ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಾಜಿ ಶಾಸಕ ಸಿ.ಟಿ.ರವಿ, ಹಾಲಿ ಕಾಂಗ್ರೆಸ್ ಶಾಸಕ ಎಚ್.ಡಿ. ತಮ್ಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಇದನ್ನೂ ಓದಿ; ಪೆಟ್ರೋಲ್ ತುಂಬಿಸುವಾಗಲೇ ಬ್ಯಾಟರಿ ಸ್ಪೋಟ
ಇದನ್ನೂ ಓದಿ; ಬೈಕ್ ಅಪಘಾತದಲ್ಲಿ ಯೋಧನ ಸಾವು; ಪೊಲೀಸರ ಬಳಿ ಹೆತ್ತವರು ಕೇಳಿದ್ದು ಏನು?
ಸರ್ಕಾರ ಬದಲಾವಣೆ ಆದರೆ ಚುನಾಯಿತ ಪ್ರತಿನಿಧಿಗಳು, ಪಕ್ಷಗಳು ಬದಲಾಗುತ್ತವೆ ಹೊರತು ಆಡಳಿತ ಪಕ್ಷದ ಮೂಗಿನ ನೇರಕ್ಕೆ ಪೂರ್ಣ ಕಾನೂನುಗಳು ಮತ್ತು ಮೂಲಭೂತ ಸೌಕರ್ಯದಡಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಬದಲಾಗುವುದಿಲ್ಲ, ಬದಲಾಗಲೂಬಾರದು ಎಂದು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸೈಟ್ ವಿಚಾರಕ್ಕೆ ಗಲಾಟೆ; ಮಹಿಳೆಗೆ ಚಾಕುವಿನಿಂದ ಹಲ್ಲೆ
- ಉಡುಪಿಯಿಂದ ಮಹಿಳೆ ನಾಪತ್ತೆ: ದೂರು ದಾಖಲು
- ಸೇತುವೆ ಬಳಿ ಎರಡು ಗೋವುಗಳ ತಲೆ, ಕಾಲು ಪತ್ತೆ
ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿ ವೇಗಗತಿಯಲ್ಲಿ ನಡೆಯುತ್ತಿದ್ದು, ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಚಿಕ್ಕಮಗಳೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಅತ್ಯಂತ ವೇಗಗತಿಯಲ್ಲಿ ಸಾಗುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕಿದೆ.
ಇದನ್ನೂ ಓದಿ; ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು
ಭದ್ರಾ ನದಿ ಗೊಂಧಿ ಯೋಜನೆಯ ಮೂಲಕ ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಮೊದಲನೇ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮೂರು ಮತ್ತು ನಾಲ್ಕನೇ ಹಂತದ ಕಾಮಗಾರಿ ಪ್ರಾರಂಭಿಸಬೇಕು. ರಣಘಟ್ಟದಿಂದ ಬೆಳವಾಡಿ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು. ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಮುಗಿಸಬೇಕು. ಮುಜರಾಯಿ ಇಲಾಖೆಯಿಂದ ಒಟ್ಟು 46 ದೇವಸ್ಥಾನದ ಅಭಿವೃದ್ಧಿಗಾಗಿ ಅನುದಾನ ಮಂಜೂರಾಗಿದ್ದು ಜೀರ್ಣೋದ್ದಾರ ಕಾಮಗಾರಿ ಮುಗಿಸಬೇಕೆಂದು ಸಲಹೆ ನೀಡಿದ್ದಾರೆ.
ಅಮಾಯಕರ ಮೇಲೆ ಸುಳ್ಳು ಕೇಸ್:
ಕ್ಷೇತ್ರದಲ್ಲಿ ಸುಳ್ಳು ಮೊಕದ್ದಮೆ ದಾಖಲಿಸಿ ಅಮಾಯಕರನ್ನು ಜೈಲಿಗೆ ಕಳುಹಿಸಿ ದ್ವೇಷ ರಾಜಕಾರಣ ಮಾಡುತ್ತಿರುವುದು ವಿಪರ್ಯಾಸ. ರಾಜಧರ್ಮ ಎಲ್ಲರಲ್ಲೂ ಇರಲಿ, ದ್ವೇಷ ರಾಜಕಾರಣವನ್ನು ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯತೆಯಾಗಿರಲಿ, ಅಭಿವೃದ್ಧಿಯ ಕಡೆ ಗಮನ ನೀಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಒಳ್ಳೆಯ ಕಾರ್ಯಕ್ಕೆ ಸದಾ ಬೆಂಬಲವಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ಹಿಟ್ ಅಂಡ್ ರನ್; ತಪ್ಪಿದ ಭಾರಿ ಅನಾಹುತ
ನಾನು ಕಾಂಗ್ರೆಸ್ ಶಾಸಕನಾಗಿರಬಹುದು ಆದರೆ ನಾನೊಬ್ಬ ಸಂಘದ ಸ್ವಯಂಸೇವಕ ಎನ್ನಲು ಹೆಮ್ಮೆಯಿದೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಾನೊಬ್ಬ ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಚಿಕ್ಕಮಗಳೂರು ಶಾಸಕ ಎಚ್. ಡಿ ತಮ್ಮಯ್ಯ ಹೇಳಿದ್ದಾರೆ.
ಇದನ್ನೂ ಓದಿ; ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ರೈಡ್
ನಗರದಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣಪತಿ ಸಮಿತಿಯಲ್ಲಿ ಕೋದಂಡ ಸ್ವಾಮಿ ದೇವಸ್ಥಾನದ ಸಮಿತಿಯಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡುವಾಗ ದಾನಿಗಳ ಬಳಿ ಸಂಗ್ರಹಕ್ಕೆ ಹೋಗುತ್ತಿದ್ದ ಸಮಯದಲ್ಲಿ ಅವರು ನೀಡುತ್ತಿದ್ದ 500 ರೂ. ದೊಡ್ಡ ಹಣವಾಗುತ್ತಿತ್ತು. ಇದನ್ನು ಚಂದ ವಸೂಲಿ ಎಂದು ಹೇಳುವುದಿಲ್ಲ ಸಂಘದಲ್ಲಿ ಸಂಗ್ರಹ ಎಂದು ಹೇಳಿಕೊಂಡಿದ್ದಾರೆ. ನಾನು ಬಿಜೆಪಿಯಲ್ಲಿ 15 ರಿಂದ 16 ವರ್ಷ ಕೆಲಸ ಮಾಡಿದ್ದೇನೆ. ಈಗಲೂ ನಾನೊಬ್ಬ ಸಂಘದ (rss) ಸ್ವಯಂ ಸೇವಕ. ಕಾಂಗ್ರೆಸ್ ಪಕ್ಷದಿಂದ ಶಾಸಕನಾಗಿದ್ದರೂ ಸಂಘದಲ್ಲಿನ ಶಿಸ್ತಿನಿಂದ ನಾನೊಬ್ಬ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ.
ನಾನು ಜಾತ್ಯಾತೀತ ವ್ಯಕ್ತಿ, ಜಾತ್ಯಾತೀತ ಶಾಸಕ ಪ್ರಮಾಣ ವಚನ ಸ್ವೀಕರಿಸುವಾಗ ಅದೇ ನಿಟ್ಟಿನಲ್ಲಿ ಸ್ವೀಕರಿಸಿದ್ದೇನೆ. ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿಯೇ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ.