ಶೃಂಗೇರಿ:(ನ್ಯೂಸ್ ಮಲ್ನಾಡ್ ವರದಿ) ಚುನಾವಣಾ ಕರ್ತವ್ಯಕ್ಕೆ ಲೋಪವನ್ನುಂಟು ಮಾಡಿ, ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಯನ್ನು ಅಮಾನತ್ತುಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಪುಟ್ಟೇಗೌಡ ಅಮಾನತ್ತು ಆದ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ.
ಇದನ್ನೂ ಓದಿ; ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಹಾಜರು: ಆರೋಪ!
ಇದನ್ನೂ ಓದಿ; ಶಾಸಕರು ಅನುದಾನ ತರದೇ ತಂದ ಅನುದಾನಗಳನ್ನು ತನ್ನ ಬೆಂಬಲಿಗರಿಗೆ ನೀಡಿದ್ದಾರೆ
ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಪುಟ್ಟೇಗೌಡ ಅವರಿಗೆ ನಿಯೋಜಿಸಿದ್ದ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡದೇ ಚುನಾವಣಾ ಕೆಲಸಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪ ಮಾಡಿದ್ದಾರೆ ಮತ್ತು ಮಹಿಳಾ ಸಿಬ್ಬಂದಿಗಳ ಮುಂದೆ ಅವಾಚ್ಯ ಪದಗಳನ್ನು ಬಳಸಿ ಅವರುಗಳಿಗೆ ಮುಜುಗರವಾಗುವಂತೆ ನಡೆದುಕೊಂಡಿದ್ದು, ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಎಸ್.ಎಸ್.ಎಲ್.ಸಿ ಫಲಿತಾಂಶ: ಚಿಕ್ಕಮಗಳೂರು ಜಿಲ್ಲೆಗೆ ಎಷ್ಟನೇ ಸ್ಥಾನ?
- ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ
- ಕೋಟಿ ಹಣದ ಕನಸಲ್ಲಿ ಮಾಜಿ ಶಾಸಕನ ಮನೆಗೆ ಕನ್ನ
ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ರ ಕಲಂ 28 (ಎ) ಮತ್ತು 136 ರಡಿ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಆದೇಶ ಹೊರಡಿಸಿದ್ದಾರೆ.
ಇಬ್ಬರ ಹೆಸರು ಬರೆದಿಟ್ಟು ಚಿನ್ನಾಬೆಳ್ಳಿ ವ್ಯಾಪಾರಿ ಆತ್ಮಹತ್ಯೆ
ಶಿವಮೊಗ್ಗ: ಇಬ್ಬರ ಹೆಸರು ಬರೆದಿಟ್ಟು ಚಿನ್ನಾಬೆಳ್ಳಿ ವ್ಯಾಪಾರಸ್ಥನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸಿದ್ದಯ್ಯ ರಸ್ತೆಯ ಕಾಡುವೀರಪ್ಪ ಕಾಂಪೌಂಡ್ ನಲ್ಲಿ ನಡೆದಿದೆ. ಕೃಷ್ಣ ಕುಮಾರ್ ಕುರ್ದೇಕರ್ (41) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಇದನ್ನೂ ಓದಿ; ಚಿಕ್ಕಮಗಳೂರು; ಚುನಾವಣೆ ಬಹಿರಂಗ ಪ್ರಚಾರ ಅಂತ್ಯ
ನಗರದಲ್ಲಿ 18 ವರ್ಷಗಳಿಂದ ಚಿನ್ನ ಬೆಳ್ಳಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ ಕೃಷ್ಣ ಕುಮಾರ್ ಕುರ್ದೇಕರ್, ಪ್ರಶಾಂತ್ ಮೋರೆ ಹಾಗೂ ಗಣೇಶ್ ಹೆಸರು ಬರೆದು ಇವರಿಬ್ಬರು ನೀಡಿರುವ ಮಾನಸಿಕ ಕಿರುಕುಳದಿಂದ ಬೇಸತ್ತುವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಕೃಷ್ಣ ಕುಮಾರ್ ಕುರ್ದೇಕರ್ ಚಿನ್ನಾಭರಣವನ್ನ ಪ್ರಶಾಂತ್ ಮತ್ತು ಗಣೇಶ್ ಗೆ ಕೊಟ್ಟಿದ್ದರೂ ಚಿನ್ನಾಭರಣವನ್ನ ನೀಡಿಲ್ಲವೆಂದು ಇಬ್ಬರು ಕೃಷ್ಣ ಕುಮಾರ್ ಗೆ ಈ ಹಿಂದೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. ಇದನ್ನ ಮನಸ್ಸಿನಲ್ಲಿಟ್ಟುಕೊಂಡ ಕೃಷ್ಣ ಕುಮಾರ್ ನಿನ್ನೆ ಸಂಜೆ ಬಚ್ಚಲು ಮನೆಯಲ್ಲಿ ವಿಷ ಸೇವಿಸಿದ್ದಾರೆ.
ಇದನ್ನೂ ಓದಿ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ
ಜೊತೆಗೆ ಡೆತ್ ನೋಟ್ ಬರೆದಿಟ್ಟು ಡೆತ್ ನೋಟ್ ನಲ್ಲಿ ಪ್ರಶಾಂತ್ ಆಸಿಡ್ ಶಾಪ್ ಮಾಲೀಕ ಪ್ರಶಾಂತ್ ಮತ್ತು ಗಣೇಶ್ ಇಬ್ಬರು ಚಿನ್ಬಾಬೆಳ್ಳಿ ಲೆಕ್ಕಚಾರದಲ್ಲಿ ಮೋಸ ಮಾಡಿರುವುದಾಗಿ ಉಲ್ಲೇಕಿಸಿ ನನ್ನ ಸಾವಿಗೆ ನ್ಯಾಯಕೊಡಿಸುವಂತೆ ಎಸ್ಪಿಗೆ ಮನವಿ ಮಾಡಿಕೊಂಡಿದ್ದಾರೆ.