Sunday, September 24, 2023
Homeಮಲೆನಾಡುಚಿಕ್ಕಮಗಳೂರುಪ್ರವಾಸಿ ತಾಣಗಳಲ್ಲಿ ಅರಣ್ಯ ಇಲಾಖೆ ಅಸಮರ್ಪಕ ನಿರ್ವಹಣೆ-ಸುಧೀರ್ ಅಬ್ಬುಗುಡಿಗೆ ಆರೋಪ

ಪ್ರವಾಸಿ ತಾಣಗಳಲ್ಲಿ ಅರಣ್ಯ ಇಲಾಖೆ ಅಸಮರ್ಪಕ ನಿರ್ವಹಣೆ-ಸುಧೀರ್ ಅಬ್ಬುಗುಡಿಗೆ ಆರೋಪ

ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಳಸ ವಲಯದ ವಿವಿಧ ಪ್ರವಾಸಿ ತಾಣಗಳ ನಿರ್ವಹಣೆ ಅಸಮರ್ಪಕವಾಗಿದೆ, ಮಾವಿನಕೆರೆ ಗ್ರಾಮದ ವ್ಯಾಪ್ತಿಗೆ ಬರುವ ಕಲಸೇಶ್ವರ ಗ್ರಾಮಾರಣ್ಯ ಸಮಿತಿಗೆ ಸಂಬಂಧಿಸಿದಂತೆ, ಸಮಿತಿಯು ರಚನೆಯಾದ ವರ್ಷದಿಂದ ಇಂದಿನವರೆಗೂ ನಡೆದಿರುವ ಹಣಕಾಸಿನ ವ್ಯವಹಾರದಲ್ಲಿ, ಹಾಗೂ ಸೂರಮನೆ ಜಲಪಾತ ಮತ್ತು ಕ್ಯಾತನಮಕ್ಕಿ ಗುಡ್ಡದ ಶುಲ್ಕ ಸಂಗ್ರಹಣೆ ಮತ್ತು ನಿರ್ವಹಣೆ ವಿಚಾರದಲ್ಲಿ ಹಲವಾರು ವ್ಯತ್ಯಾಸಗಳು ಕಂಡು ಬಂದಿರುತ್ತಿದ್ದೆ ಎಂದು ಸುಧೀರ್ ಅಬ್ಬುಗುಡಿಗೆ ಆರೋಪಿಸಿದ್ದಾರೆ.

ಇದನ್ನೂ ಓದಿ; ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಸಮಿತಿ ಮೂಲಕ ಅರಣ್ಯ ಇಲಾಖೆ ನಡೆಸಿರುವ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವಂತೆ 2022ರಲ್ಲಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲಾಗಿತ್ತು. ಕಳಸ ಅರಣ್ಯ ಇಲಾಖೆ ಸಮಂಜಸಿ ಮಾಹಿತಿ ನೀಡದಿರುವುದರಿಂದ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅರ್ಜಿ ಸಲ್ಲಿಸಿ ಐದಾರು ತಿಂಗಳ ನಂತರ ದೃಢೀಕೃತ ನಕಲು ಪ್ರತಿಯೊಂದಿಗೆ ಮಾಹಿತಿ ನೀಡಲಾಗಿದೆ ಎಂದರು.

