Sunday, December 3, 2023
Homeಮಲೆನಾಡುಚಿಕ್ಕಮಗಳೂರುCHIKKAMAGALURU RAIN REPORT: ಚಿಕ್ಕಮಗಳೂರು ಜಿಲ್ಲೆಯ ಹವಾಮಾನ ವರದಿ | ನಿಮ್ಮ ತಾಲೂಕಿನಲ್ಲಿ ಎಷ್ಟು ಮಳೆ...

CHIKKAMAGALURU RAIN REPORT: ಚಿಕ್ಕಮಗಳೂರು ಜಿಲ್ಲೆಯ ಹವಾಮಾನ ವರದಿ | ನಿಮ್ಮ ತಾಲೂಕಿನಲ್ಲಿ ಎಷ್ಟು ಮಳೆ ಆಗಿದೆ ಎಂದು ಇಲ್ಲಿ ತಿಳಿಯಿರಿ..

ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಮಳೆ ಚುರುಕಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗ್ತಿದೆ. ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗಳವಾರ ( 11.07.2023) ರಂದು ಎಷ್ಟು ಮಳೆ ಆಗಿದೆ ಎಂಬುದು ಈ ಕೆಳಗಿನಂತೆ ಇದೆ.

ಇದನ್ನೂ ಓದಿ;  ಶೃಂಗೇರಿ; ಕಿಗ್ಗಾ ನಾಡಕಚೇರಿಯನ್ನು ಶೃಂಗೇರಿಗೆ ವರ್ಗಾಯಿಸುವಂತೆ ಒತ್ತಾಯ

ಮೂಡಿಗೆರೆ ತಾಲೂಕು;
ಮೂಡಿಗೆರೆ- 6.8mm
ಕೊಟ್ಟಿಗೆಹಾರ- 7.8mm
ಗೋಣಿಬೀಡು- 5.0mm
ಜಾವ್ಲಿ-2.0mm
ಹೊಸಕೆರೆ13.4mm
ಬಿಲ್ಲುರ್-5.0mm

ಇದನ್ನೂ ಓದಿ; ಹೊಸ ಫೋನ್‌ ಖರೀದಿಸಿದ್ರೆ 2 KG ಟೊಮೆಟೊ ಉಚಿತ!;ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಕಳಸ ತಾಲೂಕು;
ಕಳಸ-2.2mm
ಹೀರೆಬೈಲು-5.0mm

ನರಸಿಂಹರಾಜಪುರ ತಾಲೂಕು;
ನರಸಿಂಹರಾಜಪುರ- 10.0mm
ಬಾಳೆಹೊನ್ನೂರು-3.6mm

ಕೊಪ್ಪ ತಾಲೂಕು;
ಕೊಪ್ಪ-3.4mm
ಹರಿಹರಪುರ-1.0mm
ಜಯಪುರ-3.8mm
ಬಸರಿಕಟ್ಟೆ-7.6mm
ಕಮ್ಮರಡಿ-6.2mm


ಇತ್ತೀಚಿನ ಜನಪ್ರಿಯ ಸುದ್ದಿಗಳು


ಶೃಂಗೇರಿ ತಾಲೂಕು;
ಶೃಂಗೇರಿ-3.6mm
ಕಿಗ್ಗಾ-10.8mm
ಕೆರೆಕಟ್ಟೆ-12.4mm

ಇನ್ನು ಶೃಂಗೇರಿ ತಾಲೂಕಿನಲ್ಲಿ ಮುಂದಿನ 5 ದಿನ ಯಾವಾ ರೀತಿ ಹವಮಾನ ಇರುತ್ತದೆ ಎಂದು ನೋಡುವುದಾದರೆ.

ಮುಂದಿನ 5 ದಿನಗಳಿ ಸಾಧಾರಣದಿಂದ ಅತಿಹೆಚ್ಚು ಮಳೆಯಾಗುವ ಸಂಭವವಿದೆ ಜೊತೆಗೆ ಮೋಡ ಕವಿದ ವಾತವರಣ ಹಾಗೂ ಗಾಳಿಯ ವೇಗ ಹೆಚ್ಚು ಇರುವ ಸಂಭವವಿದೆ.
ಗರಿಷ್ಠ ತಾಪಮಾನ (ಸಿ) 24.3- 29.8
ಕನಿಷ್ಠ ತಾಪಮಾನ (೪): 17.9-18.9
ಸಾಕ್ಷೇಪ ಆದ್ರತೆ: 1(%): 95-99
ಸಾಕ್ಷೇಪ ಆದ್ರತೆ: 2(%): 73-96

