Sunday, October 1, 2023
Homeಮಲೆನಾಡುಚಿಕ್ಕಮಗಳೂರುಕಾಂಗ್ರೆಸ್ ಜೊತೆ ಜೆಡಿಎಸ್ MLC ಭೋಜೇಗೌಡ ಒಳ ಒಪ್ಪಂದ; ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಫಸ್ಟ್ ರಿಯಾಕ್ಷನ್

ಕಾಂಗ್ರೆಸ್ ಜೊತೆ ಜೆಡಿಎಸ್ MLC ಭೋಜೇಗೌಡ ಒಳ ಒಪ್ಪಂದ; ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಫಸ್ಟ್ ರಿಯಾಕ್ಷನ್

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜೆಡಿಎಸ್ ಎಂ ಎಲ್ ಸಿ ಭೋಜೇಗೌಡ ಬಿಜೆಪಿ ಅಭ್ಯರ್ಥಿ ಸಿ ಟಿ ರವಿ ಅವರನ್ನು ಸೋಲಿಸಲು ಒಳ ಒಪ್ಪಂದ ಮಾಡಿಕೊಂಡಿದ್ದರ ಕುರಿತಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ ಎಂ ತಿಮ್ಮಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ; ಕೊಪ್ಪ ಮೂಲದ ಚಲನಚಿತ್ರ ನಟ ಸಂಪತ್ ಜಯರಾಮ್ ಸುಸೈಡ್

ಇದನ್ನೂ ಓದಿ; ಈ ಬಾರಿ ಕಾಂಗ್ರೆಸ್ 141 ಸ್ಥಾನ ಗೆಲ್ಲಲಿದೆ- ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಈ ಕುರಿತು ಪಿತಾಮಹ ಹಾಗೂ ನ್ಯೂಸ್ ಮಲ್ನಾಡ್ ನೊಂದಿಗೆ ಮಾತನಾಡಿರುವ ಅಭ್ಯರ್ಥಿ ತಿಮ್ಮಶೆಟ್ಟಿ ತಮಗೆ ಇವೆಲ್ಲ ಮೊದಲೇ ಗೊತ್ತಿತ್ತು ಎನ್ನುವಂತೆ ಕೂಲ್ ಆಗಿಯೇ ಉತ್ತರಿಸಿದ್ದಾರೆ.

ಏನಂದ್ರು ಅಭ್ಯರ್ಥಿ ತಿಮ್ಮಶೆಟ್ಟಿ?

ಜೆಡಿಎಸ್ ಪಕ್ಷ ನನ್ನ ಅಭ್ಯರ್ಥಿಯಾನ್ನಾಗಿ ಮಾಡಿದೆ. ನಾನು ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡ್ತೀನಿ. ದೊಡ್ಡವರದೆಲ್ಲ ಏನು ಒಳ ಒಪ್ಪಂದಗಳು ಮಾಡಿಕೊಂಡಿದ್ದಾರೋ ಅದು ನಮಗೆ ಗೊತ್ತಿಲ್ಲ. ಅದೆಲ್ಲ ಅವರಿಗೆ ಬಿಟ್ಟಿದ್ದು ಎಂದು ಬಿ.ಎಮ್ ತಿಮ್ಮಶೆಟ್ಟಿ ಹೇಳಿದ್ದಾರೆ. ಹಾಗಾದರೆ ಜೆಡಿಎಸ್ ಇಲ್ಲಿ ‘ಡಮ್ಮಿ’ ಎಂದಾಯ್ತಲ್ಲ.. ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾರು ಡಮ್ಮಿ ಅನ್ನೋದನ್ನು ಈ ಬಾರಿ ಚುನಾವಣೆಯಲ್ಲಿ ತೋರಿಸುತ್ತೇನೆ ಎನ್ನುವ ಮೂಲಕ ಗೆದ್ದು ತೋರಿಸ್ತೀನಿ ಎಂದು ಸವಾಲೆಸೆದಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಒಳ ಒಪ್ಪಂದದಿಂದಲೇ ರಾಜ್ಯದಲ್ಲಿ ನೆಲಕಚ್ಚುತ್ತಿರುವ ಜೆಡಿಎಸ್!

