ಒಬ್ಬಳು ಪೀರಿಯೆಡ್ಸ್ ಆದ ಹೆಣ್ಣುಮಗಳು ಓಪನ್ ಹಾರ್ಟ್ ಸರ್ಜರಿ ಮಾಡ್ತಾಳೆ, ಮಾಡಿಸಿಕೊಳ್ತೀರಾ ಇಲ್ವಾ, ಮೈಲಿಗೆ ಅಂತ ಬಿಟ್ಟು ಬಿಡ್ತೀರ? ಜೀವ ಹೋಗೋ ಟೈಮಲ್ಲಿ ಪೀರಿಯೆಡ್ಸ್ ಆಗಿರೋ ನರ್ಸ್ ಕೈಗೆ ಡ್ರಿಪ್ ಹಾಕ್ತಾಳೆ, ಬೇಡ ಅಂತೀರ? ವಿನಯ್ ಗುರೂಜಿ ‘ಪೀರಿಯಡ್ಸ್ ಟಾಕ್’ ಗೆ ನೆಟ್ಟಿಗರಿಂದ ಪರ ವಿರೋಧ ಚರ್ಚೆ ಕೂಡ ನಡೆದಿದೆ. ಇವರು ಪೀರಿಯೆಡ್ಸ್ ಬಗ್ಗೆ ಅಪವಿತ್ರ ಅಂತ ಹೇಳೋ ಮಂದ ಬುದ್ಧಿಯವರ ಬಗ್ಗೆ ಆಡಿರೋ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ; ದ್ವಿಚಕ್ರ ವಾಹನ ಸವಾರರಿಗೆ ಕಾಫಿನಾಡ ಪೊಲೀಸರ ಆರೋಗ್ಯ ಪಾಠ
ಇದನ್ನೂ ಓದಿ; ಐಪಿಎಲ್ ಕಂಪನಿಯ ಪಾಲಿಹೈಲೆಟ್ ಲಘು ಪೋಷಕಾಂಶ ಕಳಪೆ; ಆಡಳಿತ ಮಂಡಳಿ ಕೃಷಿ ಇಲಾಖೆಗೆ ದೂರು
ಇದನ್ನೂ ಓದಿ; 29 ಜೂನ್ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ರಜಾ ಅಂದಾಕ್ಷಣ ಅಪವಿತ್ರ ಅಂತ ಹೇಳೋದು ಮೂರ್ಖತನದ ಪರಮಾವಧಿ. ಹೆತ್ತ ತಾಯಿ ಹೆಣ್ಣು, ಹೊತ್ತ ಭೂಮಿ ಹೆಣ್ಣು, ಹಾಲು ಕೊಡ್ತಿರೋ ಗೋಮಾತೆ ಹೆಣ್ಣು. ಒಬ್ಬಳು ಪೀರಿಯೆಡ್ಸ್ ಆದ ಹೆಣ್ಣುಮಗಳು ಓಪನ್ ಹಾರ್ಟ್ ಸರ್ಜರಿ ಮಾಡ್ತಾಳೆ, ಮಾಡಿಸಿಕೊಳ್ತೀರಾ ಇಲ್ವಾ, ಮೈಲಿಗೆ ಅಂತ ಬಿಟ್ಟು ಬಿಡ್ತೀರ? ಜೀವ ಹೋಗೋ ಟೈಮಲ್ಲಿ ಪೀರಿಯೆಡ್ಸ್ ಆಗಿರೋ ನರ್ಸ್ ಕೈಗೆ ಡ್ರಿಪ್ ಹಾಕ್ತಾಳೆ, ಬೇಡ ಅಂತೀರ? ಇನ್ನೊಬ್ಬಳು ಈಸಿಜಿ ಮಾಡ್ತಾಳೆ.. ಅದೆಲ್ಲ ಬೇಡ, ಮನೆಗೆ ತರಕಾರಿ ಕೊಡೋ ಹೆಣ್ಣುಮಗಳು ಪೀರಿಯೆಡ್ಸ್ ಆಗಿರಲೇ ಬೇಕಲ್ವಾ, ಗ್ರಂದಿಗೆ ಅಂಗಡೀಲಿ ಸಮಿತ್ತು ಕೊಡೋ ಹೆಣ್ಣುಮಗಳೂ ರಜಾ ಆಗ್ತಾಳಲ್ವಾ?
