ್ದೀನ್ ಶಾಫಿ ಜುಮಾ ಮಸೀದಿ, ಮತ್ತು ಬಾಳಗಡಿಯ ಸಿಎಸ್ ಐ ಚರ್ಚ್ ಗಳಲ್ಲಿ ಪ್ರಾಥನೆ ಸಲ್ಲಿಸಿ ನಂತರ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಇನ್ನು ವಿಧಾನಸಭಾ ಚುನಾವಣೆಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿ.ಡಿ.ರಾಜೇಗೌಡ ನಾಮಪತ್ರ ಸಲ್ಲಿಕೆಯಲ್ಲಿ ಘೋಷಿಸಿರುವ ಆಸ್ತಿ ವಿವರದಲ್ಲಿ ಏನಿದೆ ಗೊತ್ತಾ?


ಇತ್ತೀಚಿನ ಜನಪ್ರಿಯ ಸುದ್ದಿಗಳು


ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅವರು ನೀಡಿರುವ ಪ್ರಮಾಣಪತ್ರದಲ್ಲಿ ತಿಳಿಸಿದಂತೆ ರಾಜೇಗೌಡ ಅವರಿಗಿಂತ ಪತ್ನನೆ ಹೆಚ್ಚು ಶ್ರೀಮಂತೆ. ಅಂದರೆ ಸ್ಥಿರ ಮತ್ತು ಚರಾಸ್ತಿ ಸೇರಿದಂತೆ ರಾಜೇಗೌಡ ಅವರ ಹತ್ತಿರ 9.48 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಆದರೆ, ಅವರ ಪತ್ನಿಯ ಬಳಿ ಇರುವ ಸ್ಥಿರ ಮತ್ತು ಚರಾಸ್ಥಿಯ ಮೌಲ್ಯ 17.95 ಕೋಟಿ ರೂಪಾಯಿ. ರಾಜೇಗೌಡರ ಬಳಿ ಇರುವ ಆಸ್ತಿಗಿಂತ ಅವರ ಪತ್ನಿ ಬಳಿ ಇರುವ ಆಸ್ತಿಯ ಮೌಲ್ಯವೇ ಹೆಚ್ಚು

ಒಟ್ಟು ನಗದು ಎಷ್ಟು?;
ರಾಜೇಗೌಡ ಅವರ ಹತ್ತಿರ ಇರುವ ಒಟ್ಟು ನಗದು 1,93,500 ರುಪಾಯಿ
ಅವರ ಪತ್ನಿ ಡಿ.ಕೆ ಪುಷ್ಪ ಅವರ ಹತ್ತಿರ 1,77,400 ರೂಪಾಯಿ
ಅವರ ಮಗ ರಾಜ್ ದೇವ್ ಹತ್ತಿರ 1,58,200 ರೂಪಾಯಿ

ಚರಾಸ್ತಿ ಎಷ್ಟು? ;
ರಾಜೇಗೌಡ ಅವರ ಹತ್ತಿರ ಇರುವ ಚರಾಸ್ತಿ 3 ಕೋಟಿ ರೂ.
ಅವರ ಪತ್ನಿ ಹತ್ತಿರ ಇರುವ ಚರಾಸ್ತಿ 13 ಕೋಟಿ ರೂ.

ಇದನ್ನೂ ಓದಿ; ಕಾರು ಹಾಗೂ ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಸಾಲ ಎಷ್ಟು? ;
ರಾಜೇಗೌಡ ಅವರು 2.46 ಕೋಟಿ ರೂಪಾಯಿ ಸಾಲ ಮಾಡಿದ್ದರೆ.
ಅವರ ಪತ್ನಿ 2.16 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ.

ರಾಜೇಗೌಡರ ಹೆಸರಿನಲ್ಲಿ ಇನೋವಾ, ಅಡಿಕಾರ್, ಮಹೇಂದ್ರ ಜೀಪ್, ಫೋಕ್ಸ್ ವ್ಯಾಗನ್ ಕಾರುಗಳು ಇದ್ದರೆ,

ಪತ್ನಿ ಹೆಸರಿನಲ್ಲಿ ಟೋಯೋಟೋ ಫಾರ್ಚೂನರ್ ಕಾರಿದೆ.

ಇದನ್ನೂ ಓದಿ; ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಧಾಕರ್ ಎಸ್ ಶೆಟ್ಟಿ

Most Popular

Recent Comments