Sunday, June 4, 2023
Homeಮಲೆನಾಡುಮಲೆನಾಡಿನಲ್ಲಿ ಮಳೆ ಸಮೇತ ಸಿಡಿಲಿನ ಆರ್ಭಟ : ಲಕ್ಷಾಂತರ ಮೌಲ್ಯದ ಗೃಹಪಯೋಗಿ ವಸ್ತುಗಳು ನಾಶ

ಮಲೆನಾಡಿನಲ್ಲಿ ಮಳೆ ಸಮೇತ ಸಿಡಿಲಿನ ಆರ್ಭಟ : ಲಕ್ಷಾಂತರ ಮೌಲ್ಯದ ಗೃಹಪಯೋಗಿ ವಸ್ತುಗಳು ನಾಶ

ಚಿಕ್ಕಮಗಳೂರು: ಭಾರೀ ಗುಡುಗು-ಸಿಡಿಲು, ಮಳೆ ಅಬ್ಬರದ ವೇಳೆ ಸಿಡಿಲು ಬಡಿದು ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನಾಶವಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಮಳೆ ಬಹುತೇಕ ಕ್ಷೀಣಿಸಿತ್ತು. ಮೂಡಿಗೆರೆ, ಕಳಸ ಹಾಗೂ ಶೃಂಗೇರಿ ತಾಲೂಕಿನ ಘಟ್ಟ ಪ್ರದೇಶದಲ್ಲಿ ಮಲೆನಾಡಲ್ಲಿನ ಮಳೆಗಾಲದ ಮಳೆ ಸುರಿಯುತ್ತಿತ್ತು. ಆದರೆ ನಗರ ಪ್ರದೇಶದಲ್ಲಿ ಮಳೆ ಪ್ರಮಾಣ ಸ್ವಲ್ಪ ತಗ್ಗಿತ್ತು. ಭಾನುವಾರ ಸಂಜೆ ಆರಂಭವಾದ ಮಳೆ ಅಬ್ಬರ ಮಲೆನಾಡಿಗರಿಗೆ ಮತ್ತೆ ಮಳೆಗಾಲದ ಮಳೆಯನ್ನು ನೆನಪು ಮಾಡಿದೆ. ಈ ವೇಳೆ ಮಳೆ ಜೊತೆ ಭಾರೀ ಗುಡುಗು-ಸಿಡಿಲು ಬಡಿದಿದ್ದರಿಂದ ತ್ರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂಲರಹಳ್ಳಿಯ ರವೀಶ್ ರವರ ಮನೆಯ ಲಕ್ಷಾಂತರ ಮೌಲ್ಯದ ಗೃಹಪಯೋಗಿ ವಸ್ತುಗಳು ನಾಶವಾಗಿವೆ.

ಸಿಡಿಲಿನ ಅಬ್ಬರಕ್ಕೆ ಮನೆಯ ಗೋಡೆಗಳು ಕೂಡ ಒಡೆದು ಹೋಗಿವೆ. ಟಿವಿ, ಫ್ರಿಡ್ಜ್ ಹಾಳಾಗಿದೆ. ಮನೆಯ ವಿದ್ಯುತ್ ಸಂಪರ್ಕದ ವೈರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು, ಸ್ವಿಚ್ ಬೋರ್ಡ್ಗಳು ಕೂಡ ಒಡೆದು ಹೋಗಿವೆ. ಮಳೆ ಹಾಗೂ ಗುಡುಗು-ಸಿಡಿಲಿನ ಅಬ್ಬರಕ್ಕೆ ಮನೆಯವರು ಮನೆಯಿಂದ ಹೊರಬಂದಿದ್ದರಿoದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಒಂದು ವೇಳೆ ಎಲ್ಲರೂ ಮನೆಯಲ್ಲೇ ಇದ್ದರೆ ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಎಲ್ಲರೂ ಮನೆಯಿಂದ ಹೊರಗಿದ್ದುದ್ದರಿಂದ ಜೀವ ಉಳಿದಂತಾಗಿದೆ. ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ಶಾಂತನಾಗಿದ್ದ ವರುಣದೇವ ಮತ್ತೆ ಅಬ್ಬರಿಸುತ್ತಿದ್ದಾನೆ. ಮಳೆಯ ಅಬ್ಬರವನ್ನು ಕಂಡ ಮಲೆನಾಡಿಗರು ಮತ್ತೆ ಆತಂಕಕ್ಕೀಡಾಗಿದ್ದಾರೆ.

 

Most Popular

Recent Comments