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸಿಗಂದೂರು ಲಾಂಚ್ ಸ್ಥಗಿತಕ್ಕೆ ದಿನಗಣನೆ
- ಅನುಭವಕ್ಕೆ ಬಾರದ ಜ್ಞಾನ ವ್ಯರ್ಥ, ಆತ್ಮ ಜ್ಞಾನವೇ ವಿಜ್ಞಾನ- ವಿಶ್ವನಾಥ ಸುಂಕಸಾಳ
- ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಣೆ
ಕಾಮಾಕ್ಯದಲ್ಲಿರುವ ಅಮ್ಮನವರು ಮುಟ್ಟಾಗ್ತಾರೆ. ಅವರ ಮಹಾಯೋನಿಯಿಂದ ವಿಶಿಷ್ಟ ದಿನದಂದು ರಕ್ತ ಸುರಿಯುತ್ತದೆ. ಕುಬೇರ ತೀರ್ಥದಲ್ಲಿ ಹರಿಯುವ ಆ ಕೆಂಬಣ್ಣದ ದ್ರವವನ್ನು ಮಹಾನ್ ಮಹಾನ್ ಯೋಗಿಗಳೆಲ್ಲ ಪ್ರಸಾದ ಅಂತ ತಗೊಳ್ತಾರೆ. ಅವಳು ಮಹಾನ್ ಹೆಣ್ಣು. ಮಹತ್ತಲ್ಲಿರುವ ಹೆಣ್ಣವಳು. ಅದು ಅಖಂಡ, ಇದು ಖಂಡ. ಆದರೆ ಅವಳು ಪವಿತ್ರ ಆದರೆ ನಮ್ಮ ಅಮ್ಮ ಅಪವಿತ್ರ ಆಗೋದು ಹೇಗೆ? ಇದು ನನ್ನ ಪ್ರಶ್ನೆ’ ಎನ್ನುವ ವಿನಯ್ ಗುರೂಜಿ, ‘ವೇದವನ್ನು ಹೇಳಿಕೊಟ್ಟ ಸರಸ್ವತಿ ಹೆಣ್ಣು, ಪ್ರಣವವನ್ನು ಉಪದೇಶ ಮಾಡಿದ ಗಾಯತ್ರಿ ಹೆಣ್ಣು, ಲಲಿತಾ ಸಹಸ್ರನಾಮ ಹೇಳಿಕೊಟ್ಟ ಅಗಸ್ತ್ಯರ ಮಡದಿ ಹೆಣ್ಣು, ಪ್ರಕೃತಿ ಹೆಣ್ಣು, ಕನ್ನಡ ತಾಯಿ ಹೆಣ್ಣು, ಭಾರತ ಮಾತೆ ಹೆಣ್ಣು, ಗಂಗೆ ಹೆಣ್ಣು, ತುಂಗೆ ಹೆಣ್ಣು.. ಇವರೆಲ್ಲ ಮೆನ್ಸಸ್ ಆದ್ರು ಅಂದ್ರೆ ಅವರನ್ನು ಅಪವಿತ್ರ ಅಂತೀರಾ?’ ಎಂಬ ಗುರೂಜಿ ಅವರ ಮಾತುಗಳು ಎಂಥಾ ಸಂಪ್ರದಾಯಸ್ಥರೂ ಯೋಚಿಸುವ ಹಾಗೆ ಮಾಡುತ್ತದೆ.
ಇದನ್ನೂ ಓದಿ; ಬೈಕ್ ವೀಲಿಂಗ್ ಹುಚ್ಚಾಟದಿಂದ ಭೀಕರ ಅಪಘಾತ
ಪೀರಿಯೆಡ್ಸ್ ಅನ್ನು ಮೈಲಿಗೆ ಅಂತ ಒಂದಿಷ್ಟು ಮಂದಿ ಅತಿ ಬುದ್ಧಿವಂತರು ಸೇರಿ ನಿರ್ಧರಿಸಿದ್ದಾರೆ. ನಿಜದಲ್ಲಿ ಪ್ರಕೃತಿಯ ಒಂದು ವಿಶಿಷ್ಟ ಗುಣ ಅದು. ಆ ವಿಶಿಷ್ಟತೆಯನ್ನು ಒಪ್ಪಿಕೊಳ್ಳೋಣ’ ಅನ್ನೋ ಇವರ ಮಾತು ಸೋಷಿಯಲ್ ಮೀಡಿಯಾದಲ್ಲಿ ಹಲವರು ಬೆಂಬಲಿಸಿದ್ದಾರೆ. ಇನ್ನು ಕೆಲವರು ಸಂಪ್ರದಾಯಕ್ಕೆ ವಿರೋಧವಾಗಿ ಮಾತನಾಡಬೇಕು ಎಂಬ ವ್ಯಂಗ್ಯದ ಮಾತು ಹೇಳಿದ್ದಾರೆ.
ಇದನ್ನೂ ಓದಿ; ಏರುತ್ತಿದೆ ಕಾಫಿ ಬೆಲೆ, ಬೆಳೆಗಾರರಿಗೆ ಸಿಹಿ ಸುದ್ದಿ, ಗ್ರಾಹಕರಿಗೆ ಕಹಿ ಸುದ್ದಿ