Chikkamagaluru; (ನ್ಯೂಸ್ ಮಲ್ನಾಡ್ ವರದಿ) ಮಗಳ ಅನುಮಾನಾಸ್ಪದ ಸಾವಿನ ನ್ಯಾಯಕ್ಕಾಗಿ ಕುಟುಂಬವೊಂದು ಎಸ್ಪಿ ಕಚೇರಿಯ ಮುಂದೆ ಕಣ್ಣೀರಿಟ್ಟು ಗೋಳಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಇದನ್ನೂ ಓದಿ; ಹಿಂದೂ ದೇಗುಲಗಳೇ ಟಾರ್ಗೆಟ್; 150 ವರ್ಷ ಹಳೆಯ ಹಿಂದೂ ದೇವಾಲಯ ನೆಲಸಮ
ಕಡೂರು ನಗರದಲ್ಲಿ 31 ವರ್ಷದ ರುಕ್ಕಿಣಿ ಅನುಮಾನಸ್ಪದ ಸಾವನ್ನಪ್ಪಿದ್ದರು. ಆದರೆ ಕಡೂರು ಪೊಲೀಸರು ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮಂಡ್ಯದಿಂದ ಬಂದ ರುಕ್ಕಿಣಿ ಕುಟುಂಬಸ್ಥರು ಎಸ್ ಪಿ ಕಚೇರಿ ಎದುರು ಗೋಳಾಟ ನಡೆಸಿದ್ದಾರೆ.
ಇದನ್ನೂ ಓದಿ; ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 17-07-2023
Chikkamagaluru; ಮೂಲತಃ ಮಂಡ್ಯ ಜಿಲ್ಲೆ ರಾಗಿ ಮುದ್ದನಹಳ್ಳಿ ಮೂಲದ ರುಕ್ಕಿಣಿ ಅವರನ್ನು ಕಳೆದ 14 ವರ್ಷಗಳ ಹಿಂದೆ ಕಡೂರಿನ ಕಣ್ಣನ್ ಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಆದಾಗಿನಿಂದಲೂ ಅತ್ತೆ, ಮಾವ, ಗಂಡನಿಂದ ಕಿರುಕುಳ ನೀಡುವ ಆರೋಪವಿತ್ತು. ಭಾನುವಾರ ಮಧ್ಯಾಹ್ನ 12 ಗಂಟೆಗೆ ರುಕ್ಕಿಣಿ ಸಾವನ್ನಪ್ಪಿದ್ದಾರೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು
- ನರಿಗಳು ಘೀಳಿಟ್ರೆ ಕಾಡಿನ ರಾಜ ಬೆದರೋದು ಉಂಟಾ?; ಜೆಡಿಎಸ್- ಬಿಜೆಪಿ ಮೈತ್ರಿ: ಸಿ.ಟಿ. ರವಿ ಹೇಳಿದ್ದೇನು ಗೊತ್ತಾ?
- ಚಿಕ್ಕಮಗಳೂರು: ಕಾಫಿನಾಡ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
- ನೇತ್ರಾವತಿ ಪೀಕ್ ಚಾರಣಕ್ಕೆ 300 ಮಂದಿಗಷ್ಟೇ ಅವಕಾಶ; ಪ್ರವಾಸಿಗರಿಗೆ ನಿರಾಸೆ
ಗಂಡ ಕಣ್ಣನ್ ಪತ್ನಿಯನ್ನು ಕೊಲೆ ಮಾಡಿದ್ದಾನೆ, ಆದರೆ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಯರು ಆರೋಪಿಸುತ್ತಿದ್ದಾರೆ ರುಕ್ಷ್ಮಿಣಿ ಸಾವಿನ ಬಳಿಕ ಇಬ್ಬರು ಮಕ್ಕಳು ಕಣ್ಮರೆಯಾಗಿದ್ದು, ಮಕ್ಕಳನ್ನು ಹುಡುಕಿಕೊಟ್ಟು, ಸಾವಿನ ನ್ಯಾಯಕ್ಕಾಗಿ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-17.07.2023
ರುಕ್ಮಿಣಿ ಸಾವಿನ ನಂತರ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಣ್ಣನ್ ಆಡಿಯೋ ಲಭ್ಯವಾಗಿದೆ ಎಂದು ಆರೋಪಿಸಿರುವ ಪೋಷಕರು ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು: ಕಾಫಿನಾಡ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ; ಆರೇ ತಿಂಗಳಿಗೆ ಬಂದ ಟೂರಿಸ್ಟ್ ಎಷ್ಟು ಗೊತ್ತಾ..?