ಇದನ್ನೂ ಓದಿ; ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ ಜಾರ್ಜ್ ನೇಮಕ

10 ಸಾವಿರ ಬಾಡಿಗೆ ಪಡೆದಿರುವುದೇ ಕೊನೆಯ ವ್ಯವಹಾರ:
2007 ರಂದು ಸಮಿತಿಯ ಮೂಲಕ ಎರಡು ಹಂತದಲ್ಲಿ ರಮಣ ಫರ್ನೀಚರ್ಸ್ ಶಿವಮೊಗ್ಗ ಇವರಿಗೆ 1,00,571 ರೂ.ಗಳನ್ನ ಪಾವತಿಸಿ ಖರೀದಿಸಲಾದ 337 ಪ್ಲಾಸ್ಟಿಕ್ ಕುರ್ಚಿ ಮತ್ತು 10 ಸ್ಟೀಲ್ ಟೇಬಲ್ ಗಳನ್ನು ಬಾಡಿಗೆ ನೀಡಿ ಅದರಿಂದ ಬಂದ ಹಣವನ್ನು ಸಮಿತಿಯ ಖಾತೆಗೆ ಜಮಾ ಮಾಡಿಕೊಳ್ಳುವ ಬಗ್ಗೆ ಸಭಾ ನಿರ್ಣಯ ಕೈಗೊಂಡು ಕಾರ್ಯರೂಪಕ್ಕೆ ತರಲಾಗಿರುತ್ತದೆ. ಆದರೆ 10 ಸಾವಿರ ಬಾಡಿಗೆ ಪಡೆದಿರುವುದೇ ಕೊನೆಯ ವ್ಯವಹಾರವಾಗಿರುತ್ತದೆ. ಅಲ್ಲದೇ ಇದುವರೆಗೂ ಕೇವಲ 29,477 ರೂಗಳು ಮಾತ್ರ ಸಮಿತಿಯ ಖಾತೆಯಲ್ಲಿ ಉಳಿಸಲಾಗಿದೆಯೆಂಬ ಮಾಹಿತಿಯಿದೆ ಎಂದು ದೂರುದರು.

ಸುರಕ್ಷತೆ ಹಾಗೂ ಸ್ವಚ್ಛತೆಗಿಲ್ಲ ಸಿಬ್ಬಂದಿಗಳು:
2021 ಜನವರಿ ತಿಂಗಳಿಂದ ಅಬ್ಬುಗುಡಿಗೆ ಜಲಪಾತ ವೀಕ್ಷಣೆಗೆ 30 ರೂ. ಮತ್ತು ಕ್ಯಾತನಮಕ್ಕಿ ಗುಡ್ಡಕ್ಕೆ 50 ರೂಗಳ ವೀಕ್ಷಣಾ ಶುಲ್ಕ ಪ್ರತಿ ವ್ಯಕ್ತಿಗೆ ವಿಧಿಸಿ, ನಿರ್ವಹಿಸಿಕೊಂಡು ಬರಲಾಗುತ್ತಿದೆ. ಜಲಪಾತ ವೀಕ್ಷಣೆಗೆ ಬರುವ ವೀಕ್ಷರಿಂದ ಶುಲ್ಕ ವಸೂಲಿಗೆ ಮತ್ತು ಜಲಪಾತದ ಬಳಿ ಪ್ರವಾಸಿಗರ ಸುರಕ್ಷತೆ ಹಾಗೂ ಸ್ವಚ್ಛತೆ ಕಾಪಾಡಲು ಇಬ್ಬರು ಸಿಬ್ಬಂದಿಗಳನ್ನ ನೇಮಿಸಿಕೊಂಡಿರುತ್ತದೆ. ಆದರೆ ಕಳೆದ ನಾಲ್ಕೈದು ತಿಂಗಳಿಂದ ಕೇವಲ ಒಬ್ಬ ಸಿಬ್ಬಂದಿ ಮಾತ್ರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಲಪಾತದ ಬಳಿಯಿದ್ದು ಸುರಕ್ಷತೆ ಕಾಯ್ದುಕೊಳ್ಳಬೇಕಿದ್ದ ಮತ್ತೊಬ್ಬ ಸಿಬ್ಬಂದಿಯನ್ನ ಇಲಾಖೆ ಇತರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ. ಆದರೆ ಇಬ್ಬರಿಗೂ ತಲಾ 12,000 ಸಂಬಳ ಮಾತ್ರ ಸಮಿತಿಯಿಂದಲೇ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


