ಬೆಂಗಳೂರು: ರೈಲ್ವೆ ಕೆಲಸಗಳಿಗೆ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗ(ಎನ್ ಸಿಪಿಸಿಆರ್), ಒಂದು ವಾರದೊಳಗೆ ವಿಸ್ತ್ರೃತ ವರದಿಯನ್ನು ಸಲ್ಲಿಸುವಂತೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಆದೇಶವನ್ನು ನೀಡಿದೆ.
ಘಟನೆಗೆ ಸಂಬoಧಿಸಿದoತೆ ತನಿಖೆ ನಡೆಸಿ ತನಿಖಾ ವರದಿಯನ್ನು ಸಲ್ಲಿಸುವಂತೆ ಕೂಡ ರಾಮನಗರ ಜಿಲ್ಲಾಧಿಕಾರಿಗೆ ಸಹ ಆದೇಶವನ್ನು ಹೊರಡಿಸಿದೆ.
ಆಗಸ್ಟ್ ೨ರಂದು ಸುದ್ದಿ ಪತ್ರಿಕೆಯಲ್ಲಿ ಮಕ್ಕಳನ್ನು ಕಠಿಣ ಕೆಲಸಕ್ಕೆ ಬಳಸಿಕೊಂಡ ಬಗ್ಗೆ ವರದಿಯೊಂದು ಪ್ರಕಟವಾಗಿತ್ತು. ರೈಲ್ವೆ ಕಾಂಟ್ರಾಕ್ಟ್ ವಹಿಸಿರುವ ಒಬ್ಬರು ಕಲ್ಲು ಹೊರುವಂತಹ ಕಠಿಣ ಕೆಲಸಗಳನ್ನು ಬೆಂಗಳೂರು ರೈಲ್ವೆ ವಿಭಾಗದ ಶೆಟ್ಟಿಹಳ್ಳಿ ರೈಲ್ವೆ ನಿಲ್ದಾಣದ ರೈಲ್ವೆ ಹಳಿಯ ಬಳಿ ಮಕ್ಕಳಿಂದ ಮಾಡಿಸುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿತ್ತು.
ಪತ್ರಿಕೆಯಲ್ಲಿ ವರದಿ ಬಂದ ತಕ್ಷಣ ಅದನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಹಕ್ಕು ಆಯೋಗ ಆಗಸ್ಟ್ 3 ರಂದೇ ಇಲಾಖೆಯ ಪ್ರಧಾನ ವ್ಯವಸ್ಥಾಪಕರಿಗೆ ನೊಟೀಸ್ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸ್ಥಳದಲ್ಲಿ ಮೂವರು ಬಾಲಕಿಯರು ಮತ್ತು ನಾಲ್ವರು ಬಾಲಕರು ಸೇರಿದಂತೆ 7 ಮಂದಿ ಕೆಲಸ ಮಾಡುತ್ತಿರುವ ಬಗ್ಗೆ ಮಕ್ಕಳ ಹಕ್ಕು ಆಯೋಗ ಸ್ವಯಂ ಪ್ರೇರಿತ ಕೇಸನ್ನು ದಾಖಲಿಸಿಕೊಂಡು ನೊಟೀಸ್ ಜಾರಿ ಮಾಡಿದೆ.
ಇದಕ್ಕೆ ಮಕ್ಕಳ ಹಕ್ಕು ಆಯೋಗದ ರಿಜಿಸ್ಟ್ರಾರ್ ಅನು ಚೌಧರಿಯವರು ಸಹಿ ಮಾಡಿದ್ದಾರೆ. ನೈರುತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಕಳುಹಿಸಿರುವ ಆದೇಶದಲ್ಲಿ ಬಾಲ ಕಾರ್ಮಿಕತೆಯನ್ನು ತಡೆಯಲು ರೈಲ್ವೆ ಅಧಿಕಾರಿಗಳು ಹಾಕಿಕೊಂಡಿರುವ ನೀತಿ-ನಿಯಮಗಳು, ಮಾರ್ಗಸೂಚಿಗಳ ಕುರಿತು ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಆಯೋಗವು ಆದೇಶಿಸಿದೆ.
ಮತ್ತೊಂದು ನೊಟೀಸ್ ನ್ನು ರಾಮನಗರ ಜಿಲ್ಲಾಧಿಕಾರಿಗೆ ಕಳುಹಿಸಿದ್ದು, ಅದರಲ್ಲಿ ಘಟನೆಗೆ ಸಂಬoಧಿಸಿದoತೆ ತನಿಖೆಯನ್ನು ನಡೆಸಿ ಕೈಗೊಂಡಿರುವoತಹ ಕ್ರಮಗಳನ್ನು ಕುರಿತು ಮೂರು ದಿನಗಳೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಇತರ ಅಂಶಗಳ ಜೊತೆಗೆ, ಬಾಲ ನ್ಯಾಯ ಮತ್ತು ಬಾಲಾಪರಾಧಿ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986, ಮತ್ತು ಬಂಧಿತ ಕಾರ್ಮಿಕ ನಿರ್ಮೂಲನೆ ಕಾಯಿದೆ, 1976 ರ ಪ್ರಕಾರ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.