chikkamagaluru tourist: ಚಿಕ್ಕಮಗಳೂರು (ನ್ಯೂಸ್ ಮಲ್ನಾಡ್ ವರದಿ): ಕಾಫಿನಾಡು ಕೇವಲ ಜಿಲ್ಲೆಯಲ್ಲ. ಧಾರ್ಮಿಕವಾಗಿ ಬಂದ್ರಂತು ಒಂದೆಡೆ ಅನ್ನ ನೀಡೋ ಅನ್ನದಾತೆ. ಇನ್ನೊಂದೆಡೆ ವಿದ್ಯೆ ನೀಡೋ ವಿದ್ಯಾದೇವತೆ. ಪ್ರವಾಸಿಗರಿಗಂತೂ ನಿಂತಲ್ಲೆ ಮೈಮರೆಸೋ ಹಾಟ್ ಸ್ಪಾಟ್. ಇಲ್ಲಿನ ಸುಂದರ ರಮಣೀಯ ತಾಣಗಳು ವರ್ಷಪೂರ್ತಿ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಲೇ ಇರುತ್ತೆ. ಪ್ರತಿ ವರ್ಷ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ.
ಇದನ್ನೂ ಓದಿ; ಜಯಪುರ: ಡಿಶ್ ರಿಪೇರಿ ಬಶೀರನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಹೊಡೆದ ಜನ
chikkamagaluru tourist: ದಾಖಲೆಯ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ:
ಹೌದು ಪ್ರತಿ ವರ್ಷ ಕಾಫಿನಾಡಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತೆ. ಆದರೆ ಈ ವರ್ಷ ಅಂತೂ ಆರೇ ತಿಂಗಳಿಗೆ 30 ಲಕ್ಷ ಪ್ರವಾಸಿಗರು ಭೇಟಿ ನೀಡಿರುವುದು ಪ್ರವಾಸೋದ್ಯಮ ಇಲಾಖೆ ಅಂಕಿ ಅಂಶಗಳಿಂದ ಹೊರಬಂದಿದೆ.
ಗ್ಯಾರಂಟಿ ಯೋಜನೆಯದ್ದು ಇದೆ ಪಾಲು:
ಇಲ್ಲಿನ ಪ್ರಕೃತಿ ಸೌಂದರ್ಯವನ್ನ ಅನುಭವಿಸೋಕೆ ವರ್ಷ ಪೂರ್ತಿ ಪ್ರವಾಸಿಗರು ಹರಿದು ಬರ್ತಾರೆ. ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜೂನ್ ಒಂದೇ ತಿಂಗಳಿಗೆ ಜಿಲ್ಲೆಗೆ ಏಳು ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. 2023ರ ಜನವರಿಯಿಂದ ಜೂನ್ 30 ರವರೆಗೆ ಸುಮಾರು 30 ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು ಈ ವರ್ಷದ ಕೊನೆಗೆ ಜಿಲ್ಲೆಗೆ ಭೇಟಿ ನೀಡಿರೋ ಪ್ರವಾಸಿಗರ ಸಂಖ್ಯೆ ಕೋಟಿ ದಾಟೋದ್ರಲ್ಲಿ ಅನುಮಾನವಿಲ್ಲ. ಕಾಫಿನಾಡಿಗೆ ಪ್ರವಾಸಿಗರ ದಂಡು ಹರಿದು ಬರಲು ಒಂದು ಕಾರಣ ಗ್ಯಾರಂಟಿ ಸರ್ಕಾರದ ಶಕ್ತಿಯ ಯೋಜನೆಯ ಪಾಲು ಕೂಡ ಒಂದಷ್ಟು ಇದೆ ಅಂತನೆ ಹೇಳಬಹುದು.