ಇದನ್ನೂ ಓದಿ; ಇಂದಿನ ಅಡಿಕೆ ಮಾರುಕಟ್ಟೆ ಹೇಗಿದೆ | ಬೆಟ್ಟೆ, ಗೊರಬಲು, ಸರಕು, ಇಡಿ | 11-07-2023

* ಶುಂಠಿ: ಕಳೆ ನಿರ್ವಹಣೆ ಮಾಡುವುದು, ಕಾಲುವೆ ಸರಿಪಡಿಸಿ ಮುಗ್ಗರಿಸುವುದು. ಬಿತ್ತನೆಯಾದ 45,90,135 & 180) ದಿನಗಳ ಅವಧಿಯಲ್ಲಿ ಜಿಂಜರ್ ಸ್ಪೆಷಲ್ ಅನ್ನು ಪ್ರತಿ ಲೀಟರ್ ನೀರಿಗೆ 5ಗ್ರಾಂ ಬೆರಸಿ ಸಿಂಪಡಿಸುವುದು.

* ಭತ್ತ: ಭತ್ತ ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡುವುದು ಸೂಕ್ತ. ಇದರಿಂದ ಬೀಜದಿಂದ ಹಾಗೂ ಮಣ್ಣಿನಿಂದ ಬರುವ ರೋಗಗಳನ್ನು ಹತೋಟಿ ಮಾಡುವುದಕ್ಕೆ ಹೆಚ್ಚು ಸಹಕಾರಿಯಾಗುತ್ತದೆ. ಬೆಂಕಿ ರೋಗ ನಿರೋಧಕ ತಳಿಗಳಾದ ಕೆ.ಪಿ.ಆರ್-1, ಕೆ.ಹೆಚ್.ಪಿ-13 ಅಥವಾ ತುಂಗಾ ತಳಿಗಳನ್ನು ಆಯ್ಕೆ ಮಾಡುವುದು ಸೂಕ್ತ. ಕೈ ನಾಟಿ ಮಾಡುವುದಾದರೆ 62 ಕೆ.ಜಿ ಪ್ರತಿ ಹೆಕ್ಟೇರಿಗೆ, (ನೇರ ಬಿತ್ತನೆಗಾಗಿ) (ಡ್ರಮ್ ಸೀಡರ್) -25 ಕೆ.ಜಿ/ಹೆ, ಯಾಂತ್ರೀಕೃತ ನಾಟಿಗಾಗಿ-40 ಕೆ.ಜಿ/ಹೆ ಬಿತ್ತನೆ ಬೀಜವನ್ನು ಆಯ್ಕೆ ಮಾಡುವುದು. ಹುಳಿಮಣ್ಣು ನಿರ್ವಹಣೆಗಾಗಿ ಕೃಷಿ ಸುಣ್ಣವನ್ನು ಎಕರೆಗೆ 200 ಕೆ.ಜಿ ಯಂತೆ ಎರಚುವುದು.

* ಅಡಿಕೆ; ಎಲೆ ಚುಕ್ಕಿ ಮತ್ತು ಇಂಗಾರ ಒಣಗುವಿಕೆ ತಡೆಗಟ್ಟಲು ಕಾರ್ಬೆಂಡೈಜಿಮ್+ಮ್ಯಾಂಕೋಜೆಬ್ 2 ಗ್ರಾಮ್ /ಲೀ ಅನ್ನು ಸಿಂಪಡಿಸುವುದು ಕೊಳೆ ರೋಗ ಹತೋಟಿ ಮಾಡಲು 1 ಬೋರ್ಡೋ ದ್ರಾವಣವನ್ನು ಸಿಂಪಡಿಸುವುದು ಅಥವಾ ಪೊಟ್ಯಾಷಿಯಂ ಫಾಸ್ಪೋನೇಟ್ 2 ಮಿ.ಲೀ/ಲೀ ನೀರಿನಲ್ಲಿ ಸಿಂಪಡಿಸಿ.

* ಕಾಳು ಮೆಣಸು 5 ಗ್ರಾಮ್ 19:19:19 ನ ಜೊತೆಗೆ 5 ಗ್ರಾಮ್ ಪೆಪ್ಪರ್ ಸ್ಪೆಷಲ್ ಅನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಸಿ ಸಿಂಪಡಿಸುವುದು ಸೂಕ್ತವಾಗಿದೆ.