2022ರ ನವೆಂಬರ್‌ನಲ್ಲಿ ವಿತರಿಸಿದ ಹಳದಿ ಬಣ್ಣದಲ್ಲಿ ಮುದ್ರಿಸಿದ ಟಿಕೆಟ್‌ಗಳು ಪುನರಾವರ್ತನೆಯಾದ ಬಗ್ಗೆ ಉಪವಲಯ ಅರಣ್ಯಾಧಿಕಾರಿಯ ಗಮನಕ್ಕೆ ತರಲಾಗಿತ್ತು ಎಂದು ಹೇಳಿದರು. ಇದೇ ಕ್ರಮ ಸಂಖ್ಯೆ ಟಿಕೆಟ್ ಬುಕ್‌ಗಳು ಗುಲಾಬಿ ಬಣ್ಣದಲ್ಲಿ 2022ನೇ ಜುಲೈ, ಆಗಸ್ಟ್ ತಿಂಗಳಲ್ಲಿ ನೀಡಲಾಗಿತ್ತು. 1500ಕ್ಕೂ ಹೆಚ್ಚು ಟಿಕೆಟ್‌ಗಳು ಪುನರಾವರ್ತನೆಯಾಗಿರುವ ಅನುಮಾನವಿದೆ. ಸಭಾ ನಡಾವಳಿಯಲ್ಲಿ ಕ್ಯಾತನಮಕ್ಕಿ ಟಿಕೆಟ್ ಬುಕ್ ಕ್ರಮ ಸಂಖ್ಯೆ 42801ರಿಂದ 44100ರವರೆಗೆ ಒಟ್ಟು 13 ಬುಕ್ ಪ್ರಿಂಟಿಂಗ್ ಪ್ರೆಸ್‌ನವರ ಕಣ್ಣಪ್ಪಿನಿಂದ ಆಗಿದೆಯೆಂದು ಪ್ರಸ್ತಾಪಿಸಲಾಗಿದೆ. ನಗದು ವ್ಯವಹಾರ ಪುಸ್ತಕದಲ್ಲಿ ವಿತರಿಸಲಾದ ಟಿಕೆಟ್ ಕ್ರಮ ಸಂಖ್ಯೆ ಮತ್ತು ಸಂಗ್ರಹವಾದ ಹಣದ ವಿವರವನ್ನು 2022ರ ಸೆಪ್ಟೆಂಬರ್‌ವರೆಗೆ ಮಾತ್ರ ನಮೂದಿಸಲಾಗಿದೆ. ಟಿಕೆಟ್ ಕ್ರಮ ಸಂಖ್ಯೆ ವಿವರಗಳಿಲ್ಲ. ಜಲಪಾತ ಮತ್ತು ಕ್ಯಾತನಮಕ್ಕಿ ಗುಡ್ಡದ ಶುಲ್ಕ ಸಂಗ್ರಹಣಿ ಮತ್ತು ನಿರ್ವಹಣಿ ಗುತ್ತಿಗೆ ನೀಡುವ ಬಗ್ಗೆ ಇಲಾಖೆ ಮುಂದಾಗುತ್ತಿಲ್ಲ ಎಂದು ದೂರಿದರು.

ಟಿಕೆಟ್ ಕೌಂಟರ್ ನಿಂದ ಪಾರ್ಕಿಂಗ್ ತನಕ ಹೋಗಲು ಟಿ.ಟಿ.ಯಂತಹ ವಾಹನಗಳಿಗೆ ಮಳೆಗಾಲದಲ್ಲಿ ರಸ್ತೆ ಸಮಸ್ಯೆಯಾಗುವುದು ನಿಜ. ಆದರೆ ಬೇಸಿಗೆ ಕಾಲದಲ್ಲೂ ಸಹ ಹೋಗದಂತೆ ತಡೆಹಿಡಿಯಲಾಗಿದೆ. ಈ ವಿಚಾರದಲ್ಲಿ ಸಮಿತಿಯು ಸಭಾ ನಿರ್ಣಯ ಸಹ ಮಾಡಿರುವುದಿಲ್ಲ ಮತ್ತು ಸಂಬಂಧಪಟ್ಟ ಇತರೆ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಮಾಹಿತಿಯಿಲ್ಲ.