ಒಳ ಒಪ್ಪಂದ ಇಂದಿನ ರಾಜಕೀಯಕ್ಕೆ ಹೊಸದೇನಲ್ಲ. ಆದರೆ ಜೆಡಿಎಸ್ ನ ಅತಿಯಾದ ಅಡ್ಜೆಸ್ಟ್ ಮೆಂಟ್, ಕಾಂಪ್ರಮೈಸ್ ರಾಜಕೀಯವೇ ಪಕ್ಷಕ್ಕೆ ಮುಳುವಾಗುತ್ತಿದೆ. ಇದೇ ಕಾರಣದಿಂದ ದಶಕಗಳ ಕಾಲ ಪಕ್ಷಕ್ಕಾಗಿ ದುಡಿದ ಅನೇಕ ಶಾಸಕರು ಜೆಡಿಎಸ್ ಗೆ ರಾಜೀನಾಮೆ ನೀಡಿದ ಉದಾಹರಣೆಗಳಿವೆ. ಇನ್ನು ಚಿಕ್ಕಮಗಳೂರಿನಲ್ಲೂ ಈ ಒಳ ಒಪ್ಪಂದ ಜೋರಾಗಿಯೇ ಇದ್ದು ಜೆಡಿಎಸ್ ಎಂ ಎಲ್ ಸಿ ಭೋಜೇಗೌಡ ಅವರ ವೀಡಿಯೋ ವೈರಲ್ ಆದ ಬಳಿಕ ಇದು ಸಾರ್ವಜನಿಕವಾಗಿ ಬಹಿರಂಗಗೊಂಡಿದೆ.

ಮುಖಂಡರ ಒಳ ಒಪ್ಪಂದ – ಕಾರ್ಯಕರ್ತರಲ್ಲಿ ಗೊಂದಲ

ಜೆಡಿಎಸ್ ನ ಒಳ ಒಪ್ಪಂದ ಹಾಗೂ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಗೆ ಪಕ್ಷದ ಕಾರ್ಯಕರ್ತರೇ ಬೇಸರಗೊಂಡಿದ್ದಾರೆ. ಯಾವ ಅಭ್ಯರ್ಥಿಯ ಪರ ಕೆಲಸ ಮಾಡಬೇಕು.. ಯಾವ ಮುಖಂಡರ ಮಾತು ಕೇಳಬೇಕು ಎಂಬ ಗೊಂದಲದಲ್ಲಿದ್ದಾರೆ. ಈ ಹಿಂದೆ ಕಡೂರು ಡಿಕೆಟ್ ಹಂಚಿಕೆ ವಿವಾರದಲ್ಲೂ ಜೆಡಿಎಸ್ ಇದೇ ದ್ವಂದ ನಿಲುವು ತೋರಿತ್ತು. ಮೊದಲು ಸಿ ಎಂ ಧನಂಜಯ್ ಹೆಸರು ಘೋಷಿಸಿ, ಕಾಂಗ್ರೆಸ್ ಸೇರಿದ್ದ ದತ್ತಾ ವಾಪಾಸ್ ಪಕ್ಷಕ್ಕೆ ಮರಳುತ್ತಿದ್ದಂತೆ ವೈಎಸ್ ವಿ ದತ್ತಾ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಮೂಡಿಗೆರೆಯಲ್ಲೂ ಪಕ್ಷಕ್ಕಾಗಿ ದಶಕಗಳ ಕಾಲ ಕೆಲಸ ಮಾಡಿದ ಮಾಜಿ ಶಾಸಕ ಬಿಬಿ ನಿಂಗಯ್ಯಗೆ ಕೈ ಕೊಟ್ಟು ಬಿಜೆಪಿಗೆ ರಾಜೀನಾಮೆ ನೀಡಿದ್ದ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿಗೆ ಮಣೆ ಹಾಕಿತ್ತು. ಒಟ್ಟಿನಲ್ಲಿ ಪಕ್ಷದ ಮುಖಂಡರ ಒಳ ರಾಜಕೀಯ ಕಾರ್ಯಕರ್ತರನ್ನು ಅತಂತ್ರ ಸ್ಥಿತಿಯತ್ತ ದೂಡಿರೋದಂತು ಸತ್ಯ.

Most Popular

Recent Comments