* ತೆಂಗು: ಅಣಬೆರೋಗ -2ಎಂಎಲ್ ಹೆಕ್ಸಕೊನೊಜಾಲ್ ಅನ್ನು ಪ್ರತಿಮ ಲೀಟರ್ ನೀರಿಗೆ ಬೆರೆಸಿ ಗಿಡಕ್ಕೆ ಸುರಿಯುವು (10 ಲೀಟರ್ ಪ್ರತಿ ಮರಕ್ಕೆ ತೆಂಗಿನ ತೋಟಗಳಲ್ಲಿ ಸೂಕ್ತ ಅಂತರ ಬೆಳೆಗಳನ್ನು ಬೆಳೆಯುದರಿಂದ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

* ಈರುಳ್ಳಿ: ಬಿತ್ತನೆಯಾದ 40 ದಿನಗಳ ನಂತರ ಕಳೆ ಕೀಳುವುದು. ಬಿತ್ತನೆಯಾದ 45,60 & 90 ದಿನಗಳ ಅವಧಿಯಲ್ಲಿ ತರಕಾರಿ ಸ್ಪೆಷಲ್ ಅನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರಸಿ ಸಿಂಪಡಿಸುವುದು.

* ಬಾಳೆ: ತೋಟದಲ್ಲಿ ಸ್ವಚ್ಛತೆಯನ್ನು ಕಾಪಡಬೇಕು. ಬಸಿಗಾಲುವೆ ವ್ಯವಸ್ಥೆಯನ್ನು ಕಲ್ಪಿಸುವುದು, ಬಾಳೆ ಸ್ಪೆಷಲ್ ಅನ್ನು 16 ತಿಂಗಳ ನಂತರ ಪ್ರತಿ ತಿಂಗಳಿಗೊಮ್ಮೆ (05 ಗ್ರಾಂ/ಲೀ) ನಂತೆ 1 ಎಕರೆಗೆ 1 ಬ್ಯಾರಲಷ್ಟು ಸಿಂಪಡಿಸಬೇಕು) ಹಾಗೂ ಗೊನೆಗಳು ಪಕ್ವಗೊಂಡಿದ್ದರೆ 2 ಪೊಟ್ಯಾಷಿಯಂ ನೈಟ್ರೆಟ್ ಅನ್ನು ಸಿಂಪಡಿಸುವುದು. ಬಾಳೆ ಗಿಡದ ಸುತ್ತಲೂ ಬರುವ ಸಣ್ಣ ಗಿಡಗಳನ್ನು ಕತ್ತರಿಸಿ ಬುಡಕ್ಕೆ ಹಾಕುವುದು.

* ಶೇಂಗಾ: ಬಿತ್ತನೆ ಸಮುಯದಲ್ಲಿ ಪ್ರತಿ ಎಕರೆಗೆ 2(ಕೆಜಿ ಜಿಪ್ಸಂ ಅನ್ನು ಹಾಕುವುದು ಸೂಕ್ತ ಅಧಿಕ ಇಳುವರಿ ನೀಡುವ ಜಿ-252, ಕದ್ರಿ-1&9 ಹಾಗೂ ಟಿ.ಎಮ್.ವಿ-2 ತಳಿಗಳನ್ನು ಆಯ್ಕೆ ಮಾಡುವುದು ಸೂಕ್ತ. ಬಿತ್ತನೆ ಮಾಡಿದ 15 ದಿನಗಳ ನಂತರ 10 ದಿನಗಳ ಅಂತರದಲ್ಲಿ ಅಂತರ ಬೇಸಾಯ ಮಾಡುವುದು (ಕುಂಟೆ ಹೊಡೆಯುವುದು).

* ಹಸು: ಆಹಾರ ಹಾಗೂ ರುಚಿಯಾದ ಕುಡಿಯುವ ನೀರಿನ ಜೊತೆಗೆ ಉಪ್ಪನ್ನು ಬೆರಸಿ ಕೊಡುವುದು. ದುಡಿಯುವ ಎತ್ತು, ಜಂತುನಾಶಕ ಔಷಧಿಯನ್ನು ನೀಡುವುದು ಮತ್ತು ಸಮತೋಲನ ಆಹಾರ ನೀಡುವುದು, ಕುರಿ ಮತ್ತು ಮೇಕೆ ಶುಚಿಯಾದ ಕುಡಿಯುವ ನೀರನ್ನು ಒದಗಿಸುವುದು ಜಂತುನಾಶಕ ಔಷಧಿಯನ್ನು ನೀಡುವುದು ಮಧ್ಯಾಹ್ನದ ಹೊತ್ತಿನಲ್ಲಿ ಆದಷ್ಟು ನೆರಳಿನಲ್ಲಿ ಮೇಯಿಸುವುದು ಒಳ್ಳೆಯದು.

Most Popular

Recent Comments