ಇದನ್ನೂ ಓದಿ; ಹಾಸ್ಟೆಲ್ ನಲ್ಲಿ ಬಾಲಕಿ ಅನುಮಾನಾಸ್ಪದ ಸಾವು

ಲಕ್ಷಾಂತರ ರೂಪಾಯಿ ಆದಾಯವಿದ್ದರೂ ಜಲಪಾತಕ್ಕೆ ಹೋಗುವ ಮಾರ್ಗ ಮಧ್ಯೆ ಸಿಗುವ ಅಬ್ಬುಗುಡಿಗೆ ಹಳ್ಳಕ್ಕೆ ಕಿರುಸೇತುವೆ ಸಹ ಮಾಡಿಸಲು ಇಲಾಖೆ ಇನ್ನೂ ಪ್ರಯತ್ನಿಸುತ್ತಿಲ್ಲ. ಸಂಬಂಧಿಸಿದ ಇಲಾಖೆಯಿಂದ ಅಂದಾಜು ಪಟ್ಟಿ ತಯಾರಿಸದೇ, ಜಲಪಾತದ ಬಳಿ ಮೆಟ್ಟಿಲು ನಿರ್ಮಾಣ, ಪಾರ್ಕಿಂಗ್ ನಿರ್ಮಾಣ ಮಾಡಲಾಗಿದೆ. ಆದರೆ ಇದನ್ನೂ ಸಹ ಪೂರ್ಣ ಪ್ರಮಾಣದಲ್ಲಿ ಮಾಡಿರುವುದಿಲ್ಲ. ಅಲ್ಲದೇ ಪ್ರವಾಸಿಗರ ಅನುಭವ ಮತ್ತು ದೂರುಗಳನ್ನು ದಾಖಲಿಸಲು ಪುಸ್ತಕವನ್ನು ನಿರ್ವಹಿಸುತ್ತಿಲ್ಲ.

ಮಲೆನಾಡು ಭಾಗದಲ್ಲಿ ಕೃಷಿಯನ್ನೆ ನಂಬಿರುವ ಹಲವರು, ಇತ್ತೀಚೆಗೆ ಅಡಿಕೆ ಮರಗಳಿಗೆ ವ್ಯಾಪಕವಾಗಿ ಹರಡುತ್ತಿರುವ ರೋಗ, ತೋಟ ನಿರ್ವಹಣೆ ದುಬಾರಿ ವೆಚ್ಚ, ಪ್ರತಿವರ್ಷ ಅತೀವೃಷ್ಟಿಯಿಂದಾಗಿ ಫಸಲು ಹಾನಿಯಾಗಿ ಆದಾಯ ಕಡಿಮೆಯಾಗಿ ಕೃಷಿಯಿಂದಲೇ ಜೀವನ ನಿರ್ವಹಣೆ ಕಷ್ಟವೆನಿಸಿ, ಇದೀಗ ಹೋಂಸ್ಟೇಯಂತಹ ಪರ್ಯಾಯ ಮಾರ್ಗದತ್ತ ಯೋಚಿಸುತ್ತಿದ್ದಾರೆ. ಕಳಸದಲ್ಲಿಯೇ ಉದ್ಯೋಗ ಸೃಷ್ಟಿ ಅವಕಾಶವಿರುವಾಗ, ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವತ್ತ ಪರಿಸರ ಉಳಿಸುವುದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವತ್ತ ಅರಣ್ಯ ಇಲಾಖೆ ಗಮನ ಹರಿಸುವಂತೆ ಕಾಣುತ್ತಿಲ್ಲ. ಇವೆಲ್ಲದರ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ಸುಧೀರ್ ಅಬ್ಬುಗುಡಿಗೆ ಹೇಳಿದರು.

ಇದನ್ನೂ ಓದಿ;  ಮಧ್ಯಾಹ್ನದ ಊಟ ಸೇವಿಸಿ 35 ಸೈನಿಕರು ಅಸ್ವಸ್ಥ

Most Popular

Recent Comments